ಆರೋಗ್ಯ-ಜೀವನಶೈಲಿ

ಅತಿ ಹೆಚ್ಚು ಸಮಯ ಟಿವಿ ವೀಕ್ಷಣೆಯಿಂದ ಮೆದುಳಿನ ಕಾರ್ಯನಿರ್ವಹಣಾ ಶಕ್ತಿ ಕುಸಿತ!

ಅತಿ ಹೆಚ್ಚು ಸಮಯ ಕುಳಿತು ಟಿವಿ ವೀಕ್ಷಿಸುವುದರಿಂದ ಯುವಕರಲ್ಲಿ ಮೆದುಳಿನ ಕಾರ್ಯನಿರ್ವಹಣಾ ಶಕ್ತಿ ಕುಂದುತ್ತದೆ ಎಂದು ಹೊಸ ಸಂಶೋಧನೆ ಎಚ್ಚರಿಸಿದೆ.

ಅತಿ ಹೆಚ್ಚು ಸಮಯ ಟಿವಿ ವೀಕ್ಷಣೆಯಿಂದ ಮೆದುಳಿನ ಕಾರ್ಯನಿರ್ವಹಣಾ ಶಕ್ತಿ ಕುಸಿತ!
ಅತಿ ಹೆಚ್ಚು ಸಮಯ ಟಿವಿ ವೀಕ್ಷಣೆಯಿಂದ ಮೆದುಳಿನ ಕಾರ್ಯನಿರ್ವಹಣಾ ಶಕ್ತಿ ಕುಸಿತ
Published On :

ವಾಷಿಂಗ್ಟನ್: ಅತಿ ಹೆಚ್ಚು ಸಮಯ ಕುಳಿತು ಟಿವಿ ವೀಕ್ಷಿಸುವುದರಿಂದ ಯುವಕರಲ್ಲಿ ಮೆದುಳಿನ ಕಾರ್ಯನಿರ್ವಹಣಾ ಶಕ್ತಿ ಕುಂದುತ್ತದೆ ಎಂದು ಹೊಸ ಸಂಶೋಧನೆ ಎಚ್ಚರಿಸಿದೆ.
ಯುವಕರು ಕಡಿಮೆ ದೈಹಿಕ ಚಟುವಟಿಕೆಗಳಲ್ಲಿ ತೊಡಗಿ, ಹೆಚ್ಚು ಕಾಲ ಟಿವಿ ವೀಕ್ಷಿಸುವುದರಿಂದ ಮಧ್ಯ ವಯಸ್ಸಿನಲ್ಲಿ ಮೆದುಳಿನ ಕಾರ್ಯಕ್ಷಮತೆ ಕುಗ್ಗುತ್ತದೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ತಜ್ಞರು ಈ ಬಗ್ಗೆ ಸಂಶೋಧನೆ ನಡೆಸಿದ್ದು ಅತಿ ಹೆಚ್ಚು ಸಮಯ ಕುಳಿತು ಟಿವಿ ವೀಕ್ಷಿಸುದರ ಪರಿಣಾಮ 25 ವರ್ಷಗಳ ನಂತರ ಗೋಚರಿಸಲಿದ್ದು  ಜೀವನದ ಮಧ್ಯಭಾಗದಲ್ಲಿ ಗ್ರಹಿಕೆಯ ಶಕ್ತಿ ಕಳಪೆಯಾಗುವುದನ್ನು ಗಮನಿಸಿದ್ದಾರೆ.  
ಯಾವುದೇ ಕೆಲಸಗಳನ್ನು ನಿಧಾನಗತಿಯಲ್ಲಿ ಮಾಡುವುದು, ಕಾರ್ಯನಿರ್ವಾಹಣೆಯ ಗುಣಮಟ್ಟದಲ್ಲಿ ಕುಸಿತ ಕಾಣುವುದು ಅತಿ ಹೆಚ್ಚು ಸಮಯ ಕುಳಿತು ಟಿವಿ ವೀಕ್ಷಿಸುವುದರಿಂದ ಉಂಟಾಗುವ ಪರಿಣಾಮಗಳ ಫಲಿತಾಂಶವಾಗಿರುತ್ತದೆ ಎಂದು ಸಂಶೋಧನಾ ತಜ್ಞೆ ಟೀನಾ ಡಿ ಹಾಂಗ್ ನಮ್ ಹೇಳಿದ್ದಾರೆ. ಈ ಅಧ್ಯಯನ ವರದಿಯನ್ನು ಜೆಎಎಂಎ ಸೈಕಿಯಾಟ್ರಿ ಪ್ರಕಟಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.