ಫಿಟ್ ಹೈ ಬಾಸ್

ನಮ್ಮ ವರ್ಕಿಂಗ್ ಸ್ಟೈಲ್ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಹೊಟ್ಟೆ ತುಂಬಾ ತಿನ್ನುವುದು, ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವುದು. ಪರಿಣಾಮ ಪುಕ್ಕಟೆಯಾಗಿ ಬೊಜ್ಜು. ಹೊಟ್ಟೆ ಹಾಗೂ ಸೊಂಟದ ಸುತ್ತಳತೆ ಹೆಚ್ಚಾಗಲು ಇದು ಕಾರಣವಾಗಿದೆ. ಒಂದೊಮ್ಮೆ ಬೊಜ್ಜು ಬಂತೆಂದರೆ ಕಡಿಮೆಯಾಗಲು ಸಾಕಷ್ಟು ಕಸರತ್ತು ಮಾಡಬೇಕಾಗುತ್ತದೆ. ಇದಕ್ಕೆ ಬದಲಾಗಿ ಬೊಜ್ಜು ಬಾರದಂತೆ ಒಂದಿಷ್ಟು ಅಗತ್ಯ ಕ್ರಮ ಅನುಸರಿಸಿದರೆ ತಾಪತ್ರಯವೇ ಇಲ್ಲ.
ಹಾಗೆಂದ ಮಾತ್ರಕ್ಕೆ ಜಿಮ್ಗೆ ಹೋಗಿ ಗಂಟೆಗಟ್ಟಲ್ ಬೆವರು ಸುರಿಸಬೇಕೆಂದೇನೂ ಇಲ್ಲ. ದೈನಂದಿನ ಚಟುವಟಿಕೆಯಲ್ಲಿ ಒಂದಿಷ್ಟು ಬದಲಾವಣೆಯನ್ನು ಅಳವಡಿಸಿಕೊಂಡರೆ ಖಂಡಿತ ಆರೋಗ್ಯ ಕಾಯ್ದುಕೊಳ್ಳಬಹುದು. ಒಂದಿಷ್ಟು ಸರಳ-ಸುಲಲಿತ ಟಿಪ್ಸ್ ಇಲ್ಲಿದೆ ನೋಡಿ.
* ವ್ಯಾಯಾಮ ಇಲ್ಲದ ದೇಹ ರೋಗದ ಗೂಡು. ಹೀಗಾಗಿ ದಿನಕ್ಕೆ ಕನಿಷ್ಟ ಅರ್ಧ ಗಂಟೆ ವ್ಯಾಯಾಮಕ್ಕಾಗಿ ಮೀಸಲಿಡಿ. ಇದರಿಂದ ಸುಂದರ ಮೈಕಟ್ಟು ಪಡೆಯುವುದರೊಂದಿಗೆ ಆಕರ್ಷವಾಗಿಯೂ ಕಾಣುವಿರಿ.
* ಆಹಾರ ರುಚಿಕಟ್ಟಾಗಿದೆ ಎಂದು ಬೇಕಾಬಿಟ್ಟಿಯಾಗಿ ತಿನ್ನುವುದು ಸರಿಯಲ್ಲ. ಅದರಲ್ಲೂ ಕುಳಿತು ಕೆಲಸ ಮಾಡುವವರು ಲಘು ಆಹಾರ ಸೇವನೆ ಮಾಡಬೇಕು.
* ಮುಂಜಾನೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿಗೆ ನಿಂಬೆ ರಸ ಹಾಗೂ ಜೇನುತುಪ್ಪ ಬೆರೆಸಿ ಸೇವಿಸಬೇಕು.
* ಚಹಾ ಸೇವನೆಯ ಚಟದಿಂದ ದೂರವಿರುವುದೇ ಒಳಿತು. ಒಂದೊಮ್ಮೆ ಚಹಾ ಕುಡಿಯಬೇಕೆಂದರೆ ಗ್ರೀನ್ ಟೀ ಒಳ್ಳೆಯದು.
* ಅನ್ನ ಸೇವನೆಯಿಂದ ದೂರವಿದ್ದರೆ ಒಳ್ಳೆಯದು. ಕೆಂಪಕ್ಕಿ ಸೇವನೆ ಓಕೆ. ದವಸ ಧಾನ್ಯ, ತರಕಾರಿ ಹೆಚ್ಚಾಗಿ ಸೇವಿಸಿ.
* ಕರಿದ ತಿಂಡಿ-ತಿನಿಸುಗಳಿಂದ ದೂರವಿರಿ. ಸಿಹಿ ತಿಂಡಿ ಸೇವನೆ ಕಡಿಮೆ ಮಾಡಿ.
* ಮೊಳಕೆ ಬರಿಸಿದ ಕಾಳುಗಳು ಸೂಕ್ತ. ಆಹಾರ ಕ್ರಮದಲ್ಲಿ ಇದನ್ನು ಸೇರಿಸಿಕೊಳ್ಳುವುದು ಒಳ್ಳೆಯ ಮಾರ್ಗ.
* ಆಲೀವ್ ಎಣ್ಣೆ ಹೊಟ್ಟೆಯ ಬೊಜ್ಜು ಕರಗಿಸುತ್ತದೆ. ಹೀಗಾಗಿ ಅಡುಗೆಯಲ್ಲಿ ಆಲೀವ್ ಆಯಿಲ್ ಬಳಸಿ.
* ಭರಪೂರ ನೀರು ಕುಡಿದರೆ ಆರೋಗ್ಯಕ್ಕೆ ಹಿತಕರ.
- ಪ್ರಕಾಶ ಎಸ್. ಶೇಟ್
prakashjoida@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


