ಭಾರತೀಯರು ದೀರ್ಘಾಯುಷಿಗಳು ಆದರೆ ಅನಾರೋಗ್ಯ ಪೀಡಿತರು
ಭಾರತೀಯರು ಹೆಚ್ಚು ಕಾಲ ಜೀವಿಸುತ್ತಾರೆ, ಅಂದರೆ ದೀರ್ಘಾಯುಷಿಗಳು ಎನ್ನುವುದನ್ನು ಸಂಶೋಧನೆಯೊಂದು ದೃಢಪಡಿಸಿದೆ.,,,

ನವದೆಹಲಿ: ಭಾರತೀಯರು ಸದಾಕಾಲಕ್ಕೂ ಫಿಟ್ ಅಂಡ್ ಫೈನ್ ಅನ್ನೋದು ಹಳೇ ಮಾತು. ಭಾರತೀಯರು ಹೆಚ್ಚು ಕಾಲ ಜೀವಿಸುತ್ತಾರೆ, ಅಂದರೆ ದೀರ್ಘಾಯುಷಿಗಳು ಎನ್ನುವುದನ್ನು ಸಂಶೋಧನೆಯೊಂದು ದೃಢಪಡಿಸಿದೆ. ಜೊತೆಗೆ ಹೆಚಿಚನ ಸಮಯ ಅನಾರೋಗ್ಯ ಪೀಡಿತರಾಗಿರುತ್ತಾರೆ ಅಂತಾರಾಷ್ಟ್ರೀಯ ಸಂಶೋಧಕರ ಒಕ್ಕೂಟ ನಡೆಸಿದ ಸಂಶೋಧನೆಯಲ್ಲಿ ತಿಳಿದು ಬಂದಿದೆ.
ಜಗತ್ತಿನ ಇತರ ಪ್ರಾಣಿಗಳಿಗಿಂತ ಮನುಷ್ಯನ ಆಯಸ್ಸು ಹೆಚ್ಚು. ಆದರೆ ಈ ಮನುಷ್ಯ ಬದುಕಿರುವಷ್ಟು ಕಾಲ ಆರೋಗ್ಯವಂತಾನಾಗಿರುವುದಿಲ್ಲ. ಬದಲಿಗೆ ಅನಾರೋಗ್ಯ ಪೀಡಿತನಾಗಿರುತ್ತಾನೆ. ಮಾರಕವಲ್ಲದ ಕಾಯಿಲೆಗಳಾದ ಜ್ವರ, ಗಾಯ ಮಧುಮೇಹ, ಕಿವುಡುತನ, ದೃಷ್ಟಿದೋಷ ಮುಂತಾದ ರೋಗಗಳಿಂದ ಬಳಲುತ್ತಿರುತ್ತಾನೆ. ಮತ್ತು ಅವುಗಳಿಂದ ಗುಣಮುಖವಾಗಲು ಹೆಚ್ಚು ಸಮಯ ವ್ಯಯಿಸುತ್ತಾನೆ ಎಂದು ಸಂಶೋಧನೆಯ ವರದಿ ತಿಳಿಸಿದೆ. ಒಟ್ಟಾರೆ ಮನುಷ್ಯ ಬದುಕುವ ಆಯಸ್ಸಿನ ಕಾಲುಭಾಗದಷ್ಟು ಆಯಸ್ಸಿನಲ್ಲಿ ರೋಗಗ್ರಸ್ಥನಾಗಿ ನರಳುತ್ತಾನೆ ಎಂದು ಹೇಳಿದೆ.
1990 ಮತ್ತು 2013 ರಲ್ಲಿ ಮಹಿಳೆಯರಲ್ಲಿ ಮಧುಮೇಹ ಹೆಚ್ಚು ಕಾಣಿಸಿಕೊಂಡಿದೆ. ಹೆಚ್ಚುಕಾಲ ರೋಗಗ್ರಸ್ಥರಾಗಿ ಜೀವಿಸುವ ಮಹಿಳೆಯರ ಪ್ರಮಾಣ ಶೇ. 109 ರಷ್ಟು ಇದೆ. ಇನ್ನು ಕಬ್ಬಿಣಾಂಶ ಕೊರತೆಯಿಂದ ಉಂಟಾಗುವ ಅನಿಮೀಯಾ ದಿಂದ ಬಳಲುವವರ ಸಂಖ್ಯೆ ಶೇ.12 ರಷ್ಟಿದೆ. ಪುರುಷರಲ್ಲಿ ಕಾಯಿಲೆಪೀಡಿತರಾಗಿ ಬದುಕುವವರ ಸಂಖ್ಯೆ 2013 ರಲ್ಲಿ ಶೇ.136ಕ್ಕೆ ಏರಿಕೆಯಾಗಿದೆ. 1990ರಿಂದ ಮಾನಸಿಕ ಖಿನ್ನತೆ ಹಾಗೂ ಬೆನ್ನು ನೋವಿನಿಂದ ನರಳುವವರ ಪ್ರಮಾಣ ಶೇ, 50 ರಷ್ಟಿದೆ ಎಂದು ಸಮೀಕ್ಷೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


