ಆರೋಗ್ಯ-ಜೀವನಶೈಲಿ

ಶ್ವಾಸಕೋಶ ಸಮಸ್ಯೆಯಿಂದ ಭಾರತದಲ್ಲಿ ಪ್ರತಿ ವರ್ಷ 1 ಮಿಲಿಯನ್ ಜನರ ಸಾವು

ಭಾರತದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯದಿಂದ ಶ್ವಾಸಕೋಶ ಸಮಸ್ಯೆಗಳು ಹೆಚ್ಚುತ್ತಿದ್ದು, ಪ್ರತಿ ವರ್ಷ 1 ಮಿಲಿಯನ್ ಜನರು ಸಾವನ್ನಪ್ಪುತ್ತಿದ್ದಾರೆ.

ಶ್ವಾಸಕೋಶ ಸಮಸ್ಯೆಯಿಂದ ಭಾರತದಲ್ಲಿ ಪ್ರತಿ ವರ್ಷ 1 ಮಿಲಿಯನ್ ಜನರ ಸಾವು
ಶ್ವಾಸಕೋಶ
Published On :

ನವದೆಹಲಿ: ಭಾರತದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದಿಂದ ಶ್ವಾಸಕೋಶ ಸಮಸ್ಯೆಗಳು ಹೆಚ್ಚುತ್ತಿದ್ದು, ಪ್ರತಿ ವರ್ಷ 1 ಮಿಲಿಯನ್ ಜನರು ಸಾವನ್ನಪ್ಪುತ್ತಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ(WHO) ಪ್ರಕಟಿಸಿರುವ ವರದಿ, ಭಾರತದಲ್ಲಿ ಶೇ.11 ರಷ್ಟು ಜನರು ಶ್ವಾಸಕೋಶ ಸಮಸ್ಯೆಯಿಂದ ಕೊನೆಯುಸಿರೆಳೆಯುತ್ತಿದ್ದಾರೆ. ಇದಕ್ಕೆ ವಾಯುಮಾಲಿನ್ಯ ಹೆಚ್ಚುತ್ತಿರುವುದೇ ಕಾರಣ ಎಂದಿದೆ. ಸಿಗರೇಟ್ ಸೇದುವುದರಿಂದಲೂ ಸಹ ಹಲವರು ಶ್ವಾಸಕೋಶ ಸಮಸ್ಯೆ ಎದುರಿಸುತ್ತಿದ್ದು ಸಾವಿನ ಅಂಕಿ ಅಂಶದಲ್ಲಿ ಇದೂ ಸೇರಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯೂ ಸಹ ಈ ಬಗ್ಗೆ ಸಂಶೋಧನೆ ನಡೆಸಿದ್ದು, ಕ್ಷಿಪ್ರಗತಿಯಲ್ಲಿ ನಗರೀಕರಣದತ್ತ ಸಾಗುತ್ತಿರುವ ಆಂಧ್ರಪ್ರದೇಶದ ವಿಜಯವಾಡದಲ್ಲಿ ಹೆಚ್ಚಿನ ವಾಯುಮಾಲಿನ್ಯ ಉಂಟಾಗುತ್ತಿದ್ದು ಆಸ್ತಮಾ ಸೇರಿದಂತೆ ಹಲವು ಶ್ವಾಸಕೋಶದ ಸಮಸ್ಯೆಗಳು ಉಲ್ಬಣಿಸುತ್ತಿವೆ ಎಂದು ವರದಿ ನೀಡಿದೆ.

ಮಾಲಿನ್ಯದಿಂದ ಉಂಟಾಗುತ್ತಿರುವ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುವುದಕ್ಕೆ ಅತ್ಯಗತ್ಯವಾಗಿರುವ ಜಾಗೃತಿ ಮೂಡುತ್ತಿಲ್ಲ ಎಂದು ಚೆನ್ನೈ ಗ್ಲೋಬಲ್ ಹೆಲ್ತ್ ಸಿಟಿಯ ಹೃದಯ ಮತ್ತು ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸಕರೊಬ್ಬರು  ಹೇಳಿದ್ದಾರೆ.  ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಲ್ಬಣಿಸಿದರೆ ಶಸ್ತ್ರಚಿಕಿತ್ಸೆ ಮಾಡುವುದೊಂದೇ ಪರಿಹಾರ, ಎಷ್ಟೋ ಪ್ರಕರಣಗಳಲ್ಲಿ ಶ್ವಾಸಕೋಶ ಕಸಿ ಮಾಡುವ ಸಂದರ್ಭವೂ ಎದುರಾಗಿದೆ ಎಂದು  ಶಸ್ತ್ರಚಿಕಿತ್ಸಕ ಸುಬ್ರಮಣಿ ತಿಳಿಸಿದ್ದಾರೆ. ಉಳಿದೆಲ್ಲಾ ಅಂಗಗಳ ಕಸಿಗಿಂತಲೂ ಶ್ವಾಸಕೋಶ ಕಸಿ ಸಂಕೀರ್ಣ ಪ್ರಕ್ರಿಯೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.