ಟಿವಿ ಪೋರ್ನ್ ಹದಿಹರೆಯದವರಿಗೆ ಮಾರಕ!
ಟಿವಿ ಪೋರ್ನ್ ದೃಶ್ಯಗಳನ್ನು ವೀಕ್ಷಿಸುವುದು ಅಪ್ರಾಪ್ತ ಯುವಕ, ಯುವತಿಯರ ಮನಸ್ಸಿನ ಮೇಲೆ ಅಪಾಯಕಾರಿ ಪರಿಣಾಮ ಬೀರಲಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

ನ್ಯೂಯಾರ್ಕ್: ಟಿವಿ ಪೋರ್ನ್ ದೃಶ್ಯಗಳನ್ನು ವೀಕ್ಷಿಸುವುದು ಅಪ್ರಾಪ್ತ ಯುವಕ, ಯುವತಿಯರ ಮನಸ್ಸಿನ ಮೇಲೆ ಅಪಾಯಕಾರಿ ಪರಿಣಾಮ ಬೀರಲಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.
ದೂರದರ್ಶನಗಳಲ್ಲಿ ಅಶ್ಲೀಲ/ ಲೈಂಗಿಕ ಪ್ರಚೋದನಕಾರಿ ದೃಶ್ಯಗಳನ್ನು ವೀಕ್ಷಿಸುವುದು 13 -17 ವರ್ಷದ ಯುವಕ ಯುವತಿಯರಿಗೆ ತಮ್ಮ ಚಿತ್ರಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಡೇಟ್ ಮಾಡಲು ಉತ್ತೇಜಿಸುತ್ತದೆಯಂತೆ. ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಚಿತ್ರಗಳು ಲೈಂಗಿಕ ಪ್ರಚೋದನಕಾರಿ ದೃಶ್ಯಗಳನ್ನು ವೀಕ್ಷಿಸಲು ಪ್ರಚೋದನೆ ನೀಡುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
ಈ ರೀತಿಯ ಅಪಾಯಕಾರಿ ವರ್ತನೆಗಳನ್ನು ತಡೆಗಟ್ಟಲು ಮಾನಸಿಕ ಆರೋಗ್ಯ ತಜ್ಞರು ಹದಿಹರೆಯದವರು ಟಿವಿಗಳಲ್ಲಿ ನೋಡುವ ದೃಶ್ಯದ ಮಾದರಿಗಳನ್ನು ನಿರ್ಣಯಿಸಬೇಕು ಎಂದು ಕ್ಯಾಲಿಫೋರ್ನಿಯಾದ ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ನೆದರ್ ಲ್ಯಾಂಡ್ ನ ಆಂಸ್ಟರ್ಡ್ಯಾಮ್ ವಿಶ್ವವಿದ್ಯಾಲಯ ಇಂಟರ್ ನೆಟ್ ನಲ್ಲಿ ಅಶ್ಲೀಲತೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಪ್ರಾಪ್ತ ವಯಸ್ಸಿನವರ ಕಂಟೆಂಟ್ ಬಗ್ಗೆ ಸಂಶೋಧನೆ ನಡೆಸಿದ್ದು ಈ ವಿಷಯ ಬಹಿರಂಗವಾಗಿದೆ.
ವಿದ್ಯುನ್ಮಾನ ಮಾಧ್ಯಮಗಳಲ್ಲಿ ಬರುವ ಕಾರ್ಯಕ್ರಮಗಳನ್ನು ಆಯ್ಕೆ ಮಾಡಿಕೊಳ್ಳುವುದರ ಬಗ್ಗೆ ಮಕ್ಕಳಿಗೆ ಪರಿಣಾಮಕಾರಿಯಾಗಿ ಬೋಧನೆ ಮಾಡುವುದಕ್ಕೆ ಈ ಸಂಶೋಧನೆ ನೆರವಾಗಲಿದೆ. ಸೈಬರ್ ಸೈಕಾಲಜಿ, ನಡವಳಿಕೆ, ಸಾಮಾಜಿಕ ನೆಟ್ವರ್ಕಿಂಗ್ ಕುರಿತಾದ ಜರ್ನಲ್ ನಲ್ಲಿ ಈ ಸಂಶೋಧನಾ ವರದಿ ಪ್ರಕಟವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


