ಆರೋಗ್ಯ-ಜೀವನಶೈಲಿ

ಅಂಗಾಂಗ ದಾನ, ತಮಿಳು ನಾಡು ಮುಂದು: ಆರೋಗ್ಯ ಸಚಿವ

ತಮಿಳುನಾಡಿನಲ್ಲಿ ೨೦೦೮ ರಿಂದ ಅಂಗ ಕಸಿ ಕೇಂದ್ರವನ್ನು ಸ್ಥಾಪಿಸಿದಾಗಲಿಂದಲು ೬೩೮ ಜನ ಅಂಗದಾನ ಮಾಡಿ ೩೦೦೦ಕ್ಕು ಹೆಚ್ಚು ಜನ ಇದರ ಫಲಾನುಭವಿಗಳಾಗಿದ್ದಾರೆ

ಅಂಗಾಂಗ ದಾನ, ತಮಿಳು ನಾಡು ಮುಂದು: ಆರೋಗ್ಯ ಸಚಿವ
ಸಾಂದರ್ಭಿಕ ಚಿತ್ರ
Published On :

ಚೆನ್ನೈ: ತಮಿಳುನಾಡಿನಲ್ಲಿ ೨೦೦೮ ರಿಂದ ಅಂಗ ಕಸಿ ಕೇಂದ್ರವನ್ನು ಸ್ಥಾಪಿಸಿದಾಗಲಿಂದಲು ೬೩೮ ಜನ ಅಂಗದಾನ ಮಾಡಿ ೩೦೦೦ಕ್ಕು ಹೆಚ್ಚು ಜನ ಇದರ ಫಲಾನುಭವಿಗಳಾಗಿದ್ದಾರೆ ಮತ್ತು ಇದು ದೇಶದಲ್ಲೇ ಅತಿ ಹೆಚ್ಚು ಎಂದು ರಾಜ್ಯದ ಆರೋಗ್ಯ ಸಚಿವ ಸಿ ವಿಜಯ ಭಾಸ್ಕರ್ ತಿಳಿಸಿದ್ದಾರೆ.

ಮೆದುಳು ಸಾವು ಹೊಂದಿದ ರೋಗಿಗಳ ಕುಟುಂಬ ವರ್ಗದವರು ಅಂಗಾಂಗ ದಾನಕ್ಕೆ ಮುಂದು ಬರದ ಹೊರತು ಇದು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.

ಈ ಅಂಗ ಕಸಿಗಳಲ್ಲಿ ೧೪೪ ಹೃದಯ ಕಸಿ, ೬೯ ಶ್ವಾಸಕೋಶ ಕಸಿ, ೬೩ ಪಿತ್ತಜನಕಾಂಗ ಕಸಿ, ೧೨೩೩ ಕಿಡ್ನಿ ಕಸಿಗಳನ್ನು ಒಳಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಅಂಗ ಕಸಿ ಕೇಂದ್ರವನ್ನು ಸ್ಥಾಪಿಸಲು ಒರಿಸ್ಸಾ ರಾಜ್ಯ ಕೂಡ ಚಿಂತನೆ ನಡೆಸಿದ್ದು ಸಹಾಯ ಮತ್ತು ಸಲಹೆಗಾಗಿ ತಮಿಳು ನಾಡು ಸರ್ಕಾವನ್ನು ಸಂಪರ್ಕಿಸಿದೆ.

ಈ ಕೇಂದ್ರದ ನಿರ್ವಹಣೆಗೆ ರಾಜ್ಯಸರ್ಕಾರ ಬಜೆಟ್ ನಲ್ಲಿ ೪೦೦೦ ಕೋಟಿಯಿಂದ ೮೨೪೫ ಕೋಟಿಗೆ ಅನುದಾನವನ್ನು ಏರಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.