ಮೂವರ ಡಿಎನ್‌ಎ ಬಳಸಿ ಮಗು ಜನನ
ಮೂವರ ಡಿಎನ್‌ಎ ಬಳಸಿಕೊಂಡು ಪ್ರಣಾಳ ಶಿಶು ಮಾದರಿಯಲ್ಲಿ ಮಕ್ಕಳ ಜನನಕ್ಕೆ ಅವಕಾಶ ಮಾಡಿಕೊಡುವ...

ಲಂಡನ್: ಮೂವರ ಡಿಎನ್‌ಎ ಬಳಸಿಕೊಂಡು ಪ್ರಣಾಳ ಶಿಶು ಮಾದರಿಯಲ್ಲಿ ಮಕ್ಕಳ ಜನನಕ್ಕೆ ಅವಕಾಶ ಮಾಡಿಕೊಡುವ ಕಾನೂನು ತಿದ್ದುಪಡಿಗೆ ಬ್ರಿಟನ್ ಸಂಸತ್ತು ಮಂಗಳವಾರ ಅನುಮೋದನೆ ನೀಡಿದೆ.
ಈ ಮೂಲಕ ಮೂವರ ಡಿಎನ್‌ಎ ಬಳಸಿಕೊಂಡು ಮಕ್ಕಳ ಹುಟ್ಟಿಗೆ ಅವಕಾಶ ಮಾಡಿಕೊಡುವ ವಿಶ್ವದ ಮೊದಲ ದೇಶ ಬ್ರಿಟನ್ ಆಗಲಿದೆ.
ಈ ರೀತಿಯ ವಿಧಾನದಲ್ಲಿ ಗಂಡ-ಹೆಂಡತಿ ಮಾತ್ರವಲ್ಲದೆ ಮತ್ತೊಬ್ಬ ಮಹಿಳೆಯ ಡಿಎನ್‌ಎಯನ್ನು ದಾನ ರೂಪದಲ್ಲಿ ಪಡೆಯಲಾಗುತ್ತದೆ. ನಂತರ ಪ್ರಣಾಳ ಶಿಶು ವಿಧಾನದಲ್ಲಿ ಭ್ರೂಣವನ್ನು ಬೆಳೆಸಲಾಗುತ್ತದೆ. ಈ ರೀತಿಯ ಮೈಟೋಕಾಂಡ್ರಿಯಲ್ ಡಿಎನ್‌ಎ ದಾನ ತಂತ್ರದಿಂದ ಆನುವಂಶಿಕವಾಗಿ ಬರುವ ರೋಗಗಳನ್ನು ಮಕ್ಕಳಿಂದ ದೂರ ಇಡಲು ಸಾಧ್ಯವಿದೆ ಎನ್ನುವುದು ವಿಜ್ಞಾನಿಗಳ ವಾದ. ಈ ತಂತ್ರದಲ್ಲಿ ದಂಪತಿಯ ಶೇ.99.9ರಷ್ಟು ಡಿಎನ್‌ಎ ಹಾಗೂ ದಾನಿ ಮಹಿಳೆಯ ಶೇ.0.1ರಷ್ಟು ಆರೋಗ್ಯ ಯುತ ಡಿಎನ್‌ಎ ಬಳಸಲಾಗುತ್ತದೆ.
ಆದರೆ, ಈ ಕಾನೂನು ತಿದ್ದುಪಡಿಗೆ ಧಾರ್ಮಿಕ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಪಾಪ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಪ್ರಣಾಳ ಶಿಶು ವಿಧಾನದ ಬೆಂಬಲಿಗ ಲಾರ್ಡ್ ರಾಬರ್ಟ್ ವಿನ್‌ಸ್ಟನ್ ಅವರು ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


