ಹೃದಯ ಸಂಬಂಧಿ ಸಮಸ್ಯೆಗಳನ್ನು ದೂರವಿಡಲು ಚಾಕೊಲೆಟ್ ತಿನ್ನಿ!
ನೀವು ಹೃದಯ ಸಂಬಂಧಿ ಸಮಸ್ಯೆಗಳಿಂದ ದೂರವಿರಬೇಕಾ ಹಾಗಾದರೆ ಚಾಕೊಲೆಟ್ ತಿನ್ನಿ!

ವಾಷಿಂಗ್ ಟನ್: ನೀವು ಹೃದಯ ಸಂಬಂಧಿ ಸಮಸ್ಯೆಗಳಿಂದ ದೂರವಿರಬೇಕಾ ಹಾಗಾದರೆ ಚಾಕೊಲೆಟ್ ತಿನ್ನಿ! ಪ್ರತಿದಿನವೂ 100 ಗ್ರಾಂ ನಷ್ಟು ಚಾಕೊಲೆಟ್ ತಿಂದರೆ ಹೃದ್ರೋಗ ಹಾಗೂ ಪಾರ್ಶ್ವವಾಯುವಿನಿಂದ ದೂರವಿರಬಹುದು ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.
ಇ.ಪಿ.ಐ.ಸಿ ನಾರ್ಫೋಕ್ ಸಹಭಾಗಿಗಳು ನಡೆಸಿರುವ 12 ವರ್ಷಗಳ ಅಧ್ಯಯನದಲ್ಲಿ ಚಾಕೊಲೆಟ್ ತಿಂದವರು ಹೃದಯ ಸಂಬಂಧಿತ ಸಮಸ್ಯೆ ಹಾಗೂ ಪಾರ್ಶ್ವವಾಯುವಿನ ಸಮಸ್ಯೆಗೀಡಾಗುವ ಸಾಧ್ಯತೆ ಕಡಿಮೆ ಇದೆ ಎಂಬುದನ್ನು ಕಂಡುಕೊಂಡಿದ್ದಾರೆ.
ಚಾಕೊಲೆಟ್ ತಿನ್ನದೇ ಇದ್ದವರು ಹೃದ್ರೋಗಕ್ಕೆ ಸಂಬಂಧಿಸಿದಂತೆ ಶೇ.11 ರಷ್ಟು ಕಡಿಮೆ ಅಪಾಯ ಎದುರಿಸುತ್ತಾರೆ ಹಾಗೂ ಸಂಬಂಧಿಸಿದಂತೆ ಸಾವಿಗೆ ಶೇ.25 ರಷ್ಟು ಕಡಿಮೆ ಅಪಾಯವನ್ನು ಎದುರಿಸುತ್ತಾರೆ ಎಂದು ಅಧ್ಯಯನ ವರದಿ ತಿಳಿಸಿದೆ.
ಅಂತೆಯೇ ಅತಿ ಹೆಚ್ಚು ಚಾಕೊಲೆಟ್ ತಿನ್ನುವವರು, ಇತರ ಸಂಭಾವ್ಯ ಅಪಾಯಕಾರಿ ಅಂಶಗಳನ್ನು ಪರಿಗಣಿಸಿದರೂ ಪಾರ್ಶ್ವವಾಯುವಿಗೆ ಸಂಬಂಧಿಸಿದಂತೆ ಶೇ.23 ರಷ್ಟು ಕಡಿಮೆ ಅಪಾಯ ಎದುರಿಸುತ್ತಾರಂತೆ. ಅತಿ ಹೆಚ್ಚು ಚಾಕೊಲೆಟ್ ಸೇವೆನೆ ಮಾಡುವುದರಿಂದ ಮುಂದೆ ಎದುರಾಗಬಹುದಾದ ಹೃದಯ ಸಂಬಂಧಿತ ಸಮಸ್ಯೆಗಳನ್ನು ದೂರವಿಡಬಹುದಾಗಿದೆ.
ಪ್ರಸ್ತುತ ಹೃದಯ ಸಂಬಂಧಿ ಕಾಯಿಲೆ ಎದುರಿಸುತ್ತಿರುವವರು ಚಾಕೊಲೆಟ್ ನಿಂದ ದೂರವಿರಬೇಕು ಎಂಬ ಅಂಶವೇನು ಅಧ್ಯಯನದಲ್ಲಿ ಕಂಡುಬಂದಿಲ್ಲ ಎಂದು ವರದಿ ತಿಳಿಸಿದೆ. ಚಾಕೊಲೆಟ್ ತಿಂದರೆ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ ಎಂಬ ವರದಿ ಜರ್ನಲ್ ಹಾರ್ಟ್ ನಲ್ಲಿ ಪ್ರಕಟವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


