ಕಾಲು 'ಪದ' ಹಾಡುತ್ತಾ?
ನಮ್ಮಲ್ಲಿ ಮಹಿಳೆಯರ ಹೊರತಾಗಿ ಪಾದದ ಆರೈಕೆ ಕುರಿತು ಯಾರೂ ಹೆಚ್ಚು ಗಮನ...

ನಮ್ಮಲ್ಲಿ ಮಹಿಳೆಯರ ಹೊರತಾಗಿ ಪಾದದ ಆರೈಕೆ ಕುರಿತು ಯಾರೂ ಹೆಚ್ಚು ಗಮನ ಕೊಡುವುದಿಲ್ಲ. ಹೆಚ್ಚಿನ ಮಂದಿ ವಯಸ್ಸಾದ ಮೇಲೆ ಪಾದದ ನೋವು ಬರುತ್ತದೆ ಎಂದು ಭಾವಿಸಿ, ಅದನ್ನು ಸಹಜವಾಗಿ ಸ್ವೀಕರಿಸಿ, ನೋವಿನ ಜೊತೆಗೇ ನಡೆಯುತ್ತಾರೆ. ಕೆಲವು ಸಮಸ್ಯೆಗಳು ಬಂದೇ ಬರುತ್ತವೆ ಎನುವುದು ನಿಜವಾದರೂ, ಕೆಲವು ಸಮಸ್ಯೆಗಳು ಬರುವುದನ್ನು ಖಂಡಿತ ತಡ ಮಾಡಬಹುದಾಗಿದೆ.
ವಯಸ್ಸಿನ ಜೊತೆ ಕಾಣಿಸುವ ಸಾಮಾನ್ಯ ಪಾದದ ತೊಂದರೆಗಳೆಂದರೆ ಕೀಲುನೋವು, ಪಾದಕ್ಕೆ ಸೋಪಾನದಂತಿರುವ ಕೊಬ್ಬಿನ ಹೊದಿಕೆ ತೆಳುವಾಗುವುದು, ಪಾದದ ಅಂಗಾಂಶದ ಉರಿಯೂತ, ಹೆಬ್ಬೆರಳಿನ ಕೀಲಿನ ತಳ ದೊಡ್ಡದಾಗುವುದು, ರಕ್ತಸಂಚಲನೆ ಕಡಿಮೆಯಾಗುವುದು ಮತ್ತು ಉಗುರಿಗೆ ಪಾಚಿ ಕಟ್ಟುವುದು.
ಈ ಕೆಳಗಿನ ಪ್ರಶ್ನೆಗಳು ನೀವು ವಯಸ್ಸಾಗುತ್ತಿದ್ದಂತೆ ಪಾದದ ಕುರಿತು ಎಷ್ಟು ನಿಗಾವಹಿಸಬೇಕು ಎನುವುದನು ಹೇಳುತ್ತವೆ.
ಅತಿತೂಕ ಹೊಂದಿದ್ದೀರಾ?
ನಿಮ್ಮ ತೂಕದ ಶೇಕಡಾ 120ರಷ್ಟು ಬಲ ನಿಮ್ಮ ಪಾದದ ಮೇಲಿರುತ್ತದೆ. ಬೊಜ್ಜು ನಿಮ್ಮ ಪಾದಕ್ಕೆ ಆಸರೆಯಾಗಿರುವಂತ ಎಲ್ಲಾ ಅಂಗಗಳ ಮೇಲೆ ಒತ್ತಡ ಹಾಕುತ್ತದೆ. ಇದರಿಂದ ಪಾದದ ಅಂಗಾಂಶದ ಊತ, ಪಾದದ ನೋವು ಕಾಣಬಹುದು. ಜೊತೆಗೆ ಮೊದಲೇ ಪಾದದ ಸಮಸ್ಯೆಗಳೇನಾದರೂ ಇದ್ದಲ್ಲಿ ಇನಷ್ಟು ದುಷ್ಪರಿಣಾಮ ಉಂಟು ಮಾಡುತ್ತದೆ.
ನಿಮಗೆ ಸಕ್ಕರೆಕಾಯಿಲೆ ಇದೆಯೇ?
ಹೃದಯದಿಂದ ಬಲುದೂರವಿರುವುದರಿಂದ, ಪಾದ ರಕ್ತಸಂಚಲನೆಯಲ್ಲಿನ ಮತ್ತು ಅಲ್ಲಿ ಸ್ಪರ್ಶದ ಅನುಭವ ಕಡಿಮೆಯಾಗುವ ತೊಂದರೆಗಳು ಹೆಚ್ಚಾಗಿ, ಗಾಯ ಸರಿಯಾಗಿ ಮಾಗದಿರಬಹುದು ಮತ್ತು ಆ ಭಾಗವನು ಕತ್ತರಿಸಬೇಕಾಗಬಹುದು.
ಡಯಾಬಿಟಿಸ್ ಇರುವವರು ವರ್ಷಕ್ಕೊಮ್ಮೆಯಾದರೂ ವೈದ್ಯರ ಬಳಿ ಪಾದದ ಪರೀಕ್ಷೆ ಮಾಡಿಸಬೇಕು ಮತ್ತು ತರಚುವಂತ, ಒತ್ತಡವಾಗುವಂತ ಪಾದರಕ್ಷೆ ಧರಿಸಕೂಡದು.
ರಕ್ತಸಂಚಲನೆ ಸರಿಯಾಗಿ ಆಗುತ್ತಿಲ್ಲವೇ?
ನಿಮಗೆ ರಕ್ತನಾಳಗಳ ತೊಂದರೆಯಿದ್ದು, ಕಾಲಿನ ನರಬಳ್ಳಿಯೆಲ್ಲಾ ಸಂಕುಚಿತವಾಗಿದ್ದರೆ ಪಾದಕ್ಕೆ ಸಮಸ್ಯೆಯಾಗುವ ಅವಕಾಶ ಹೆಚ್ಚು. ಧೂಮಪಾನದಿಂದ ರಕ್ತಸಂಚಾರಕ್ಕೆ ಸಮಸ್ಯೆಯಾಗುತ್ತದೆ.
ನಿಮ್ಮ ಪೋಷಕರು ಪಾದದ ತೊಂದರೆಗಳಿಗೆ ದೂರುತ್ತಾರಾ?
ಫ್ಯಾಮಿಲಿ ಹಿಸ್ಟರಿ ಅಂದರೆ ಕುಟುಂಬದಲ್ಲಿ ಯಾರಿಗಾದರೂ ಈ ಸಮಸ್ಯೆ ಇದ್ದಲ್ಲಿ ಅದು ನಿಮಗೆ ರಿಸ್ಕ್ ತರುವಅವಕಾಶ ಇರುತ್ತದೆ.
ನಿಮಗೆ ಸಮತಟ್ಟಾದ ಪಾದವಿದೆಯೇ?
ಇವೆರಡೂ ಪಾದಕ್ಕೆ ರಿಸ್ಕ್. ಸಮತಟ್ಟಾದ ಪಾದವಿದ್ದರೆ, ಸಾಯುಗಳು ಮತ್ತು ಟೆಂಡನ್ಗಳು ಎಳೆತಕ್ಕೊಳಗಾಗಿ ದುರ್ಬಲವಾಗುತ್ತಾ ಹೋಗುತ್ತವೆ. ಇದರಿಂದ ಆರ್ಥೈಟಿಸ್ ಕೂಡಾ ಆಗುತ್ತದೆ. ಕಮಾನಿನಂತಹ ಪಾದವಿದ್ದಲ್ಲಿ ಶಾಖ ಹೀರುವ ಶಕ್ತಿಕಡಿಮೆಯಾಗಿ ಪಾದ, ಮಂಡಿ, ಪೃಷ್ಠ ಮತ್ತು ಬೆನಿನ ಮೇಲೆ ಒತ್ತಡ ಹೆಚ್ಚಿಗೆ ಬಿದ್ದು ತೊಂದರೆಯಾಗುತ್ತದೆ. ಸಮತಟ್ಟಾದ ಪಾದ ಇರದವರಿಗೆ ಕೆಲವು ವಿಶಿಷ್ಟ ಬೂಟುಗಳು ದೊರೆಯುತ್ತವೆ.
ನಿಮ್ಮ ಶೂಗಳು ಬಿಗಿಯಾಗಿವೆಯೇ?
ನಿಮ್ಮ ಪಾದದ ಅಳತೆಯನ್ನು ವರ್ಷಕ್ಕೊಮ್ಮೆಯಾದರೂ ಮಾಡಿಸಿ. ನಿಮಗೆ 21 ವರ್ಷವಾಗಿದ್ದಾಗ ತೆಗೆದುಕೊಂಡ ಶೂಸಿನ ಅಳತೆಯನೇ 30-40 ಆಗಿದ್ದಾಗಲೂ ಬಳಸಿದರೆ ತೊಂದರೆ ಕೊಡುತ್ತದೆ. ನೋವು ತರುವ ಬೂಟು / ಚಪ್ಪಲಿ ಪಾದಕ್ಕೆ ಒಳ್ಳೆಯದಲ್ಲ. ಅದರಲ್ಲೂ ತಾಯಿಯಾದ ನಂತರ ಮತ್ತು ಗರ್ಭಿಣಿಯಾಗಿರುವಾಗ ಪಾದ ವಿಶಾಲವಾಗುತ್ತದೆ.
ಹೈ ಹೀಲ್ಸ್ ಹಾಕ್ತೀರಾ?
ಹೈ ಹೀಲ್ಡ್ ಶೂ ಹಿಮ್ಮಡಿ ಮತ್ತು ಪಾದದ ಮುಂದಿನ ಭಾಗದ ಮೇಲೆ ತನ್ನೆಲ್ಲ ಒತ್ತಡ, ಬಲವನು ಹೇರುತ್ತದೆ. ಇದರಿಂದ ಹ್ಯಾಮರ್ ಟೋ (ಪಾದದ ಹಿಮ್ಮಡಿಯಲ್ಲಿ ದೊಡ್ಡ ಆಣಿ) ಅದರ ಜೊತೆಗೆ ನೋವುಭರಿತ ಉಗುರಿನ ಸಮಸ್ಯೆ ಎದುರಿಸಬೇಕಾಗುತ್ತದೆ. ಹೆಚ್ಚಿನ ಸಮಯ, ನೀವು ಧರಿಸಬೇಕಾದದ್ದು ಎರಡೂವರೆ ಇಂಚಿಗಿಂತ ಎತ್ತರ ಇರುವಂತ ಹೈ ಹೀಲ್ಗಳನು ಮಾತ್ರ.
ನಿಮ್ಮ ಪಾದ ಯಾವಾಗಲಾದರೂ ಹಗಲಿನಬೆಳಕನು ನೋಡುತ್ತಾ?
ಪಾದ ಬೆಚ್ಚಗಿನ, ತೇವಾಂಶ ಇರುವ ಪ್ರಕೃತಿಯಲ್ಲಿ ಪಾಚಿ ಕಟ್ಟಿಕೊಳ್ಳುತ್ತದೆ. ಕೆಲ ಬಗೆಯ ತೇವಾಂಶ ಹೀರುವ ಸಾಕ್ಸುಗಳು (ಕಾಟನ್ ಅಲ್ಲ), ಆ್ಯಂಟಿ ಫಂಗಲ್ ಪೌಡರ್ಗಳನು ಬಳಸಬಹುದು. ಪಾದಗಳು ಗಾಳಿಯನ್ನು ನೋಡುವಂತೆ ನೋಡಿಕೊಳ್ಳಿ.
ನೀವು ನಡೆಯುತ್ತೀರಾ?
ನಿಮ್ಮ ಪಾದದ ಮೈಲೇಜ್ ಗಮನಿಸಿ. ಹೆಚ್ಚು ವ್ಯಾಯಾಮ ಮಾಡಿ ಪಾದದ ಸಾಯುಗಳಿಗೆ ಶಕ್ತಿ ಕೊಟ್ಟಷ್ಟು ಆರೋಗ್ಯಕರವಾಗಿರುತ್ತವೆ.
1. 60ರ ಆಸುಪಾಸಿನಲ್ಲಿ ಹೆಚ್ಚಿನ ಮಂದಿ ಪಾದದ ನೋವಿನಿಂದ ಬಳಲುತ್ತಾರೆ, ಆದರೆ ಅದು 20-30 ರ ಒಳಗೂ ಶುರುವಾಗಬಹುದು.
2. ಅತಿಯಾದ ತೂಕ, ಸಕ್ಕರೆಕಾಯಿಲೆ ಮತ್ತು ರಕ್ತಸಂಚಲನೆಯಲ್ಲಿನ ವ್ಯತ್ಯಾಸವೂ ಪಾದದ ನೋವಿಗೆ ಕಾರಣ ಆಗಬಹುದು.
3. ಸರಿಯಾದ ಪಾದರಕ್ಷೆ ಮತ್ತು ನಿಯಮಿತ ವ್ಯಾಯಾಮ, ಪಾದದ ನೋವಿನಿಂದ ರಕ್ಷಿಸುವಲ್ಲಿ ಮುಖ್ಯಪಾತ್ರವಹಿಸುತ್ತವೆ.
-ಡಾ. ರವೀಂದ್ರ ಪುಟ್ಟಸ್ವಾಮಯ್ಯ
ಮೂಳೆ ಮತ್ತು ಕೀಲು ತಜ್ಞರು, ಸ್ಪರ್ಶ್ ಆಸ್ಪತ್ರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


