ಚಿಕಿತ್ಸೆಗೂ ಇಎಂಐ
ಮನೆಗೆ ಬೇಕಾದ ವಸ್ತುಗಳನ್ನು ಇಎಂಐ ಕೊಟ್ಟು ತಂದು ಬಿಡಬಹುದು. ತಾರದಿದ್ದರೂ ಬದುಕ್ಲಿಕ್ಕೆ

ಮನೆಗೆ ಬೇಕಾದ ವಸ್ತುಗಳನ್ನು ಇಎಂಐ ಕೊಟ್ಟು ತಂದು ಬಿಡಬಹುದು. ತಾರದಿದ್ದರೂ ಬದುಕ್ಲಿಕ್ಕೆ ತೊಂದರೆಯಿಲ್ಲ. ಆದರೆ, ಮನುಷ್ಯನಿಗೆ ಕಾಯಿಲೆ ಬಂದಾಗ ಮಾತ್ರ ದುಡ್ಡಿಲ್ಲದವರ ಪರದಾಟ ಹೇಳತೀರದು.
ಆಗಲೂ ತುರ್ತು ಚಿಕಿತ್ಸೆ ಪಡೆಯಲು ಇಂಥದ್ದೇ ಇಎಂಐ ಇರಬಾರದಾ ಎನಿಸುವುದುಂಟು. ಸಂತೋಷವೆಂದರೆ ವೈದ್ಯಕೀಯ ಚಿಕಿತ್ಸೆಯನ್ನೂ ಇಎಂಐ ಮೂಲಕ ತೀರಿಸಲು ವೈದ್ಯಕೀಯ ಉಪಕರಣ ಸಂಸ್ಥೆಯೊಂದು ಮುಂದಾಗಿದೆ.
ಬಡವರ ಸ್ನೇಹಿಯಾದ ಇಂಥದ್ದೊಂದು ಯೋಜನೆಗೆ ವೈದ್ಯಕೀಯ ಸಾಧನಗಳ ಕಂಪನಿಯೊಂದು 'ಬ್ಯಾಕ್ ಟು ಲೈಫ್' ಅಭಿಯಾನ ಕೈಗೊಂಡಿದೆ.
ಇದರ ಸಹಾಯದಿಂದಲೇ ಬಾಲ್ಯದಿಂದಲೂ ಸ್ಕೋಲಿಯಾಸಿಸ್ ಎಂಬ ಬೆನ್ನೆಲುಬು ಸಮಸ್ಯೆಯಿಂದ ಬಳಲುತ್ತಿದ್ದ 12 ವರ್ಷದ ಬಾಲಕಿಯೊಬ್ಬಳಿಗೆ ಮರುಜನ್ಮ ಬಂದಿದೆ.
ಎದ್ದು ನಿಲ್ಲಲೂ ಆಗದಂಥ ಸಂಕಷ್ಟವನ್ನು ಎದುರಿಸುತ್ತಿದ್ದ ಗದಗದ ಅನೂಷ್ಕಾ ಚಿಕ್ಕೊಪ್ಪಡ್ ತಂದೆ ರಾಮಪ್ಪ ಕೆಎಸ್‌ಆರ್‌ಟಿಸಿಯಲ್ಲಿ ಕಂಡಕ್ಟರ್, ಮಿಲ್ಲರ್ಸ್ ರೋಡ್‌ನ ಜೈನ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೈನ್ ಕೇರ್ ಆ್ಯಂಡ್ ರಿಸರ್ಚ್‌ನಲ್ಲಿ ದಾಖಲಾದ ಮಗಳ ಚಿಕಿತ್ಸೆಗೆ ರು.2 ಲಕ್ಷ ಹೊಂದಿಸೋದು ಸುಲಭವಾಗಿರಲಿಲ್ಲ.
ಮಗಳನ್ನು ನೋಡಿದರೆ ಸಂಕಟವಾಗುತ್ತಿದ್ದ ಅನೂಷ್ಖಾ ತಂದೆಗೆ ಬ್ಯಾಕ್ ಟು ಲೈಫ್ ಅಭಿಯಾನದ ನೆರವಿನಿಂದ ಫ್ಯೂಷನ್ ಶಸ್ತ್ರಚಿಕಿತ್ಸೆಗೆ ಅಗತ್ಯವಾದ ಸ್ಪೈನಲ್ ಇಂಪ್ಲಾಂಡ್‌ಗಳಿಗೆ ಈ ಯೋಜನೆ ಸಹಕರಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


