ಆರೋಗ್ಯ-ಜೀವನಶೈಲಿ

ಸಂಧಿವಾತಕ್ಕೆ SPMF ಬಾಣ!

ಸಂಧಿವಾತಕ್ಕೆ SPMF ಬಾಣ!
Published On :

ಮೂಳೆ ಸಂಧು ಮತ್ತು ಮೊಣಕಾಲಿನ ನೋವಿನ ನಿವಾರಣೆಯಲ್ಲಿ ಚಮತ್ಕಾರಯುತ ಚಿಕಿತ್ಸೆಯೊಂದು ಅದೆಷ್ಟೋ ಜನರು ನಿರಾಳವಾಗಿರುವಂತೆ ಮಾಡಿದೆ ಎಂದರೆ ನೀವು ನಂಬಲೇಬೇಕು. ಅದುವೇ 'ಎಸ್‌ಪಿಎಂಎಫ್‌' ಚಿಕಿತ್ಸೆ.
ಕೂತಲ್ಲಿ ಕೂರಲಾರದೇ, ನಿಂತಲ್ಲಿ ನಿಲ್ಲಲಾರದೇ, ಹತ್ತಡಿ ಹೆಜ್ಜೆಯಿಟ್ಟು ಸ್ವಕಾರ್ಯ ಮಾಡಿಕೊಳ್ಳಲಾರದೇ ಮೂಳೆ ಸಂಧಿ ನೋವು ಎಂದು ನರಳುವವರಿಗೆ ಈ ವಿನೂತನ ಚಿಕಿತ್ಸೆ ವರದಾನ. ವಿಶ್ವದ ಮೊದಲ ವೈಜ್ಞಾನಿಕ ಹಾಗೂ ಪ್ರಮಾಣೀಕೃತ, ಮುಖ್ಯವಾಗಿ ಶಸ್ತ್ರಚಿಕಿತ್ಸೆಯಲ್ಲದ ಸಂಧಿ ನೋವು ನಿವಾರಕ ಚಿಕಿತ್ಸೆ ಎಂಬ ಹೆಗ್ಗಳಿಕೆ ಕೂಡ ಇದಕ್ಕಿದೆ.

ಏನಿದು ಎಸ್‌ಪಿಎಂಎಫ್ ಚಿಕಿತ್ಸೆ?
ಎಸ್‌ಟಿಎಂಎಫ್ ಚಿಕಿತ್ಸೆ ತುಂಬ ಕಾರ್ಯಶೀಲವುಳ್ಳ ಮೆಗ್ನೇಟಿಕ್(ಆಯಸ್ಕಾಂತೀಯ) ಗುಣಗಳನ್ನು ಉತ್ಪಾದಿಸುವ ಒಂದು ತಂತ್ರಜ್ಞಾನ. ಇದು ಅಕ್ಟಿಸ್ ಎಂಬ ಯಂತ್ರದ ಮೂಲಕ ನಿಯಂತ್ರಿತವಾಗಿರುತ್ತದೆ. ಇದನ್ನು ಲೇಸರ್‌ಗ್ಲೈಡ್‌ಗಳ ಸಹಾಯದಿಂದ ಉದ್ದೇಶಿತ ಜೀವಕೋಶಗಳ ಮೇಲೆ ನಿಖರವಾಗಿ ಕೇಂದ್ರೀಕರಿಸಿ, ಪ್ರಯೋಗಿಸಲಾಗುತ್ತದೆ. ಇವು ಥರ್ಮಲ್‌ವೂ ಅಲ್ಲದ, ಅಯೋನೈಜಿಂಗ್‌ವೂ ಅಲ್ಲದ ಚಿಕಿತ್ಸೆ. ಯಾವುದೇ ಅಡ್ಡ ಪರಿಣಾಮಗಳೂ ಇರುವುದಿಲ್ಲ. ಮೂಳೆ ಸಂಧಿವಾತ ಅತ್ಯಂತ ಸಾಮಾನ್ಯ ತೊಂದರೆಯಾಗಿದೆ ಹಾಗೂ ಶೇ.22ರಿಂದ 39ರಷ್ಟು ಜನರಿಗೆ ಈ ಸಮಸ್ಯೆ ಇದೆ. ಈ ತೊಂದರೆ ಹೆಚ್ಚಾಗಿ ಹಿರಿಯರಲ್ಲಿ ಕಾಣಿಸಿಕೊಳ್ಳುತ್ತದೆ.

ಹೇಗಾಗುತ್ತದೆ?
ಮೂಳೆ ಸಂದುಗಳು ಹಂತ ಹಂತವಾಗಿ ಸವೆಯಲು ಆರಂಭವಾಗುತ್ತವೆ. ಸಂದು ಮೃದ್ವಸ್ಥಿ ಒಂದು ನಾಳೀಯವಲ್ಲದ, ನರಕ್ಕೆ ಸಂಬಂಧಿಸಿರದ ಆಕೃತಿಯಾಗಿದ್ದು, ಇದು ಮೂಳೆಯ ಸಂಧಿನ ತುದಿಗಳಿಗೆ ಲಗತ್ತಿಸಿರುತ್ತದೆ. ಮೃದ್ವಸ್ಥಿಯ ನಿರಂತರ ಆಂತರಿಕ ದೈಹಿಕ ಮರುರೂಪ ಪೈಝೋಎಲೆಕ್ಟ್ರಿಕ್ ಉತ್ತೇಜಕವಾಗಿದೆ(ಅಂದರೆ ಮೃದ್ವಸ್ಥಿಯ ಸಂಕುಚಿತಗೊಳಿಸುವ ಸಂದರ್ಭದಲ್ಲಿ ದುರ್ಬಲ ಎಲೆಕ್ಟ್ರೋಮ್ಯಾಗ್ನೆಟಿಕ್ ಕ್ಷೇತ್ರಗಳ ಉತ್ಪಾದನೆ).

ಐಸಿಎನ್‌ಐಆರ್‌ಪಿ ಮಾನ್ಯತೆ
ಎಸ್‌ಪಿಎಂಎಫ್ ಚಿಕಿತ್ಸೆ ನೋವುರಹಿತ ಹಾಗೂ ಸುರಕ್ಷಿತ ಚಿಕಿತ್ಸೆಯಾಗಿದೆ. ಅಯೋನೈಜಿಂಗ್ ಅಲ್ಲದ ವಿಕಿರಣ ರಕ್ಷಣೆಗಾಗಿರುವ ಅಂತರಾಷ್ಟ್ರೀಯ ಸಮಿತಿ(ಐಸಿಎನ್‌ಐಆರ್‌ಪಿ) ಮಾನವ ಬಳಕೆಗೆ ಸುರಕ್ಷಿತವೆಂದು ಪರಿಗಣಿಸಿದೆ. ಎಸ್‌ಪಿಎಂಎಫ್ ವಿದ್ಯುದೀಯ ಹಾಗೂ ಆಯಸ್ಕಾಂತೀಯ ಕ್ಷೇತ್ರ ಹೊರಸೂಸುವಿಕೆಗಳೆರಡೂ ಅತ್ಯಂತ ಸುರಕ್ಷಿತ.

ಲಾಭಗಳೇನು?
*    ಮಂಡಿ, ಕೆಳಬೆನ್ನು, ಸೊಂಟ ಮತ್ತು ಹಿಮ್ಮಡಿಗಳ ಸಮಸ್ಯೆಗಳಿಗೆ ಈ ಚಿಕಿತ್ಸೆ ಪರಿಣಾಮಕಾರಿ.
*    ಛೇದ ರಹಿತ, ನೋವಿಲ್ಲದ ಮತ್ತು ಅಡ್ಡ ಪರಿಣಾಮಗಳಿಲ್ಲದ ಚಿಕಿತ್ಸೆ.
*    ಶಸ್ತ್ರ ಚಿಕಿತ್ಸೆಗಿಂತ ಕಡಿಮೆ ದರದ ಪರ್ಯಾಯ ಚಿಕಿತ್ಸೆ.
*    ಎರಡೂ ಮೊಣಕಾಲುಗಳಿಗೆ ಒಂದೇ ಬಾರಿ ಚಿಕಿತ್ಸೆ ನೀಡಬಹುದು.
*    ಇದು ವ್ಯಕ್ತಿಯ ಚಲನಶೀಲತೆಯನ್ನು ಹೆಚ್ಚಿಸುತ್ತದೆ.
*    ಸಂದುಗಳ ಬಲ ಹಾಗೂ ಸ್ಥಿರತೆಯನ್ನು ವರ್ಧಿಸುತ್ತದೆ.
*    ರೋಗದ ಉಲ್ಬಣಗೊಳ್ಳಿವಿಕೆಯನ್ನು ತಡೆಯುತ್ತದೆ.
*    ಚಿಕಿತ್ಸೆಯ ಸಮಯದಲ್ಲಿ ರೋಗಿಯು ತನ್ನ ಎಂದಿನ ಚಟುವಟಿಕೆಯನ್ನು ಮುಂದುವರಿಸಬಹುದು.

ಕ್ರಮ ಹೇಗೆ?
ಮೂರು ವಾರಗಳ ಈ ಚಿಕಿತ್ಸೆಯಲ್ಲಿ ಅಕ್ಟಿಸ್ ಎಂಬ ಕಂಪ್ಯೂಟರ್ ನಿಯಂತ್ರಿತ ಉಪಕರಣವು ದಿನಕ್ಕೆ ಒಂದು ಗಂಟೆ ಕ್ರಮಾನುಗತವಾಗಿ ರೂಪಿಸಿದ ಆಯಸ್ಕಾಂತೀಯ ಕ್ಷೇತ್ರಗಳನ್ನು ಹಾಯಿಸುತ್ತದೆ. ಪ್ರತಿದಿನ ಚಿಕಿತ್ಸೆಗೆ ಬೇಕಾಗುವ ಸಮಯ 60 ನಿಮಿಷ. ಎಸ್‌ಬಿಎಫ್ ಹೆಲ್ತ್‌ಕೇರ್ ಪ್ರಸ್ತುತ ಬೆಂಗಳೂರು ಹಾಗೂ ಮುಂಬೈಯ ಎರಡು ಕೇಂದ್ರಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಇದರ ರೂವಾರಿ ಡಾ. ವಿ.ಜಿ. ವಸಿಷ್ಠ.

ಚಿಕಿತ್ಸೆ ಪ್ರಾರಂಭ ಹೇಗಾಯ್ತು?
ಐಎಎಂ, ಐಎಎಫ್ ಬೆಂಗಳೂರಿನಲ್ಲಿ ಪ್ರಮುಖ ಸಂಶೋಧಕರಾದ, ನಿವೃತ್ತ ವಿಂಗ್ ಕಮಾಂಡರ್ ಡಾ. ವಿ. ಜಿ. ವಸಿಷ್ಠಹಾಗೂ ರೇಡಿಯೋ-ಡಯಗ್ನಾಸಿಸ್ ಇಲಾಖೆ ಪ್ರೊಫೆಸರ್ ಹಾಗೂ ಮುಖ್ಯಸ್ಥರ ನೇತೃತ್ವದಲ್ಲಿ ಆಯಸ್ಕಾಂತೀಯ ಚಿಕಿತ್ಸೆ ಆವಿಷ್ಕಾರ ಮಾಡಲಾಯಿತು.
2004ರಲ್ಲಿ ಭಾರತೀಯ ವಾಯುಸೇನೆಯ ಒಂದು ಸಂಸ್ಥೆಯಾದ ಇನ್ಸಿಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್‌ನಲ್ಲಿ ವೈದ್ಯಕೀಯ ಪ್ರಯೋಗಗಳು ಪ್ರಾರಂಭವಾದವು. ಈ ವೈದ್ಯಕೀಯ ಪ್ರಯೋಗಗಳನ್ನು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‌ನ ಆಶ್ರಯದಲ್ಲಿ ಐಎಎಂ ನೀತಿ ಸಮಿತಿಯು ಅನುಮೋದಿಸಿತು. ಮೂಳೆ ಸಂಧಿವಾತದ ಹಂತ 1 ಮತ್ತು 2 ಪ್ರಯೋಗಗಳು ಕೊನೆಗೊಂಡವು. ತದನಂತರ ಸಂಧಿನೋವು ನಿವಾರಣೆಯಲ್ಲಿ ಇದೊಂದು ಅತ್ಯಂತ ಯಶಸ್ವಿ ಚಿಕಿತ್ಸೆ ಎಂಬುದಾಗಿ ನಿರೂಪಿತವಾಯಿತು.
ಈಗಾಗಲೆ 2000ಕ್ಕೂ ಹೆಚ್ಚು ಸಂಧಿವಾತ ನೋವಿದ್ದವರಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ. ಜಗತ್ತಿನ 33 ದೇಶಗಳಿಂದ ಜನರು ಬರುತ್ತಿದ್ದಾರೆ ಎಂದರೆ ಈ ತಂತ್ರಜ್ಞಾನದ ಗುಣಾತ್ಮಕ ಪರಿಣಾಮ ಬಗ್ಗೆ ಇನ್ನಷ್ಟು ವಿಶ್ವಾಸ ವೃದ್ಧಿಯಾಗುತ್ತದೆ.

ಯಾರನ್ನು ಸಂಪರ್ಕಿಸಬೇಕು?
ಎಸ್‌ಪಿಎಂಎಫ್ ಚಿಕಿತ್ಸೆ ಕುರಿತು ಹೆಚ್ಚಿನ ಮಾಹಿತಿಗೆ ಬೆಂಗಳೂರಿನ ಮಾರತಹಳ್ಳಿಯಲ್ಲಿರುವ ಎಸ್.ಬಿ.ಎಫ್.ಹೆಲ್ತ್‌ಕೇರ್ ಸಂಪರ್ಕಿಸಿ. ದೂರವಾಣಿ:  080-42116555 ಅಥವಾ 080-42116565.
ಜೀವ ಹಿಂಡುವ ಮೊಳಕಾಲು ನೋವಿಗೆ ಎಸ್‌ಬಿಎಫ್‌ನಿಂದ ಮಿರಾಕಲ್ ಚಿಕಿತ್ಸೆ
ನಿತ್ಯದ ಯಾವ ಕಾರ್ಯವನ್ನೂ ಮಾಡಲಾಗುತ್ತಿರಲಿಲ್ಲ. ಸದಾ ನೋವು ಮತ್ತು ಸೆಳೆತ. ನನಗೆ ಶಸ್ತ್ರ ಚಿಕಿತ್ಸೆ ಮಾಡಿಕೊಳ್ಳುವ ಇಚ್ಛೆ ಇರಲಿಲ್ಲ. ಶಸ್ತ್ರ ಚಿಕಿತ್ಸೆ ಮತ್ತೆ ಅಡ್ಡ ಪರಿಣಾಮಕ್ಕೆ ಸೈಡ್ ಎಫೆಕ್ಟ್‌ಗೆ ಕಾರಣವಾದೀತು ಎಂಬ ಭಯದಿಂದ ಕೆಲವು ಕಾಲ ತಳ್ಳಿದೆ. ಮೊಣಕಾಲಿನ ಸಂಧಿನೋವಿನ ಕಾರಣದಿಂದಾಗಿ ಎಲ್ಲರಂತೆ ಸಂತಸದಿಂದ ಇರಲಾಗುತ್ತಿರಲಿಲ್ಲ. ಕೊನೆಗೆ ಎಸ್.ಬಿ.ಎಫ್ ಹೆಲ್ತ್ ಕೇರ್‌ನ ಡಾ. ವಿ. ಜಿ. ವಸಿಷ್ಠ ಅವರು ಎಸ್‌ಪಿಎಂಫ್ ಚಿಕಿತ್ಸೆ ನೀಡಿದರು. ಈಗ ಆರಾಮ ಇದ್ದೇನೆ. ಮೊಣಕಾಲು ನೋವು ಇಲ್ಲವೇ ಇಲ್ಲ.
- ಜಯಮಂಗಳ (66 ವಯಸ್ಸ), ಕೊಯಮತ್ತೂರು

ಹಲವು ವರ್ಷಗಳಿಂದ ಮೊಣಕಾಲು ನೋವು ಇತ್ತು. ಏನೆಲ್ಲಾ ಚಿಕಿತ್ಸೆ ಮಾಡಿದೆ. ಏನೂ ಪ್ರಯೋಜನವಾಗಲಿಲ್ಲ. ನಂತರ ಎಸ್‌ಪಿಎಂಎಫ್ ಚಿಕಿತ್ಸೆ ಬಗ್ಗೆ ಕೇಳಿ ಪ್ರಯತ್ನಿಸೋಣ ಎಂದುಕೊಂಡೆ. ಪ್ರಯತ್ನ ಫಲ ನೀಡಿತು. ಅಮೂಲಾಗ್ರವಾಗಿ ನೋವು ಈ ನಿವಾರಣೆಯಾಗಿದೆ.


- ವೈದೇಹಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.