ಸರ್ಜರಿಯೇ ಇಲ್ಲದೆ ಸಂಧಿವಾತ ನಿವಾರಣೆ
ಜಡ ಜೀವನಶೈಲಿಯೇ ಕಾಲು, ಕುತ್ತಿಗೆ, ಬುಜ, ಬೆನ್ನು ನೋವಿಗೆ ಕಾರಣ

ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆಯೊಂದೇ ಆಸ್ಟಿಯೋ ಅರ್ಥೈರೈಟಿಸ್ ಸಮಸ್ಯೆಗೆ ಪರಿಹಾರ ಎಂಬ ಪರಿಸ್ಥಿತಿ ಈಗ ಬದಲಾಗಿದೆ. ಅಡ್ಡ ಪರಿಣಾಮಗಳ ಭಯದಿಂದ ಅನೇಕರು ಶಸ್ತ್ರಿ ಚಿಕಿತ್ಸೆಗೆ ಹೆದರುತ್ತಾರೆ. ಅಲ್ಲದೇ, ಶಾಶ್ವತವಾಗಿಯೂ ಸಂಧುನೋವಿನಿಂದ ಮುಕ್ತಿ ಪಡಿಯಬೇಕೆನ್ನುವರಿಗೆ ಎಸ್‌ಪಿಎಂಎಫ್ ಅಯಸ್ಕಾಂತಿಯೀ ಚಿಕಿತ್ಸೆ ವರದಾನ.
ಈ ಆಧುನಿಕ ಯುಗದಲ್ಲಿ ಸಾಮಾನ್ಯ ರೋಗಗಳಲ್ಲಿ ಸಂಧಿವಾತವೂ ಒಂದು. ಬಹುವಿಧಗಳಲ್ಲಿ ಕಾಡುವ ಈ ನೋವಲ್ಲಿ ಆಸ್ಟಿಯೋ ಅರ್ಥರೈಟಿಸ್ ಹೆಚ್ಚು ಮಂದಿಯನ್ನು ಕಾಡುತ್ತದೆ. ಇದರಿಂದ ನಡೆದಾಡಲೂ ತೊಂದರೆಯಾಗುವುದಲ್ಲದೇ, ಸಂಧುನೋವು ಹಾಗೂ ಮರಗಟ್ಟುವಿಕೆ ಸಮಸ್ಯೆಯೂ ಕಾಡುತ್ತದೆ.
ಜಡ ಜೀವನಶೈಲಿಯೇ ಕಾಲು, ಕುತ್ತಿಗೆ, ಬುಜ, ಬೆನ್ನು ನೋವಿಗೆ ಕಾರಣ. ಇದೆ ಪರಿಸ್ಥಿತಿ ಮುಂದುವರಿದಲ್ಲಿ ಡೀಜನರೇಟಿವ್ ಡಿಸ್ಕ್ ಡಿಸೀಸ್ ಎಂಬ ಬೆನ್ನು ಮೂಳೆ ಸಮಸ್ಯೆಯೂ ಕಾಡಬಹುದು.
ಆಸ್ಟಿಯೋ ಅರ್ಥರೈಟಿಸ್ ಸಂಧುಗಳಲ್ಲಿ ನಿರಂತರವಾಗಿ ನೋವನ್ನುಂಟು ಮಾಡುವ ರೋಗ. ಸಂಧುಗಳ ಎಲುಬುಗಳ ತುದಿಯನ್ನು ಮುಚ್ಚುವ ಅಸ್ಥಿಮಜ್ಜೆಯನ್ನು ಕಾಲಕ್ರಮೇಣ ಹರಿದು ಹೋಗುವ ಹಾಗೆ ಮಾಡುತ್ತದೆ. ಇದರಿಂದ ಎಲುಬುಗಳು ಒಂದಕ್ಕೊಂದು ಉಜ್ಜತೊಡಗುತ್ತವೆ.
ವಯಸ್ಸಾದಂತೆಲ್ಲ, ಅದರಲ್ಲಿಯೂ ಸ್ಥೂಲಕಾಯವುಳ್ಳವರು ಅಥವಾ ಬೆಂಡಾದ ಕಾಲುಗಳನ್ನು ಹೊಂದಿರುವವರಲ್ಲಿ ಮೊಣಕಾಲು ಹಾಗೂ ಸೊಂಟದಲ್ಲಿ ಈ ಅರ್ಥರೈಟಿಸ್ ಕಾಣಿಸಿಕೊಳ್ಳುತ್ತದೆ. ಉಳಿದಂತೆ ಸಂಧು ಅಥವಾ ಸುತ್ತಮುತ್ತಲಿನ ಸ್ನಾಯುಗಳಲ್ಲಿ ಗಾಯಗಳಾದರೂ ಈ ನೋವು ಕಾಡುತ್ತದೆ.
ಸರ್ಜರಿ ಇಲ್ಲದ ಚಿಕಿತ್ಸೆ
ಬೆಂಗಳೂರಿನ ಎಸ್‌ಬಿಎಸ್ ಹೆಲ್ತ್ ಕೇರ್ ಮತ್ತು ಸಂಶೋಧನಾ ಕೇಂದ್ರ ಶಸ್ತ್ರಚಿಕಿತ್ಸೆ ಹೊರತಾದ ಎಸ್‌ಪಿಎಂಎಫ್ ತಂತ್ರಜ್ಞಾನದ ಮೂಲಕ ಸಂಧಿವಾತಕ್ಕೆ ಪರಿಹಾರ ಒದಗಿಸುತ್ತದೆ. ವಿದೇಶಗಳಿಂದ ಆಗಮಿಸಿದ ಸುಮಾರು 33 ರೋಗಿಗಳು ಇಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಈ ತಂತ್ರಜ್ಞಾನದ ಮೂಲಕ ಸಂಧಿವಾತಕ್ಕೆ ಪರಿಹಾರ ಒದಗಿಸುತ್ತದೆ.
ಈ ತಂತ್ರಜ್ಞಾವು ಆಸ್ಟಿಯೋ ಅರ್ಥೈರೈಟಿಸ್ ಸಮಸ್ಯೆಗೆ ಲಭ್ಯವಿರುವ ಏಕೈಕ ಚಿಕಿತ್ಸಾ ವಿಧಾನ. ಇದು ಹಾನಿಗೊಳಗಾದ ಅಸ್ತಿಮಜ್ಜೆಯನ್ನು ಪುನರುಜ್ಜೀವನಗೊಳಿಸುತ್ತದೆ. ಆಡ್ಡ ಪರಿಣಾಮವಿಲ್ಲದ ಈ ಚಿಕಿತ್ಸೆ ಮಂಡಿ ಬದಲಾವಣೆ ಶಸ್ತ್ರ ಚಿಕಿತ್ಸೆಗಿಂತಲೂ ಕಡಿಮೆ ವೆಚ್ಚದ್ದಾಗಿದೆ. ಎರಡು ಮೊಣಕಾಲು ಸಂಧುಗಳನ್ನು ಏಕಕಾಲದಲ್ಲಿ ಚಿಕಿತ್ಸೆಗೊಳಪಡಿಸಬಹುದು.
ಈ ಚಿಕಿತ್ಸೆಯ ಪರಿಣಾಮವಾಗಿ ನಡೆಯುವುದು ಸುಲಭವೂ, ಸ್ವಾಭಾವಿಕವಾಗುತ್ತದೆ. ಶಕ್ತಿ ಮತ್ತು ಸಾಮಾರ್ಥ್ಯ ವೃದ್ದಿಯಾಗುತ್ತದೆ. ರೋಗ ಉಲ್ಬಣಗೊಳ್ಳುವುದೂ ಇಲ್ಲ. ಚಿಕಿತ್ಸೆ ವೇಳೆ ರೋಗಿಗಳು ತಮ್ಮ ಸ್ವಾಭಾವಿಕ ಚಟುವಟಿಕೆಗಳಿಗೆ ಮರಳಬಹುದು.
ಆಸ್ಟಿಯೋ ಅರ್ಥೈರೈಟಿಸ್ ಸಮಸ್ಯೆಯಿಂದ ಬಳಲುವ ರೋಗಿಗಳು ಮೂರುವಾರಗಳಲ್ಲಿ ಈ ಚಿಕಿತ್ಸೆ ಪಡೆದುಕೊಳ್ಳಬಹುದು. ಮೊಣಕಾಲು, ಕೆಳಬೆನ್ನು, ಸೊಂಟ ಹಾಗೂ ಕಾಲಲ್ಲಿ ಕಾಣುವ ಸಮಸ್ಯೆಗಳನ್ನು ಈ ಚಿಕಿತ್ಸೆ ನಿವಾರಿಸುತ್ತದೆ.
ಏನಿದು ಎಸ್‌ಪಿಎಮ್‌ಎಫ್ ಚಿಕಿತ್ಸೆ?
ಎಸ್‌ಪಿಎಮ್‌ಎಫ್ ತುಂಬಾ ಕಾರ್ಯಶೀಲವುಳ್ಳ ಅಯಸ್ಕಾಂತೀಯ ಗುಣಗಳನ್ನು ಉತ್ಪಾದಿಸುವ ಒಂದು ತಂತ್ರಜ್ಞಾನ. ಇದು ಅಕ್ಟೀಸ್ ಎಂಬ ಯಂತ್ರದ ಮೂಲಕ ನಿಯಂತ್ರಿಸಲ್ಪಡುತ್ತವೆ.
ಇದನ್ನು ಲೇಸರ್ ಗೈಡ್‌ಗಳ ಸಹಾಯದಿಂದ ಉದ್ದೇಶಿತ ಜೀವಕೋಶಗಳ ಮೇಲೆ ನಿಖರವಾಗಿ ಕೇಂದ್ರೀಕರಿಸಿ ಪ್ರಯೋಗಿಸಲಾಗುತ್ತದೆ. ಈ ಚಿಕಿತ್ಸೆ ಸುಮಾರು ಶೇ.22- ಶೇ.39 ಮಂದಿಯನ್ನು ಕಾಡುವ ಮೂಳೆ ಸಂಧಿವಾತಕ್ಕೆ ಸೂಕ್ತ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಎಸ್‌ಬಿಎಫ್ ಹೇಲ್ತ್ ಸೆಂಟರ್ ಮತ್ತು ಸಂಶೋಧನಾ ಕೇಂದ್ರ, ಮಾರತಹಳ್ಳಿ ಮತ್ತು ಜೆ.ಪಿ.ನಗರ, ಬೆಂಗಳೂರು. ದೂರವಾಣಿ 080-42116555, 42116565
-ನಿವೃತ್ತ ವಿಂಗ್ ಕಮಾಂಡರ್ ಡಾ.ವಸಿಷ್ಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


