ಕಾಮಕೇಳಿಯ 10 ಲಾಭಗಳು
ರತಿಕ್ರೀಡೆ ನಡೆಸುವುದರಿಂದ ಏನೇನು ಪ್ರಯೋಜನಗಳಿವೆ ಎಂದು ನಿಮ್ಮನ್ನು..

ರತಿಕ್ರೀಡೆ ನಡೆಸುವುದರಿಂದ ಏನೇನು ಪ್ರಯೋಜನಗಳಿವೆ ಎಂದು ನಿಮ್ಮನ್ನು ಕೇಳಿದರೆ ನೀವೇನು ಹೇಳುವಿರಿ? ಅದು ಮಾನವ ಜನಾಂಗವನ್ನು ಮುನ್ನೆಡೆಸುವುದಲ್ಲದೆ ಜೀವನೋಲ್ಲಾಸ ನೀಡುವಲ್ಲೂ ನೆರವಾಗುತ್ತದೆ ಎನ್ನುವಿರಾ? ಹೌದು, ಲೈಂಗಿಕ ಸುಖ ಅನುಭವಿಸುವುದರಿಂದ ಆರೋಗ್ಯಕ್ಕೆ ಸಂಬಂಧಿಸಿಯೂ ಹಲವು ಲಾಭಗಳಿವೆ. ಆದರೆ ಅದು ಜೋಡಿಯ ಸಹಮತದಿಂದ ನಡೆಯಬೇಕು ಮತ್ತು ಸುರಕ್ಷಿತವಾಗಿರಬೇಕು. ರತಿಕ್ರೀಡೆಯಿಂದ ದೊರೆಯುವ ಹತ್ತು ಪ್ರಮುಖ ಸ್ವಾಸ್ಥ್ಯ ಸಂಬಂಧಿತ ಲಾಭಗಳು ಇಲ್ಲಿವೆ.
ಕ್ಯಾಲೋರಿಗಳ ದಹನ ಕ್ರಿಯೆ
ಸುಮಾರು 30 ನಿಮಿಷಗಳ ಕಾಲ ರತಿಕ್ರೀಡೆಯಲ್ಲಿ ತೊಡಗಿದಲ್ಲಿ ಅದು ವ್ಯಕ್ತಿಯಲ್ಲಿ 85ಕ್ಕೂ ಹೆಚ್ಚು ಕ್ಯಾಲೋರಿಗಳನ್ನು ದಹಿಸುತ್ತದೆ. ಹಾಗಾಗಿ ನೀವು ದೀರ್ಘಕಾಲ ಹಾಗೂ ನಿಯಮಿತವಾಗಿ ರತಿಕ್ರೀಡೆಯಲ್ಲಿ ತೊಡಗುವುದರಿಂದ ನಿಮ್ಮ ಸಂಗಾತಿಯನ್ನು ಸಂತಸಗೊಳಿಸುವುದಷ್ಟೇ ಅಲ್ಲದೆ, ನಿಮ್ಮ ದೇಹದಲ್ಲಿನ ಅನಾವಶ್ಯಕ ಕ್ಯಾಲೋರಿಗಳನ್ನು ಕರಗಿಸಿದಂತೆಯೂ ಆಗುತ್ತದೆ.
ಒತ್ತಡ ನಿವಾರಣೆ
ರತಿಕ್ರೀಡೆಯು ರಕ್ತದ ಒತ್ತಡವನ್ನು ನಿಯಂತ್ರಿಸುವಲ್ಲಿ ಸಹಕಾರಿ ಮತ್ತು ಈ ರೀತಿಯಲ್ಲಿ ಅದು ನಮ್ಮ ಮಾನಸಿಕ ಒತ್ತಡವನ್ನು ಕಡಿಮೆಗೊಳಿಸುತ್ತದೆ.
ಚೋದಕಗಳ ಹೆಚ್ಚಳ
ಕಾಮಕೇಳಿಯು ಪುರುಷನಲ್ಲಿ ಟೆಸ್ಟೊಸ್ಟಿರೋನ್ ಚೋದಕಗಳನ್ನು ಹೆಚ್ಚಿಸುವ ಮೂಲಕ ಆತನ ಎಲುಬುಗಳು ಹಾಗೂ ಸ್ನಾಯುಗಳನ್ನು ಬಲಪಡಿಸುತ್ತದೆ. ನಿರಂತರ ಕಾಮಕ್ರೀಡೆಯು ಇನ್ನು ಮಹಿಳೆಯರಲ್ಲಿ ಈಸ್ಟ್ರೋಜನ್ ಹಾರ್ಮೋನುಗಳನ್ನು ಅಧಿಕಗೊಳಿಸುತ್ತದೆ. ಇದು ಹೃದಯದ ಕಾಯಿಲೆಯನ್ನು ತಡೆಯುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ.
ನಿರೋಧಕ ಶಕ್ತಿಯ ಹೆಚ್ಚಳ
ವಾರದಲ್ಲಿ ಒಂದು ಅಥವಾ ಎರಡು ಬಾರಿ ರತಿಕ್ರೀಡೆ ನಡೆಸುವ ಜನರಲ್ಲಿ ಸುಮಾರು ಶೇಕಡ 30ರಷ್ಟು ಅಧಿಕ ಪ್ರಮಾಣದ ಸೋಂಕು ಪ್ರತಿರೋಧಕ ಇಮ್ಯುನೋಗ್ಲೋಬುಲಿನ್ 'ಎ' ಕಂಡು ಬಂದಿರುವುದು ಹಾಗೂ ನೆಗಡಿ, ಫ್ಲೂನಂತಹ ಸೋಂಕುಗಳ ವಿರುದ್ಧ ಹೋರಾಡುವಲ್ಲಿ ನೆರವಾಗಿರುವುದು ಅಧ್ಯಯನಗಳಿಂದ ತಿಳಿದು ಬಂದಿದೆ.
ದೀರ್ಘಾಯುವಾಗಲು ನೆರವು
ಐರ್ಲೆಂಡ್ನ ಬೆಲಾಸ್ಟೈನ್ನಲ್ಲಿರುವ ಕ್ವೀನ್ಸ್ ಯೂನಿವರ್ಸಿಟಿಯಲ್ಲಿ ಸುಮಾರು ಹತ್ತು ವರ್ಷಗಳಿಗೂ ಹೆಚ್ಚು ಕಾಲ ಒಂದು ಸಾವಿರ ಮಧ್ಯ ವಯಸ್ಕ ಪುರುಷರ ಮೇಲೆ ಅಧ್ಯಯನ ನಡೆಸಲಾಯಿತು. ನಿಯಮಿತವಾಗಿ ಕಾಮಕೇಳಿಯಲ್ಲಿ ತೊಡಗಿದ್ದ ಪುರುಷರು ಸಕ್ರಿಯರು ಹಾಗೂ ದೀರ್ಘಾಯುಗಳಾಗಿದ್ದರು. ಉಳಿದವರು ಅಷ್ಟೊಂದು ಕ್ರಿಯಾಶೀಲರಿರಲಿಲ್ಲ ಎಂಬ ಅಂಶವನ್ನು ಅಧ್ಯಯನ ಹೊರಗೆಡಹಿದೆ.
ಹೃದಯದ ಸ್ವಾಸ್ಥ್ಯ ಸುಧಾರಣೆ
ಹೃದಯ ಕಾಯಿಲೆ ಹೊಂದಿರುವವರಲ್ಲಿನ ತಪ್ಪು ಗ್ರಹಿಕೆಗೆ ವ್ಯತಿರಿಕ್ತವಾಗಿ, ಕಾಮಕೇಳಿಯು ಹೆಚ್ಚಿನ ಹೃದಯದ ರೋಗಿಗಳಿಗೆ ನಿಜವಾಗಿಯೂ ಸುರಕ್ಷಿತವಾಗಿದೆ. ನೀವು ಎರಡು ಸಾಲು ಮೆಟ್ಟಿಲುಗಳನ್ನು ಯಾವುದೇ ಉಸಿರಾಟದ ತೊಂದರೆ ಇಲ್ಲದೆ ಹತ್ತಬಹುದಾದರೆ ನೀವು ಸುರಕ್ಷಿತವಾಗಿ ಕಾಮಕೇಳಿಯಲ್ಲಿ ತೊಡಗಲು ಸಾಧ್ಯ ಎಂದು ತಜ್ಞರು ಹೇಳುತ್ತಾರೆ. ಅಷ್ಟು ಮಾತ್ರವಲ್ಲ ನಿರಂತರ ರತಿಕ್ರೀಡೆಯಲ್ಲಿ ತೊಡಗಿರುವವರಲ್ಲಿ ಅಧಿಕ ರಕ್ತದೊತ್ತಡ ಹಾಗೂ ಕೊಬ್ಬಿನಂಶ ಕಡಿಮೆಯಾಗಿರುತ್ತಲ್ಲದೆ ಉತ್ತಮ ರಕ್ತ ಪರಿಚಲನೆಯೂ ಇರುತ್ತದೆ ಎಂಬುದಾಗಿ ಅಧ್ಯಯನ ತಿಳಿಸುತ್ತದೆ.
ಮೂತ್ರಕೋಶದ ಸ್ನಾಯುಗಳ ಬಲವರ್ಧನೆ
ಲೈಂಗಿಕ ಕ್ರೀಡೆಯು ಮಾನವನ ಮೂತ್ರಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ.
ವ್ಯಕ್ತಿತ್ವದ ಸುಧಾರಣೆ
ಮೆಚ್ಚಿನ ಸಂಗಾತಿಯೊಂದಿಗೆ ನಿಯಮಿತವಾಗಿ ನಡೆಸುವ ರತಿಕ್ರೀಡೆಯು ನಿಮ್ಮ ಬಗ್ಗೆ ನಿಮ್ಮಲ್ಲಿ ಸಂತೃಪ್ತ ಭಾವನೆಯನ್ನು ಉಂಟು ಮಾಡುತ್ತದೆ.
ಅನ್ಯೋನ್ಯತೆ
ಕಾಮಕೇಳಿ ಸಂಗಾತಿಗಳಲ್ಲಿ ಪರಸ್ಪರ ಆಪ್ತತೆ ಹಾಗೂ ಅನ್ಯೋನ್ಯತೆಯನ್ನು ಉಂಟು ಮಾಡುವುದಲ್ಲದೇ ಆಕ್ಸಿಟೋಸಿನ್ ಎಂಬ ಚೋದಕಗಳನ್ನು ಹೆಚ್ಚುಹೆಚ್ಚು ಉತ್ಪಾದಿಸುತ್ತದೆ. ಇವು ಮಾನವನಲ್ಲಿ ನಿಕಟ ಬಂಧನ ಹಾಗೂ ವಿಶ್ವಾಸ ನಿರ್ಮಾಣದಲ್ಲಿ ಸಹಕಾರಿಯಾಗಿರುತ್ತದೆ.
ಉತ್ತಮ ನಿದ್ದೆ
ಕಾಮಕೇಳಿಯ ಪರಿಣಾಮ ಉತ್ಪತ್ತಿಯಾಗುವ ಆಕ್ಸಿಟೋಸಿನ್ ಚೋದಕಗಳ ಹೆಚ್ಚಳವು ಉತ್ತಮ ನಿದ್ದೆಯನ್ನು ತರುವಲ್ಲಿ ನೆರವಾಗುತ್ತದೆ. ಇದಕ್ಕಾಗಿಯೇ ಇರಬೇಕು, ದಂಪತಿಗಳು ಸಾಮಾನ್ಯವಾಗಿ ಪರಸ್ಪರ ಅಪ್ಪಿಮುದ್ದಾಡಿದ ಬಳಿಕ ಗಾಢ ನಿದ್ದೆಗೆ ಸರಿಯುವುದು. ಹೀಗೆ ಕಾಮಕೇಳಿ ಕೇವಲ ಒಂದು ಲೈಂಗಿಕ ತೃಷೆಯನ್ನು ನೀಗಿಸುವ ವಿಷಯವಾಗಿರದೆ ಆರೋಗ್ಯಪೂರ್ಣ ರತಿಕ್ರೀಡೆಯು ಸಂಗಾತಿಗಳಲ್ಲಿ ಸಂತೃಪ್ತಿ ಸಮಾಧಾನಗಳನ್ನೂ ನೀಡುತ್ತದೆ. ರತಿಕ್ರೀಡೆ ಉತ್ತಮ ದಾಂಪತ್ಯದ ಅತ್ಯುತ್ತಮ ಸಾಧನವಾಗಿದೆ.
-ಸುನಿಲ್, ಪುತ್ತೂರು
(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು http://www.magzter.com/IN/Express-Network-Private-Limited/Sakhi/Women%27s-Interest/40137ಗೆ ಭೇಟಿನೀಡಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


