ಮಧುಮೇಹ ನಿಯಂತ್ರಣಕ್ಕೆ ರಾಮಬಾಣ ಈ ದೊಡ್ಡ ಮೆಣಸಿನಕಾಯಿ!
ದೇಶದಾದ್ಯಂತ ಎಲ್ಲರನ್ನು ಕಾಡುತ್ತಿರುವುದು ಮಧುಮೇಹ ಎಂಬ ರೋಗ. ಈ ರೋಗ ಬಂದರೆ ಏನು ತಿನ್ನಬೇಕೆಂದರೂ ಹಿಂದೂ ಮುಂದೂ ಆಲೋಚಿಸಬೇಕು. ಸಿಹಿ-ತಿನಿಸುಗಳನ್ನು ತಿನ್ನಬೇಕೆಂಬ ಆಸೆಯಿದ್ದರೂ ರೋಗ ಎಲ್ಲಿ...

ದೇಶದಾದ್ಯಂತ ಎಲ್ಲರನ್ನು ಕಾಡುತ್ತಿರುವುದು ಮಧುಮೇಹ ಎಂಬ ರೋಗ. ಈ ರೋಗ ಬಂದರೆ ಏನು ತಿನ್ನಬೇಕೆಂದರೂ ಹಿಂದೂ ಮುಂದೂ ಆಲೋಚಿಸಬೇಕು. ಸಿಹಿ-ತಿನಿಸುಗಳನ್ನು ತಿನ್ನಬೇಕೆಂಬ ಆಸೆಯಿದ್ದರೂ ರೋಗ ಎಲ್ಲಿ ಉಲ್ಬಣಿಸಿಬಿಡುತ್ತದೆಯೋ ಎಂದು ಚಿಂತಿಸುತ್ತೇವೆ. ಈ ರೀತಿಯಾಗಿ ಆಲೋಚಿಸುವವರಿಗೆ ಇಲ್ಲಿದೆ ರಾಮಬಾಣ.
ದೊಡ್ಡ ಮೆಣಸಿನಕಾಯಿ ಅಂದರೆ ಕಾಪ್ಲಿಕಮ್ ಸಲಾಡ್ ರೂಪದಲ್ಲಿ ದಿನನಿತ್ಯ ಸೇವಿಸುವುದರಿಂದ ಮಧುಮೇಹ ಹಾಗೂ ಬೊಜ್ಜುನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು ಎಂಬ ಮಾಹಿತಿಯೊಂದನ್ನು ಸಂಶೋಧಕರು ಬಹಿರಂಗಪಡಿಸಿದ್ದಾರೆ.
ಕೆಮಿಕಲ್ ಟೆಕ್ನಾಲಜಿ ಹಾಗೂ ಇಂಡಿಯನ್ ಇನ್ಸಿಟ್ಯೂಟ್ ವಿಜ್ಞಾನಿಗಳು ನಡೆಸಿರುವ ಸಂಶೋಧನೆಯಲ್ಲಿ ಹಳದಿ ಮತ್ತು ಕೆಂಪು ಕ್ಯಾಪ್ಸಿಕಂ ಮೆಣಸಿನಕಾಯಿಗಳಲ್ಲಿ ಕಾರ್ಬೋಹೈಡ್ರೇಟ್ ಗಳು ಮತ್ತು ಲಿಕ್ವಿಡ್ ಗಳ ಜೀರ್ಣ ಕ್ರಿಯೆಗಳಿರುವುದು ಕಂಡುಬಂದಿದೆ. ಹಳದಿ ಮತ್ತು ಕೆಂಪು ಕ್ಯಾಪ್ಸಿಕಂಗಳನ್ನು ಹಸಿರು ಕ್ಯಾಪ್ಸಿಕಂಗೆ ಹೋಲಿಸಿ ನೋಡಿದರೆ ಹಳದಿ ಕ್ಯಾಪ್ಸಿಕಂನಲ್ಲಿ ಗಮನಾರ್ಹವಾಗಿ ಆಲ್ಫಾ ಗ್ಲೂಕೋಸಡೇಸ್ ಮತ್ತು ಲಿಪೇಸ್ ಕಿಣ್ವದ ಚಟುವಟಿಕೆಗಳು ಕಂಡುಬಂದಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಸಂಶೋಧನೆಯಲ್ಲಿ ಅಂಶ ಬಹಿರಂಗವಾಗಿದ್ದು, ಹಸಿರು, ಹಳದಿ ಹಾಗೂ ಕೆಂಪು ದೊಡ್ಡ ಮೆಣಸಿನಕಾಯಲ್ಲಿ ಗ್ಲೂಕೋಸ್ಡೇಸ್ ಮತ್ತು ಲಿಪಿಡ್ ತೆಗೆಯುವ ಕಿಣ್ವಗಳು, ಪ್ಯಾಂಕ್ರಿಯಾಟಿಕ್ ಲಿಪೋಸ್ಟೋ ಅಳ್ಪಾ ಪೋಷಣೆ ಜೀರ್ಣಕಾರಿ ಕಿಣ್ವಗಳು ಕಾರ್ಬೋಹೈಡ್ರೇಟ್ ಗಳನ್ನು ವಿಭಾಗಿಸುವುದರಲ್ಲಿ ಯಶಸ್ವಿಯಾಗಿದ್ದು, ಇದು ಮಧುಮೇಹವನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿವೆ ಎಂದು ಸಂಶೋಧಕರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


