ಎಬೋಲಾ: ವ್ಯಕ್ತಿ ಸತ್ತರೂ ವೈರಸ್ ಜೀವಂತ
ವಿಶ್ವವನ್ನೇ ಭಯಭೀತರನ್ನಾಗಿಸಿರುವ ಮಾರಕ ರೋಗದ ಕುರಿತು ಮತ್ತೊಂದು ಭಯಾನಕ ಸಂದೇಶ...

ನವದೆಹಲಿ: ವಿಶ್ವವನ್ನೇ ಭಯಭೀತರನ್ನಾಗಿಸಿರುವ ಮಾರಕ ರೋಗದ ಕುರಿತು ಮತ್ತೊಂದು ಭಯಾನಕ ಸಂದೇಶವೊಂದನ್ನು ವಿಶ್ವ ಆರೋಗ್ಯ ಸಂಸ್ಥೆ ರವಾನಿಸಿದೆ.
ವಿಶ್ವದೆಲ್ಲೆಡೆ ಮರಣ ಮೃದಂಗ ಮುಂದುವರಿಸಿರುವ ಎಬೋಲಾ ಕುರಿತಂತೆ ಸಂಶೋಧಕರು ಎಚ್ಚರಿಕೆ ಸಂದೇಶವನ್ನು ನೀಡಿದ್ದು, ಎಬೋಲಾ ರೋಗದಿಂದ ಸತ್ತ ವ್ಯಕ್ತಿಯ ದೇಹದಲ್ಲಿ ವೈರಸ್ 7 ದಿನಗಳವರೆಗೂ ಜೀವಂತವಾಗಿರುತ್ತವೆ ಎಂದು ಹೇಳಿದ್ದಾರೆ.
ಎಬೋಲಾ ರೋಗಕ್ಕೆ ತುತ್ತಾಗಿ ಸತ್ತ ವ್ಯಕ್ತಿಯ ದೇಹದಲ್ಲಿದ್ದ ವೈರಸ್‌ಗಳು ಸಾವನ್ನಪ್ಪಿರುತ್ತವೆ ಎಂದು ಎಲ್ಲರೂ ನಂಬಿದ್ದರು. ಆದರೆ, ಈ ಕುರಿತಂತೆ ಸಂಶೋಧನೆ ನಡೆಸಿದ ವಿಶ್ವ ಆರೋಗ್ಯ ಸಂಸ್ಥೆಯುಗೆ ಭಯಾನಕ ಮಾಹಿತಿ ದೊರಕಿದ್ದು, ಎಬೋಲಾಗೆ ತುತ್ತಾದ ವ್ಯಕ್ತಿಯ ದೇಹದಲ್ಲಿ ಕನಿಷ್ಟ 7 ದಿನಗಳು ವೈರಸ್ ಜೀವಂತವಾಗಿರುತ್ತದೆ ಎಂದು ಹೇಳಿದೆ.
ಸತ್ತ ವ್ಯಕ್ತಿಯ ದೇಹವನ್ನು ಮುಟ್ಟಿದ ವ್ಯಕ್ತಿಗೂ ಇದರ ಸೋಂಕು ಹರಡಲಿದ್ದು, ಎಬೋಲಾದಿಂದ ಸಾವನ್ನಪ್ಪಿದ ವ್ಯಕ್ತಿಯ ದೇಹ ಅತ್ಯಂತ ಅಪಾಯಕಾರಿಯಾಗಿದೆ. ವ್ಯಕ್ತಿಯ ದೇಹವನ್ನು ಸುಡುವಾಗ ಬೆಂಕಿಯ ಸಣ್ಣ ಕಿಡಿಯಿಂದಲೂ ಎಬೋಲಾ ವೈರಸ್ ಇನ್ನಿತರರಿಗೆ ಹರಡುತ್ತವೆ ಎಂದು ತಿಳಿಸಿದೆ. ಎಬೋಲಾ ರೋಗದಿಂದ ಬಳಲುತ್ತಿರುವವರ ದೇಹಲ್ಲಿರುವ ವೈರಸ್‌ಗಳು ಎಲ್ಲಿಯವರೆಗೆ ಜೀವಂತವಾಗಿರುತ್ತವೆಂಬುದರ ಕುರಿತು ಈವರೆಗೂ ಯಾರೊಬ್ಬರೂ ಸಂಶೋಧನೆ ನಡೆಸಿಲ್ಲ. ಎಬೋಲಾ ರೋಗದಿಂದಾಗಿ ಸಾವನ್ನಪ್ಪಿರುವವರಿಂದ ಸಾರ್ವಜನಿಕರು ಸಾಕಷ್ಟು ಎಚ್ಚರಿಕೆ ವಹಿಸಬೇಕಿದ್ದು, ರೋಗಪೀಡತ ವ್ಯಕ್ತಿಯಿಂದ ದೂರವಿರುವುದು ಒಳ್ಳೆಯದು ಎಂದು ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


