ದಿನನಿತ್ಯ 'ಆಂಟಾಸಿಡ್' ಸೇವನೆ ಹೃದಯ ರೋಗದ ಅಪಾಯ ಹೆಚ್ಚಿಸುತ್ತದೆ: ಅಧ್ಯಯನ
ಎದೆ ಉರಿ ಮತ್ತು ಅಸಿಡಿಟಿ ತೊಂದರೆಗಳನ್ನು ನಿವಾರಿಸಲು ದಿನನಿತ್ಯ ತೆಗೆದುಕೊಳ್ಳುವ ಆಂಟಾಸಿಡ್ ಔಶಧ ಹೃದ್ರೋಗ ತೊಂದರೆಯನ್ನು ೧೬% ರಿಂದ ೨೧%

ವಾಶಿಂಗ್ಟನ್: ಎದೆ ಉರಿ ಮತ್ತು ಅಸಿಡಿಟಿ ತೊಂದರೆಗಳನ್ನು ನಿವಾರಿಸಲು ದಿನನಿತ್ಯ ತೆಗೆದುಕೊಳ್ಳುವ ಆಂಟಾಸಿಡ್ ಔಶಧ ಹೃದ್ರೋಗ ತೊಂದರೆಯನ್ನು ೧೬% ರಿಂದ ೨೧% ಹೆಚ್ಚಿಸುತ್ತದೆ ಎಂದು ಭಾರತೀಯ ಮೂಲದ ಸಂಶೋಧಕರೊಬ್ಬರು ತಿಳಿಸಿದ್ದಾರೆ.
೨.೯ ದಶಲಕ್ಷ ರೋಗಿಗಳ ೧೬ ದಶಲಕ್ಷ ವೈದ್ಯಕೀಯ ದಾಖಲೆಗಳನ್ನು ಸಂಶೋಧಕರು ಅಧ್ಯಯನ ಮಾಡಿದ್ದಾರೆ.
"ಹೊಟ್ಟೆಯಲ್ಲಿ ಗ್ಯಾಸ್ ನಿವಾರಣೆಗಾಗಿ ಔಷದ ಸೇವಿಸುವವರಿಗೆ ಮಯೋಕಾರ್ಡಿಯಲ್ ಇನ್ಫ್ರಾಕ್ಶನ್ ಸಾಮಾನ್ಯವಾಗಿ ಹೃದಯಾಘಾತ ಎಂದು ಕರೆಯಲ್ಪಡುವ ರೋಗ ಬರುವ ಅಪಾಯ ಹೆಚ್ಚುತ್ತದೆ" ಎಂದು ಕ್ಯಾಲಫೋರ್ನಿಯಾದ ಸ್ಟ್ಯಾನ್ಫರ್ಡ್ ವಿಶ್ವವಿದ್ಯಾಲಯದ ಮುಖ್ಯ ಸಂಶೋಧಕ ನಿಗಮ್ ಎಚ್ ಷಾ ತಿಳಿಸಿದ್ದಾರೆ.
"ಹಿಂದೆ ಹ್ರದಯ ಸಂಬಂಧ ರೋಗ ಇಲ್ಲದವರಿಗೆ ಗ್ಯಾಸ್ಟ್ರಿಕ್ ತೊಂದರೆ ನಿವಾರಿಸಲು ಅಂಟಾಸಿಡ್ ಔಷಧ ನೀಡಿದ ಮೇಲೆ ಅವರಲ್ಲಿ ಹೃದಯ ಸಂಬಂಧಿ ರೋಗಗಳು ಬರುವ ಅಪಾಯ ಹೆಚ್ಚಿರುವುದು ನಮ್ಮ ಅಧ್ಯಯನ ಸಾಬೀತುಪಡಿಸಿದೆ" ಎಂದು ಅವರು ತಿಳಿಸಿದ್ದಾರೆ.
ಈ ಸಂಶೋಧಕರು ಇನ್ನು ಹೆಚ್ಚಿನ ಅಧ್ಯಯನಕ್ಕೆ ಸಜ್ಜಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


