ಆರೋಗ್ಯ-ಜೀವನಶೈಲಿ

ಕುಳ್ಳಗಿನ ಮಹಿಳೆಯರಿಗೆ 'ಪ್ರೀ ಮೆಚ್ಯೂರ್' ಮಕ್ಕಳು ಹಡೆಯುವ ಅಪಾಯ ಹೆಚ್ಚು

ಕುಳ್ಳಗಿನ ತಾಯಂದಿರು ಅವಧಿಗೆ ಮುಂಚಿತವಾಗಿಯೇ, ಇನ್ನೂ ಸಂಪೂರ್ಣವಾಗಿ ಅಭಿವೃದ್ಧಿ ಹೊಂದದ ಮಕ್ಕಳನ್ನು ಹೆರುವ ಅಪಾಯ ಎದುರಿಸುತ್ತಾರೆ

ಕುಳ್ಳಗಿನ ಮಹಿಳೆಯರಿಗೆ 'ಪ್ರೀ ಮೆಚ್ಯೂರ್' ಮಕ್ಕಳು ಹಡೆಯುವ ಅಪಾಯ ಹೆಚ್ಚು
ಸಾಂದರ್ಭಿಕ ಚಿತ್ರ
Published On :

ನ್ಯೂಯಾರ್ಕ್: ಕುಳ್ಳಗಿನ ತಾಯಂದಿರು ಅವಧಿಗೆ ಮುಂಚಿತವಾಗಿಯೇ, ಇನ್ನೂ ಸಂಪೂರ್ಣವಾಗಿ ಅಭಿವೃದ್ಧಿ ಹೊಂದದ ಮಕ್ಕಳನ್ನು ಹೆರುವ ಅಪಾಯ ಎದುರಿಸುತ್ತಾರೆ ಎನ್ನುತ್ತದೆ ನೂತನ ಅಧ್ಯಯನವೊಂದು.

"ತಾಯಂದಿರ ಉದ್ದ, ಅವರ ಗರ್ಭಿಣಿತನದ ಅವಧಿ ಕೊನೆಯವರೆಗೂ ಮುಂದುವರೆಯುವುದಕ್ಕೆ ಸಂಬಂಧ ಇದೆ ಎಂದು ನಮ್ಮ ಸಂಶೋಧನೆ ತಿಳಿಸುತ್ತದೆ" ಎಂದು ಅಮೆರಿಕಾದ ಒಹಿಯೋದ ಸಿನ್ಸಿನ್ನಾಟಿ ಮಕ್ಕಳ ಆಸ್ಪತ್ರೆಯ ಲೂಯಿ ಮುಗಿಲಾ ತಿಳಿಸಿದ್ದಾರೆ.

"ಇದಕ್ಕೆ ಕಾರಣಗಳು ಸರಿಯಾಗಿ ತಿಳಿದುಬಂದಿಲ್ಲ ಆದರೆ ಇದಕ್ಕೆ ತಿಳಿದಿರದ ಜೀನ್ ಗಳು ಇರಬಹುದು ಅಥವಾ ಮಹಿಳೆಯ ಜೀವನಾವಧಿಯಲ್ಲಿ ಸೇವಿಸುವ ಆಹಾರ ಮತ್ತು ಅವರ ಪರಿಸರವೂ ಕಾರಣವಿರಬಹುದು" ಎಂದು ಮುಗಿಲಾ ತಿಳಿಸಿದ್ದಾರೆ.

ವಿಶ್ವದಾದ್ಯಂತ ಅವಧಿಗೆ ಮೂಚಿತವಾಗಿಯೇ ೧೫ ದಶಲಕ್ಷ 'ಪ್ರೀ ಮೆಚ್ಯೂರ್' ಹಸುಗೂಸುಗಳು ಜನಿಸುತ್ತವೆ. ಅವುಗಳಲ್ಲಿ ಒಂದು ದಶಲಕ್ಷಕ್ಕೂ ಹೆಚ್ಚು ಮಕ್ಕಳು ಹಲವಾರು ಆರೋಗ್ಯ ತೊಂದರೆಗಳಿಂದ ಸಾವನ್ನಪುತ್ತವೆ ಎಂದು ಅಧ್ಯಯನ ತಿಳಿಸಿದೆ.

ಉಸಿರಾಟದ ತೊಂದರೆ, ಜಾಂಡಿಸ್, ದೃಷ್ಟಿ ದೋಷ ಮುಂತಾದ ತೊಂದರೆಗಳಿಗೆ ಈ ಹಸುಗೂಸುಗಳು ತುತ್ತಾಗುತ್ತವೆ.

೩೪೮೫ ಸ್ಕಾಂಡೆವೇನಿಯನ್ ಮಹಿಳೆಯರು ಮತ್ತು ಅವರ ಹಸುಗೂಸುಗಳನ್ನು ಸಂಶೋಧಕರು ಆ ಅಧ್ಯಯನಕ್ಕೆ ತೊಡಗಿಸಿಕೊಂಡಿದ್ದಾರೆ.

ಇದಕ್ಕೆ ವ್ಯತಿರಿಕ್ತವಾಗಿ ಹುಟ್ಟುವ ಹಸಿಗೂಸಿನ ಉದ್ದ ಮತ್ತು ತೂಕ ವರ್ಗಾಯಿಸುವ ಜೀನ್ಸ್ ಮೇಲೆ ಕೂಡ ಅವಲಂಬಿತವಾಗಿರುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.