ಮಳೆಗಾಲಕ್ಕೆ ಮನೆಸಿದ್ಧತೆ
ಮುಂಗಾರು ಮಳೆ ಮನಸ್ಸಿಗೆ ಸಂತಸ ನೀಡುತ್ತದೆ. ಮಳೆಗಾಲ ಸುಂದರ ವಾತಾವರಣ ಮತ್ತು ಉಲ್ಲಾಸ ಸೃಷ್ಟಿಸುತ್ತದೆ. ...

ಮುಂಗಾರು ಮಳೆ ಮನಸ್ಸಿಗೆ ಸಂತಸ ನೀಡುತ್ತದೆ. ಮಳೆಗಾಲ ಸುಂದರ ವಾತಾವರಣ ಮತ್ತು ಉಲ್ಲಾಸ ಸೃಷ್ಟಿಸುತ್ತದೆ. ಆದರೆ ಈ ಮಳೆಗಾಲ ನಿಮ್ಮ ಮನೆಯ ಅಂದಚಂದ ಹಾಳು ಮಾಡದಿರಲಿ. ಮಳೆಗಾಲದ ಖುಷಿಯನ್ನು ನಿಮ್ಮ ಮನೆ ಅನುಭವಿಸಲಿ. ಮಳೆಗಾಲ ಎಂದರೆ ಮನೆಗೆ ಹೊಸ ತೊಂದರೆಗಳ ಆಗಮನ ಎಂದು ತಿಳಿಯದಿರಿ.
ಮಳೆಯಿಂದ ಮನೆಗಳಿಗೆ ಬರಬಹುದಾದ ಸಾಮಾನ್ಯ ತೊಂದರೆಗಳು ಡಂಪ್ನೆಸ್ (ಗೋಡೆಗಳು ಒದ್ದೆ ಆಗುವುದು), ಚಾವಣಿ ಸೋರಿಕೆ, ಹೊರಾಂಗಣ ಗೋಡೆ ಬಿರುಕು, ಮರದ ಬಾಗಿಲುಗಳು, ಕಪಾಟುಗಳು ಬೆಂಡಾಗುವುದು, ಗೆದ್ದಲು. ಈ ಸಮಸ್ಯೆಗಳು ಸಾಮಾನ್ಯವಾದರೂ ಮನೆಯನ್ನು ಹಾಳು ಮಾಡಬಲ್ಲವು. ಕೇವಲ ಮಳೆಗಾಲದಲ್ಲಿ ಮಾತ್ರ ಕಾಣಿಸುವ ಈ ಸಮಸ್ಯೆಗಳನ್ನು ಉದಾಸೀನ ಮಾಡಬೇಡಿ.
ಮನೆ ಕಟ್ಟುವ ವೇಳೆ ಸರಿಯಾಗಿ ಇಟ್ಟಿಗೆಗಳಿಗೆ ನೀರುಣಿಸದಿದ್ದರೆ, ಚಾವಣಿಯ ಮೇಲೆ ನೀರು ಕೊಡದಿದ್ದಲ್ಲಿ ಒಂದೆರಡು ವರ್ಷಗಳ ನಂತರ ಮಳೆಗಾಲದಲ್ಲಿ ಮನೆಗಳ ಚಾವಣಿ ಹಾಗೂ ಗೋಡೆಗಳ ಮೂಲಕ ನೀರು ಸೋರಬಹುದು. ಸರಿಯಾದ ವಾಟರ್ ಪ್ರೂಫೆಟ್ ಮಿಶ್ರಣಗಳನ್ನು ಬಳಸದೆ ಹೋದರೆ ಡಂಪ್ನೆಸ್ ಕಂಡುಬರುವುದು ಸಹಜ. ಆದರೆ ಇವುಗಳಿಗೆ ಕಾಯಂ ಪರಿಹಾರ ಕಾಣದಿದ್ದರೆ, ಮನೆಯ ಗೋಡೆಗಳು ಶಿಥಿಲಗೊಂಡು ಮನೆಯ ಆಯುಷ್ಯ ಬಹು ಬೇಗನೆ ಕುಸಿಯುತ್ತದೆ.
ಈ ರೀತಿಯ ತೊಂದರೆಗಳಿಗೆ ಸಿಗಬಹುದಾದ ಶಾಶ್ವತ ಪರಿಹಾರ ಎಂದರೆ ಸೋರುತ್ತಿರುವ ಗೋಡೆಯ ಪ್ಲಾಸ್ಟಿಂಗ್ ಒಡೆದು ಇಟ್ಟಿಗೆಗಳ ಬಿರುಕಿಗೆ ಪ್ರೂಫೆಟ್ ಮಿಶ್ರಣ ವನ್ನು ಸೇರಿಸಿ ಮರು ಪ್ಲಾಸ್ಟಿಂಗ್ ಮಾಡಿಸಬೇಕಾಗುತ್ತದೆ.
ಮಳೆಗಾಲದಲ್ಲಿ ಮತ್ತೊಂದು ಸಮಸ್ಯೆ ಮರದ ಬಾಗಿಲುಗಳು ಹಾಗೂ ಕಪಾಟಿನದ್ದು. ಮನೆಯ ಮುಂಬಾಗಿಲು ಮಳೆ ಹನಿಗಳಿಗೆ ಮತ್ತು ತೇವಾಂಶಕ್ಕೆ ಬಣ್ಣ ಮಾಸುವುದು ಬೆಂಡಾಗುವುದು ಮತ್ತು ಹಾಳಾಗುವುದು. ಕೆಲವು ಮರದ ಪೀಠೋಪಕರಣಗಳು ತೇವಾಂಶಕ್ಕೆ ಗೆದ್ದಲು ಹಿಡಿಯುವುದು ಉಂಟು. ಮಳೆಗಾಲದ ಆರಂಭಕ್ಕೂ ಮುನ್ನವೇ ಮರದ ಉಪಕರಣಗಳಿಗೆ ಪಾಲಿಶ್ ಮಾಡಿಡುವುದು, ವುಡ್ ಪ್ರೊಟೆಕ್ಟ್ ಪೇಂಟಿಂಗ್ ಬಳಿಯುವುದು ಉತ್ತಮ.
ಕೊನೆ ಸಲಹೆ
ಕಟ್ಟಡ ನಿರ್ಮಾಣ ಸರಿಯಾಗಿ ಆಗಿಲ್ಲ ಎಂದರೆ ಮಳೆಯಿಂದ ತೊಂದರೆಗಳಾಗುತ್ತವೆ. ಮನೆ ಕಟ್ಟುವಾಗ ಅಂಡರ್ ವಾಟರ್ ಲೆವೆಲ್, ಮಳೆ ಅಳತೆ ನೋಡಬೇಕು. ಸರಿಯಾದ ವಾಟರ್ ಪ್ರೊಫೆಟ್‌ಗಳು ಹಾಗೂ ವೆದರ್ ಕೋಟ್ ಬಣ್ಣಗಳನ್ನು ಬಳಸಿದಲ್ಲಿ ಮಾತ್ರ ಮಳೆಯಿಂದ ರಕ್ಷಣೆ ಸಾಧ್ಯ.
ಮಳೆಗಾಲದಲ್ಲಿ ಮಾಡಬೇಕಾದ್ದು...
ಮನೆ ರಿಪೇರಿ ಕೆಲಸಕ್ಕೆ ಕೈ ಹಾಕದಿರಿ.
ಕಾಲುವೆಗಳಲ್ಲಿ ನೀರು ಸರಿಯಾಗಿ ಹೊರ ಹೋಗುತ್ತಿದೆಯೇ ಎಂಬುದನ್ನು ಗಮನಿಸುತ್ತಿರಿ.
ಮನೆಯ ಹೊರಗಡೆ ಮಳೆಗೆ ತೆರೆದಿಟ್ಟ ವಿದ್ಯುತ್ ತಂತಿಗಳಿದ್ದರೆ ಸರಿಪಡಿಸಿ.
ನೀರು ಶೇಖರಿಸಬಹುದಾದ ಯಾವುದೇ ವಸ್ತುಗಳನ್ನು ಟೆರೇಸಿನ ಮೇಲೆ ಅಥವಾ ಮನೆಯ ಆಸುಪಾಸುಗಳಲ್ಲಿ ಬಿಸಾಡಬೇಡಿ.
ಮಳೆ ನೀರು ಹೊರ ಹೋಗುವ ಪೈಪ್‌ಗಳು ಉತ್ತಮ ಸ್ಥಿತಿಯಲ್ಲಿವೆಯೇ ನೋಡಿಕೊಳ್ಳಿ.
ಹೊದಿಕೆ ಹಾಗೂ ಕಂಬಳಿಗಳನ್ನು ತೇವಾಂಶಕ್ಕೆ ತೆರೆದಿಡಬೇಡಿ. ಇವು ಒದ್ದೆ ಆಗಿ ನೆರಳಿನಲ್ಲೇ ಒಣಗಿದರೆ ಕೆಟ್ಟ ವಾಸನೆ ಹರಡಬಲ್ಲವು.
-ಕೆ.ವಿ. ರಾಹುಲ್
kvrahul.in@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


