ವಾಕಿಂಗ್ ಜೊತೆ ರಕ್ಕಿಂಗ್
ದೇಹವನ್ನು ಸದೃಢವಾಗಿಡಲು, ಹೆಚ್ಚಿನ ಕೊಬ್ಬನ್ನು ಕರಗಿಸಲು ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಫಿಟ್ನೆಸ್ ಟ್ರೆಂಡ್ ಗಳು ಬರುತ್ತಿವೆ. ಅವುಗಳಲ್ಲಿ ಒಂದು ರಕ್ಕಿಂಗ್...

ದೇಹವನ್ನು ಸದೃಢವಾಗಿಡಲು, ಹೆಚ್ಚಿನ ಕೊಬ್ಬನ್ನು ಕರಗಿಸಲು ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಫಿಟ್ನೆಸ್ ಟ್ರೆಂಡ್ ಗಳು ಬರುತ್ತಿವೆ. ಅವುಗಳಲ್ಲಿ ಒಂದು ರಕ್ಕಿಂಗ್.
ಬೆನ್ನ ಮೇಲೆ ಭಾರ ಹೊತ್ತುಕೊಂಡು ನಡೆಯುವುದಕ್ಕೆ ರಕ್ಕಿಂಗ್ ಎಂದು ಕರೆಯುತ್ತಾರೆ. ಇದು ದೇಹದಲ್ಲಿರುವ ಅಧಿಕ ಕೊಬ್ಬನ್ನು ಕರಗಿಸುವುದಲ್ಲದೆ ಶರೀರ ಫಿಟ್ ಆಗಿರುವಂತೆ ನೋಡಿಕೊಳ್ಳುತ್ತದೆ.
ರಕ್ಕಿಂಗ್ ಹೋಗುವುದು ಗುಂಪಿನಲ್ಲಿ. ಒಬ್ಬೊಬ್ಬರೇ ಹೋಗುವುದಲ್ಲ. ಪ್ರತಿಯೊಬ್ಬರೂ ಅವರಿಗೆ ಸಾಧ್ಯವಿರುವಷ್ಟು ಭಾರದ ಚೀಲವನ್ನು ಬೆನ್ನ ಮೇಲೆ ಏರಿಸಿಕೊಂಡು ಹೋಗುತ್ತಾರೆ.
ಒಬ್ಬರಿಗೊಬ್ಬರು ನಿಗದಿತ ಅಂತರದಲ್ಲಿ ನಡೆಯುತ್ತಾರೆ. ದಿನಗಳೆದಂತೆ ಹೊರುವ ಭಾರವನ್ನು, ನಡೆಯುವ ದೂರವನ್ನು ಹೆಚ್ಚಿಸಬಹುದು. ಯಾವ ವಸ್ತುವನ್ನಾದರೂ ಹೆಗಲಿಗೇರಿಸಿಕೊಂಡು ಹೋಗಬಹುದು.
ಹೃದಯ ಸಂಬಂಧಿ ಕಾಯಿಲೆಗಳಿಗೆ, ತೂಕ ಕಡಿಮೆ ಮಾಡಲು ವಾರದಲ್ಲಿ 5-6 ದಿನ ಸುಮಾರು 30 ನಿಮಿಷದವರೆಗೆ ಎಲ್ಲಿಯೂ ನಿಲ್ಲದೆ ನಡೆಯುತ್ತಿದ್ದರೆ ಆರೋಗ್ಯ ವೃದ್ಧಿಯಾಗುತ್ತದೆ. ರಕ್ಕಿಂಗ್ ಗೆ ಹೆಚ್ಚಿನ ವೈಜ್ಞಾನಿಕ ರೀತಿ ನೀತಿ ಬೇಕಾಗಿಲ್ಲ. ಇದು ಅತ್ಯಂತ ಸುಲಭ ವಿಧಾನ. ಗುಂಪಿನಲ್ಲಿ ಮಾತನಾಡಿಕೊಂಡು, ತಮಾಷೆ ಮಾಡಿಕೊಂಡು, ಹರಟೆ ಹೊಡೆಯುತ್ತಾ ಸಾಗಬಹುದು.
ನಡೆಯುವುದರಿಂದ ಹೃದಯ, ಶ್ವಾಸಕೋಶಕ್ಕೆ ಪ್ರಯೋಜನವಾಗುತ್ತದೆ. ರಕ್ತ ಚೆನ್ನಾಗಿ ಪರಿಚಲನೆಯಾಗುತ್ತದೆ. ಮಾನಸಿಕವಾಗಿ ಬಹಳ ನಿರಾಳರಾಗುತ್ತೇವೆ. ಕೊಬ್ಬು ಕರಗುವುದೆಂದು ಸ್ವಲ್ಪ ದಿನಗಳಲ್ಲಿ ಅದರ ಫಲಿತಾಂಶ ಗೊತ್ತಾಗುವುದಿಲ್ಲ. ನಿರಂತರವಾಗಿ ಮಾಡುತ್ತಾ ಬರಬೇಕು.
ಎಲ್ಲಿ ನಡೆಯಬೇಕು:
ಅಗಲವಾದ ರಸ್ತೆಗಳಲ್ಲಿ, ಗುಡ್ಡ, ಬೆಟ್ಟಗಳಲ್ಲಿ ನಡೆದರೆ ಸ್ವಲ್ಪ ಹೆಚ್ಚು ಕ್ಯಾಲೊರಿ ದೇಹದಿಂದ ಕರಗಿ ಹೋಗಬಹುದು. ಹೋಗುವಾಗ ನೀರಿನ ಬಾಟಲ್ ಒಯ್ಯುವುದನ್ನು ಮರೆಯದಿರಿ. ನಡೆಯಲು ಹಿತವಾಗುವ ಬಟ್ಟೆ ಧರಿಸಿ. ಚಪ್ಪಲಿ ಅಥವಾ ಶೂ ಕಾಲಿಗೆ ಹಿತವಾಗುವುದಾಗಿರಲಿ. ನಿಮ್ಮ ಜೊತೆ ಉತ್ತಮ ಸ್ನೇಹಿತರಿದ್ದರೆ ಇನ್ನೂ ಒಳ್ಳೆಯದು.
ನಡೆಯುವಾಗ ಬೆನ್ನು ಭಾರ ಎನಿಸಿದರೆ, ಕತ್ತು, ಹೆಗಲು ನೋವಾಗುತ್ತಿದ್ದರೆ ಭಾರವನ್ನು ಕಡಿಮೆ ಮಾಡಿ. ನಡೆಯುವ ವಿಧಾನದಲ್ಲಿ ಸ್ವಲ್ಪ ಬದಲಾವಣೆ ತನ್ನಿ.
ಸ್ನೇಹಿತರೆ ಇನ್ನೇಕೆ ತಡ? ರಕ್ಕಿಂಗ್ ಗೆ ರೆಡಿಯಾಗಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


