ಯೋಗದಿಂದ ಆಹ್ಲಾದಕಾರಿ ಜೀವನಾನುಭವ: ಜಗ್ಗಿ ವಾಸುದೇವ
ಜೂನ್ ೨೧ ರ ಅಂತರಾಷ್ಟ್ರೀಯ ಯೋಗ ದಿನದ ಸಂಭ್ರಮಾಚರಣೆಗಳಿಗೂ ಮೊದಲು ನಡೆದ ಪೂರ್ವಭಾವಿ ಕಾರ್ಯಕ್ರಮವೊಂದರಲ್ಲಿ ಭಾರತದ ಯೋಗಿ ಮತ್ತು ಮಾನವತಾವಾದಿ

ವಾಶಿಂಗ್ಟನ್: ಜೂನ್ ೨೧ ರ ಅಂತರಾಷ್ಟ್ರೀಯ ಯೋಗ ದಿನದ ಸಂಭ್ರಮಾಚರಣೆಗಳಿಗೂ ಮೊದಲು ನಡೆದ ಪೂರ್ವಭಾವಿ ಕಾರ್ಯಕ್ರಮವೊಂದರಲ್ಲಿ ಭಾರತದ ಯೋಗಿ ಮತ್ತು ಮಾನವತಾವಾದಿ ಸದ್ಗುರು ಜಗ್ಗಿ ವಾಸುದೇವ ಅವರು ಯೋಗದ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿ ಯೋಗ ಜೀವನಕ್ಕೆ ಆಹ್ಲಾದಕಾರಿ ಅನುಭವ ನೀಡುತ್ತದೆ ಎಂದಿದ್ದಾರೆ.
"ನಾವು ಅತಿ ಹೆಚ್ಚು ಸೌಕರ್ಯಗಳು ಮತ್ತು ಅನುಕೂಲಗಳ ಯುಗದಲ್ಲಿ ಬದುಕುತ್ತಿರಬಹುದು, ಆದರೆ ನಮ್ಮದು ಹೆಚ್ಚು ಸಂತಸದಾಯಕ-ಶಾಂತಿದಾಯಕ ಪೀಳಿಗೆಯೇನಲ್ಲ" ಎಂದು ಅಮೆರಿಕಾದ ಭಾರತೀಯ ರಾಯಭಾರ ಕಚೇರಿಯಲ್ಲಿ 'ಆಧುನಿಕ ಜೀವನದಲ್ಲಿ ಯೋಗದ ಮಹತ್ವ' ಎಂಬ ಭಾಷಣದಲ್ಲಿ ಸದ್ಗುರು ಹೇಳಿದ್ದಾರೆ.
"ಇಂದು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ನಮ್ಮ ಅನುಕೂಲಕ್ಕಾಗಿ ಬಳಸುತ್ತಿದ್ದೇವೆ ಹಾಗೆಯೆ ಯೋಗದ ತಂತ್ರಜ್ಞಾನವನ್ನು ನಮ್ಮ ಆಂತರಿಕ ಉನ್ನತಿಗಾಗಿ ಬಳಸಬೇಕು" ಎಂದು ವಾಸುದೇವ್ ಕರೆ ಕೊಟ್ಟಿದ್ದಾರೆ.
ಇಂದು ಸುಮಾರು ೨ ಬಿಲಿಯನ್ ಜನರು ಒಂದಲ್ಲ ಒಂದು ರೀತಿಯಲ್ಲಿ ಯೋಗಾಭ್ಯಾಸ ಮಾಡುತ್ತಿದ್ದಾರೆ. ಅದು ಇನ್ನೂ ಹೆಚ್ಚಬೇಕು ಎಂದು ವಾಸುದೇವ್ ಕರೆ ಕೊಟ್ಟಿದ್ದಾರೆ.
ಜೂನ್ ೨೧ ರ ಅಂತರಾಷ್ಟ್ರೀಯ ಯೋಗ ದಿನದ ಸಂಭ್ರಮಾಚರಣೆಗಳಿಗೂ ಮೊದಲು ಭಾರತೀಯ ರಾಯಬಾರಿ ಕಚೇರಿ ಯೋಗದ ಬಗ್ಗೆ ಪೂರ್ವಭಾವಿಯಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


