ಆರೋಗ್ಯ-ಜೀವನಶೈಲಿ

ಗೋಡಂಬಿ, ಬಾದಾಮಿ ತಿನ್ನಿ; ತೆಳ್ಳಗಾಗಿ

ನಿಮ್ಮ ದಿನನಿತ್ಯದ ಆಹಾರದಲ್ಲಿ ನಟ್ ಗಳನ್ನು ಹೊಂದುವುದು ತೆಳ್ಳಗಾಗುವುದಕ್ಕೆ ಸುಲಭವಾದ ಉಪಾಯ ಎನ್ನುತ್ತದೆ ಅಧ್ಯಯನವೊಂದು.

ಗೋಡಂಬಿ, ಬಾದಾಮಿ ತಿನ್ನಿ; ತೆಳ್ಳಗಾಗಿ
ಸಾಂದರ್ಭಿಕ ಚಿತ್ರ
Published On :

ನ್ಯೂಯಾರ್ಕ್: ನಿಮ್ಮ ದಿನನಿತ್ಯದ ಆಹಾರದಲ್ಲಿ ನಟ್ ಗಳನ್ನು ಹೊಂದುವುದು ತೆಳ್ಳಗಾಗುವುದಕ್ಕೆ ಸುಲಭವಾದ ಉಪಾಯ ಎನ್ನುತ್ತದೆ ಅಧ್ಯಯನವೊಂದು.

ಬಾದಾಮಿ, ಗೋಡಂಬಿ, ವಾಲ್ನಟ್, ಹೇಜಲ್ ನಟ್, ಪೈನ್ ನಟ್ ಇತ್ಯಾದಿ ಸಣ್ಣಗಾಗುವುದಕ್ಕೆ ಬಹಳ ಉಪಯುಕ್ತ ಎಂದು ತಿಳಿಸುತ್ತದೆ ಅಧ್ಯಯನ.

೧೪೦೦೦ ಸಾವಿರ ಪುರುಷರು ಮತ್ತು ಮಹಿಳೆಯರ ಮೇಲೆ ನಡೆಸಿರುವ ಅಧ್ಯಯನದಲ್ಲಿ ಈ ನಟ್ ಗಳನ್ನು ತಿನ್ನುವವರಿಗೆ ಬೊಜ್ಜು ಬರುವ ಸಾಧ್ಯತೆ ೨೫% ಕಡಿಮೆ ಎಂದಿದೆ ಸಂಶೋಧನೆ.

ಈ ನಟ್ ಗಳಲ್ಲಿ ಕೊಬ್ಬು ಮತ್ತು ಹೆಚ್ಚಿನ ಕ್ಯಾಲರಿಗಳು ಇದ್ದರೂ ಇದು ತೂಕವನ್ನು ಹೆಚ್ಚಿಸುವುದಿಲ್ಲವಂತೆ.

ಒಂದು ಕಪ್ಪಿನ ಒಂದನೇ ಮೂರು ಭಾಗದಷ್ಟು ನಟ್ ಗಳನ್ನು ದಿನಾಲು ತಿನ್ನುವುದರಿಂದ ಅಗತ್ಯ ವಿಟಮಿನ್ ಗಳು, ಮಿನರಲ್ ಗಳು ಮತ್ತು ಶಕ್ತಿಯನ್ನು ನೀಡುತ್ತದಂತೆ.

ಈ ಸಂಶೋಧನಾ ಲೇಖನವನ್ನು ನ್ಯೂಟ್ರಿಶನ್ ಜರ್ನಲ್ ನಲ್ಲಿ ಪ್ರಕಟಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.