ಎನರ್ಜಿ ಡ್ರಿಂಕ್ಸ್ ಸೇವನೆಯಿಂದ ಅಧಿಕ ರಕ್ತದೊತ್ತಡ
ದೇಹಕ್ಕೆ ಚೈತನ್ಯ ನೀಡುವ ಪಾನೀಯಗಳು ಅಧಿಕ ರಕ್ತದೊತ್ತಡಕ್ಕೆ ಕಾರಣ ಎಂದು ಅಧ್ಯಯನ ತಂಡವೊಂದು ಸಾಬೀತು ಪಡಿಸಿದೆ...

ದೇಹಕ್ಕೆ ಚೈತನ್ಯ ನೀಡುವ ಪಾನೀಯಗಳು ಅಧಿಕ ರಕ್ತದೊತ್ತಡಕ್ಕೆ ಕಾರಣ ಎಂದು ಅಧ್ಯಯನ ತಂಡವೊಂದು ಸಾಬೀತು ಪಡಿಸಿದೆ. ದೇಹ ದಣಿದಾಗ ಬೇಗನೆ ಉತ್ಸಾಹ ಸಿಗಲು ಯುವ ಜನತೆ ಎನರ್ಜಿ ಡ್ರಿಂಕ್ಸ್‌ಗಳ ಮೊರೆ ಹೋಗುತ್ತಿದ್ದು, ಇದು ಆರೋಗ್ಯಕ್ಕೆ ಉತ್ತಮವಲ್ಲ.
19 ಮತ್ತು 40ರ ಹರೆಯದ ನಡುವೆ ಇರುವ 25 ಆರೋಗ್ಯವಂತ ವ್ಯಕ್ತಿಗಳನ್ನು ಅಮೆರಿಕದ ಮಯೋ ಕ್ಲಿನಿಕ್‌ನ ವಿಜ್ಞಾನಿಗಳು ಅಧ್ಯಯನಕ್ಕೊಳಪಡಿಸಿದ್ದರು.
ಈ ರೀತಿಯ ಪಾನೀಯಗಳನ್ನು ಸೇವಿಸುವ ವ್ಯಕ್ತಿಗಳಿಗೆ ಹೃದಯ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಅಧಿಕವಾಗಿರುತ್ತದೆ.
ಇಂಥಾ ಪಾನೀಯಗಳನ್ನು ಸೇವಿಸುವ ಮುನ್ನ ಮತ್ತು ಸೇವಿಸಿದ ನಂತರ ಈ ವ್ಯಕ್ತಿಗಳನ್ನು ಆರೋಗ್ಯ ತಪಾಸಣೆಗೊಳಪಡಿಸಿದಾಗ ಇವರ ರಕ್ತದೊತ್ತಡದಲ್ಲಿ ಭಾರೀ ಬದಲಾವಣೆಗಳು ಕಂಡು ಬಂತು ಎಂದು ಅಧ್ಯಯನ ತಂಡ ಹೇಳಿದೆ.
ಅಮೆರಿಕದ ಕಾಲೇಜ್ ಆಫ್ ಕಾರ್ಡಿಯಾಲಜಿ ವಾರ್ಷಿಕ ಸಮ್ಮೇಳನದಲ್ಲಿ ಈ ಅಧ್ಯಯನ ವರದಿ ಮಂಡಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


