ಆರೋಗ್ಯ-ಜೀವನಶೈಲಿ

ಕಿಡ್ ಕೇರ್

ಮಗುವಿಗೆ ತುಸು ಮಟ್ಟದ ರೋಗ ನಿರೋಧಕ ಶಕ್ತಿ ಬರುವ ತನಕ ಪೋಷಕರ ಟೆನ್ಷನ್ ಕಡಿಮೆ ಆಗೋಲ್ಲ. ಹಾಗಾದರೆ ಈ ಮಕ್ಕಳನ್ನು ಯಾವ ರೀತಿಯ...

ಕಿಡ್ ಕೇರ್
Published On :

ಮಕ್ಕಳನ್ನು ಸದಾ ಒಂದಲ್ಲ ಒಂದು ಕಾಯಿಲೆ ಕಾಡುತ್ತದೆ. ಶೀತ, ಜ್ವರ, ಅಲರ್ಜಿ... ಹೀಗೆ ಒಂದಾ ಎರಡಾ? ಅಫ್‌ಕೋರ್ಸ್ ಸ್ಲಿಪ್ಪರ್ ಮುಟ್ಟೋದು, ಬಚ್ಚಲು ಮನೆ ನೀರು ಕುಡಿಯೋದು, ಕೆಳಗೆ ಬಿದ್ದ ತಿನಿಸುಗಳನ್ನು ತಿನ್ನೋದು, ಏನಾದರೂ ಕೀಟಲೆ ಮಾಡುವ ಮಕ್ಕಳಿಗೆ ಇಂಥ ಸಮಸ್ಯೆಗಳು ಸಹಜ. ಆದರೆ, ಪೋಷಕರ ಆತಂಕ ತಪ್ಪಬೇಕಲ್ಲ?
ಮಗುವಿಗೆ ತುಸು ಮಟ್ಟದ ರೋಗ ನಿರೋಧಕ ಶಕ್ತಿ ಬರುವ ತನಕ ಪೋಷಕರ ಟೆನ್ಷನ್ ಕಡಿಮೆ ಆಗೋಲ್ಲ. ಹಾಗಾದರೆ ಈ ಮಕ್ಕಳನ್ನು ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಕಾಡುತ್ತವೆ? ಚಿಕಿತ್ಸೆ ಏನು? ಅವುಗಳ ಬಗ್ಗೆ ಕಿರುಮಾಹಿತಿ ಇಲ್ಲಿದೆ...

ಹಸುಳೆಗಳು (1-2 ವರ್ಷ)
ಈ ವಯಸ್ಸಿನಲ್ಲಿ ಮಕ್ಕಳು ನಡೆದಾಡಲು ಆರಂಭಿಸುವುದರ ಜತೆಗೆ ಅವರಲ್ಲಿ ಸ್ವತಂತ್ರವಾಗಿ ಆಲೋಚಿಸುವ ಮೂಲ ಲಕ್ಷಣಗಳು ಕಂಡುಬರುತ್ತವೆ. ಬ್ಯಾಕ್ಟೀರಿಯಾ ಮತ್ತು ವೈರಾಣುಗಳ ಸಂಪರ್ಕಕ್ಕೆ ಬರುವ ಮಕ್ಕಳು ಗಾಳಿಯಿಂದ ಬರುವ ಅಲರ್ಜಿಗೂ ತುತ್ತಾಗುತ್ತವೆ. ತಮ್ಮ ಕೈಗೆ ಸಿಗುವ ಪ್ರತಿಯೊಂದು ವಸ್ತುಗಳನ್ನು ಬಾಯಿಗೆ ಹಾಕಿಕೊಳ್ಳುತ್ತವೆ.  ಇದರಿಂದ ವರ್ಷದಲ್ಲಿ ಈ ಮಕ್ಕಳು 4-5 ಬಾರಿ ಸೋಂಕಿಗೆ ತುತ್ತಾಗೋದು ಗ್ಯಾರಂಟಿ. ಮಣ್ಣಿನ ಸಂಪರ್ಕದಿಂದಲೂ ಈ ಸಮಸ್ಯೆ ಕಾಡಬಹುದು. ಮಕ್ಕಳಲ್ಲಿ ಕಂಡುಬರುವ ಅಲರ್ಜಿ ಚರ್ಮ ಮತ್ತು ಉಸಿರಾಟದಲ್ಲೂ ತೊಂದರೆಯಾಗುವಂತೆ ಮಾಡುತ್ತದೆ. ಆಕಸ್ಮಿಕ ವಿಷಪ್ರಾಶನ, ನಾಣ್ಯ ನುಂಗುವಿಕೆ, ಗಾಯಗಳನ್ನು ಮಾಗಿಸಲು ಸೂಕ್ತ ಮುಂಜಾಗ್ರತೆ ವಹಿಸದಿರುವುದು ಮತ್ತಿತರ ಕಾರಣಗಳಿಂದಲೂ ಮಕ್ಕಳ ಸೂಕ್ಷ್ಮ ದೇಹ ಬಾಹ್ಯ ವಸ್ತುಗಳಿಗೆ ಪ್ರತಿರೋಧ ದಾಖಲಿಸುತ್ತದೆ.

ಶಾಲಾ ಪೂರ್ವ ವಯಸ್ಸು (2- 5 ವರ್ಷ)
ಈ ವಯಸ್ಸಿನಲ್ಲಿ ಮಕ್ಕಳು ಇನ್ನಷ್ಟು ಸ್ವತಂತ್ರರಾಗುತ್ತಾರೆ. ದಿನದ ಬಹು ಹೊತ್ತು ಇತರೆ ಮಕ್ಕಳೊಂದಿಗೆ ಬೆರೆಯುತ್ತಾರೆ. ಪಾಲಕರಿಗೆ ಸದಾ ಈ ವಯಸ್ಸಿನ ಮಕ್ಕಳ ಮೇಲೆ ನಿಗಾ ಇಡೋದು ಕಷ್ಟವಾಗಿಬಿಡುತ್ತದೆ.
ಈ ವಯಸ್ಸಿನಲ್ಲಿ ಸಾಮಾನ್ಯವಾಗಿ ಉಸಿರಾಟದ ಸೋಂಕು, ಅತಿಭೇದಿ ಮತ್ತಿತರ ಕಾಯಿಲೆಗಳು ಕಾಡುತ್ತವೆ. ಕ್ರಿಮಿಗಳ ಸೋಂಕಿನಿಂದ ಚರ್ಮದ ಅಲರ್ಜಿ ಸಾಮಾನ್ಯ. ರಕ್ತ ಸಂಬಂಧಿಗಳ ನಡುವೆ ವೈರತ್ವ, ಒಂದೇ ಮಗುವಿನ ಕಾರಣದಿಂದ ಒಂಟಿತನದಂಥ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಶಾಲೆಗೆ ಹೋಗುವ ವಯಸ್ಸು (5-10 ವರ್ಷ)
ಬಹುತೇಕ ಸ್ವತಂತ್ರರಾಗುವ ಈ ವಯಸ್ಸಿನಲ್ಲಿ ಸೋಂಕು ಮತ್ತು ಅಲರ್ಜಿಗಳು ಸರ್ವೆಸಾಮಾನ್ಯ. ಪ್ರತಿರೋಧ ಶಕ್ತಿ ತುಸು ಹೆಚ್ಚಾದರೂ ಸಣ್ಣಪುಟ್ಟ ಸಮಸ್ಯೆಗಳು ಕಾಡುವುದು ತಪ್ಪೋದಿಲ್ಲ. ಸಾಮಾನ್ಯವಾಗಿ ವರ್ತನೆಯಲ್ಲಿ ಸಮಸ್ಯೆ, ಹಾಸಿಗೆ ಒದ್ದೆ ಮಾಡುವುದು ಮತ್ತು ಆಟವಾಡುವಾಗ ಬಿದ್ದು ಸಣ್ಣಪುಟ್ಟ ಗಾಯಗಳನ್ನು ಮಾಡಿಕೊಳ್ಳೋದು ಸಹಜ.

ಬೀ ಕೇರ್‌ಫುಲ್

  •      ಶುದ್ಧ, ಸೋಸಿದ, ಕುದಿಸಿ ಆರಿಸಿದ ನೀರನ್ನೇ ಕುಡಿಯಬೇಕು.
  •      ಸೂಕ್ತ ಮಾರ್ಜಕಗಳನ್ನು ಬಳಸಿ ಕೈಗಳನ್ನು ತೊಳೆದುಕೊಳ್ಳುವುದರಿಂದ ಶೇ.90ರಷ್ಟು ಸೂಕ್ಷ್ಮ ಬ್ಯಾಕ್ಟೀರಿಯಾಗಳನ್ನು ದೂರ ಇಡಬಹುದು. ಆ್ಯಂಟಿ ಬ್ಯಾಕ್ಟಿರೀಯಾ ಸೋಪ್ ಬಳಸಿದರೆ ಚರ್ಮದಲ್ಲಿರುವ ಅಪಾಯರಹಿತ ಬ್ಯಾಕ್ಟೀರಿಯಾಗಳಿಗೂ ಹಾನಿಯಾಗಬಹುದು.
  •      ಸೋಂಕಿರುವ ವ್ಯಕ್ತಿಗಳಿಂದ ದೂರ ಇರಬೇಕು.
  •       ಮನೆಯಲ್ಲಿನ ಧೂಳು, ಹೊಗೆಯಿಂದ ಮಕ್ಕಳು ಆದಷ್ಟು ದೂರವಿರಲಿ.
  •     ಹಸುಳೆಗಳಿಗೆ ತುಪ್ಪಳದ ಆಟದ ಸಾಮಗ್ರಿಗಳನ್ನು ಕೊಡೋದು ಬೇಡ.
  •     ಮಗುವಿನ ದೇಹಕ್ಕೆ ಟಾಲ್ಕ್ ಪೌಡರ್ ಹಚ್ಚುವಾಗ ಪಫ್ ಬಳಸಿ. ಪೌಡರನ್ನು ಸಿಡಿಸಬಾರದು.
  •       ಮಕ್ಕಳು ಬಾಹ್ಯ, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾಗ ಪಾಲಕರು ಅಥವಾ ಶಿಕ್ಷಕರು ನಿಗಾ ವಹಿಸಬೇಕು.
  •     ಬದುಕಿನಲ್ಲಿ ಸ್ವಚ್ಛ ಪ್ರವೃತ್ತಿ ರೂಢಿಸಿಕೊಳ್ಳುವಲ್ಲಿ ಪಾಲಕರು ಮಕ್ಕಳಿಗೆ ಆದರ್ಶವಾಗಿರಬೇಕು.
  •      ಮನೆ ಸುತ್ತ ಆರೋಗ್ಯಕರ ವಾತಾವರಣ ಇರುವಂತೆ ನೋಡಿಕೊಳ್ಳಿ.
ತಜ್ಞರನ್ನು ಕನ್ಸಲ್ಟ್ ಮಾಡಿ...
- ಡಾ. ವಿಶ್ವನಾಥ್ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.