ದೀರ್ಘಾಯುಷಿಯಾಗಲು ಪ್ರತಿದಿನ ಕಡಲೆ ಬೀಜ ಸೇವಿಸಿ: ಸಂಶೋಧನಾ ವರದಿ
ಬಡವರ ಬಾದಾಮಿ ಎಂದೇ ಫೇಮಸ್ ಆಗಿರುವ ಕಡಲೆ ಬೀಜ ಸೇವನೆ ಆರೋಗ್ಯಕ್ಕೆ ಒಳ್ಳೆಯದಂತೆ.

ಮೆಲ್ಬೋರ್ನ್: ಬಡವರ ಬಾದಾಮಿ ಎಂದೇ ಫೇಮಸ್ ಆಗಿರುವ ಕಡಲೆ ಬೀಜ ಸೇವನೆ ಆರೋಗ್ಯಕ್ಕೆ ಒಳ್ಳೆಯದಂತೆ. ಪ್ರತಿನಿತ್ಯ.ಕಡಲೆ ಬೀಜವನ್ನು ನಿಯಮಿತವಾಗಿ ಸ್ವಲ್ಪ ಪ್ರಮಾಣದಲ್ಲಿ ತಿನ್ನುತ್ತಾ ಬಂದರೆ ಮಾರಕ ರೋಗ ಕ್ಯಾನ್ಸರ್ ಕಾಯಿಲೆಯಿಂದ ಸಂಭವಿಸುವ ಅಕಾಲಿಕ ಮರಣದಿಂದ ತಪ್ಪಿಸಿಕೊಳ್ಳಬಹುದು. ಜೊತೆಗೆ ಹೃದಯ ಸಂಬಂಧಿ ರೋಗಗಳಿಗೆ ಕಡಲೇ ಬೀಜ ರಾಮಭಾಣವಂತೆ ಈಗಂತ ಸಂಶೋಧನೆ ನಡೆಸಿದ ಮೆಲ್ಬೋರ್ನ್ ನ ಮ್ಯಾಸ್ಟ್ರಿಚ್ ವಿಶ್ವವಿದ್ಯಾನಿಲಯ ನಡೆಸಿದ ಸಂಶೋಧನೆಯಿಂದ ತಿಳಿದು ಬಂದಿದೆ.
ನಮ್ಮಲ್ಲಿ ಕಡಲೆಕಾಯಿ ಬೀಜ ತಿಂದರೆ ಕೊಲೆಸ್ಟ್ರಾಲ್ ಬರುತ್ತೆ, ಬಿ.ಪಿ ಬರುತ್ತೆ ಅಂತಾ ಮೂಗು ಮೂರಿಯುವವರೇ ಹೆಚ್ಚು. ಆದರೆ ಪ್ರತಿ ದಿನ ಸುಮಾರು 10 ಗ್ರಾಂ ನಷ್ಟು ಕಡಲೆಕಾಯಿ ಬೀಜ ತಿನ್ನುವುದರಿಂದ ಮಾರಣಾಂತಿಕ ಕಾಯಿಲೆಗಳಿಂದ ಉಂಟಾಗುವ ಅಪಮೃತ್ಯುವಿನಿಂದ ಪಾರಾಗಬಹುದು. ಜೊತೆಗೆ ಕಡೆಲೆಕಾಯಿ ಬೀಜ ಸೇವನೆಯಿಂದ ಪಾರ್ಶ್ವವಾಯು ವಿನಂತರ ರೋಗಗಳು ಹತ್ತಿರ ಸುಳಿಯಲ್ಲ ಎಂದು ವರದಿ ತಿಳಿಸಿದೆ. ಇನ್ನು ಕಿಡ್ನಿಯಲ್ಲಿ ಸಂಗ್ರಹವಾಗುವ ಕಲ್ಲುಗಳನ್ನು ಸಹ ಕರಗಿಸುತ್ತದಂತೆ ಕಡಲೇ ಬೀಜ..
ಕಡಲೆಕಾಯಿ ಬೀಜದಲ್ಲಿ ಹೆಚ್ಚಿನ ಪ್ರಮಾಣದ ಫೈಬರ್, ವಿಟಮಿನ್, ಮಿನರಲ್ಸ್, ಆಂಟಿ ಆಕ್ಸಿಡಂಟ್ಸ್ ಇರುತ್ತದೆ. ಇನ್ನು ಕಡಲೆ ಬೀಜದಲ್ಲಿ ಬಿ ಜೀವಸತ್ವ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಚರ್ಮಕ್ಕೆ ನೈಜ ಹೊಳಪು ನೀಡುತ್ತದೆ. ಹೀಗಾಗಿ ಹೃದಯಕ್ಕೆ ಸಂಬಂಧಿಸಿದ ರೋಗಗಳಿಂದ ಪಾರು ಮಾಡುತ್ತದೆ. ಯಾವುದೇ ಆದರೂ ಅತಿಯಾಗಿ ಸೇವಿಸಿದರೇ ಅಪಾಯ ಕಟ್ಟಿಟ್ಟ ಬುತ್ತಿ. ಹಿತಮಿತವಾಗಿ ಸೇವಿಸಿದರೇ ಆರೋಗ್ಯಕ್ಕೂ ಉತ್ತಮ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


