ಆರೋಗ್ಯ-ಜೀವನಶೈಲಿ

ಹಾಗಲ ಸಿಹಿ

ನಮಗೆ ಹಾಗಲಕಾಯಿ ಎಂದಾಕ್ಷಣ ನೆನಪಾಗುವುದು ಮಧುಮೇಹ.

ಹಾಗಲ ಸಿಹಿ
Published On :

ನಮಗೆ ಹಾಗಲಕಾಯಿ ಎಂದಾಕ್ಷಣ ನೆನಪಾಗುವುದು ಮಧುಮೇಹ. ಹಾಗಲಕಾಯಿ ಡಯಾಬಿಟೀಸ್‌ಗೆ ರಾಮಬಾಣ ಎಂಬುದು ಗೊತ್ತು. ಆದರೆ ಇದರ ಉಪಯೋಗ ಕೇವಲ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಲು ಮಾತ್ರ ಸೀಮಿತ ಎಂದು ಈ ಬಹೋಪಯೋಗಿ ತರಕಾರಿಯನ್ನು ತಪ್ಪಾಗಿ ತಿಳಿಯಲಾಗಿದೆ.
ವಾಸ್ತವವಾಗಿ ಹಾಗಲ ಯಕೃತ್ತು ಅಸ್ವಸ್ಥತೆಗೆ ಉತ್ತಮ ಔಷಧಿಯಾಗಿದ್ದು, ಲಿವರ್ ಶುದ್ಧೀಕರಿಸುವ ಮತ್ತು ಅದರ ಜೀವಕೋಶಗಳ ಪುನರುತ್ಪಾದನೆಗೆ ಸಹಾಯಕ. ಈ ಆರೋಗ್ಯಕರ ತರಕಾರಿ ಸೌಂದರ್ಯ ಪ್ರಯೋಜನಗಳನ್ನೂ ಹೊಂದಿದೆ. ಇದು ತ್ವಚೆಯನ್ನು ಮೊಡವೆಯಿಂದ ಮುಕ್ತಗೊಳಿಸಿ, ದೋಷರಹಿತ ಮೃಬಣ್ಣ ನೀಡುತ್ತದೆ. ಹೀಗೆ ಹಾಗಲಕಾಯಿ ಇತರೆ ಅನೇಕ ಆರೋಗ್ಯಕಾರಿ ಪ್ರಯೋಜನಗಳನ್ನೂ ಒಳಗೊಂಡಿದ್ದು, ಅವುಗಳಲ್ಲಿ ಕೆಲವು ಇಲ್ಲಿವೆ...

  • ಹಾಗಲ ಲಿವರ್ ಶುದ್ಧೀಕರಿಸುವ ಒಂದು ತರಕಾರಿ. ಇದು ಯಕೃತ್ತನ್ನು ಶುದ್ಧಗೊಳಿಸಲು ಮತ್ತು ಜೀವಕೋಶಗಳ ಪುನರುತ್ಪಾದನೆಯಲ್ಲಿ ಸಹಕರಿಸುತ್ತದೆ.
  • ಹಾಗಲರಸ ಮಧುಮೇಹ-2 ಅನ್ನು ಹೊಂದಿರುವ ರೋಗಿಗಳಿಗೆ ಒಂದು ಉತ್ತಮ ಔಷಧಿ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಿ, ಇನ್ಸುಲಿನ್ ಪ್ರತಿರೋಧವನ್ನು ಗುಣಪಡಿಸುತ್ತದೆ.
  • ಹಾಗಲಕಾಯಿ ಜೀರ್ಣಕ್ರಿಯೆಗೆ ಉತ್ತಮ. ಇದು ಪಚನ ಮಟ್ಟವನ್ನು ಹೆಚ್ಚಿಸುವ ಆ್ಯಂಟಿ ಆಕ್ಸಿಡೆಂಟ್‌ಗಳಿಂದಲೂ ಕೂಡಿದೆ. ಇದಲ್ಲದೆ ಹಾಗಲ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ ಒಂದು ತರಕಾರಿ.
  • ಕಹಿಯಾದ ತರಕಾರಿ ಮತ್ತು ಹಣ್ಣುಗಳು ಬಹುವಾಗಿ ಚರ್ಮಕ್ಕೆ ಪ್ರಯೋದನಕಾರಿ. ಹಾಗಲ ಊರಿಯೂತ ವಿರೋಧಿ ಗುಣಲಕ್ಷಣಗಳನ್ನು ಹೊಂದಿದ್ದು, ಚರ್ಮದಿಂದ ವಿಷಕಾರಿ ಜೀವಾಣುಗಳನ್ನು ತೊಲಗಿಸಲೂ ಸಹಕರಿಸುತ್ತದೆ.
  • ನಮ್ಮ ದೇಹವನ್ನು ಶುದ್ಧಿಗೊಳಿಸುವ ಹಾಗಲಕಾಯಿ ಹೇರಳವಾಗಿ ಆ್ಯಂಟಿ ಆಕ್ಸಿಡೆಂಟ್‌ಗಳಿಂದ ಕೂಡಿದೆ. ಹಾಗಾಗಿ ಈ ತರಕಾರಿ ರೋಗಗಳ ವಿರುದ್ಧ ಹೋರಾಡಲು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯಕಾರಿಯಾಗಿದೆ.
  • ಮೂತ್ರಕೋಶ ಮತ್ತು ಮೂತ್ರಪಿಂಡಗಳಿಗೆ ಔಷಧಿ. ಹಾಗಲಕಾಯಿ ಕಿಡ್ನಿಗಳನ್ನು ಶುದ್ಧಿಗೊಳಿಸುತ್ತದೆ ಮತ್ತು ಮೂತ್ರ ಕೋಶದಲ್ಲಿ ಸಂಗ್ರಹವಾಗುವ ಕಲ್ಲುಗಳನ್ನು ಹೋಗಲಾಡಿಸಲು ಔಷಧಿಯಾಗಿ ಕೆಲಸ ಮಾಡುತ್ತದೆ.
  • ಉಸಿರಾಟದ ತೊಂದರೆಗಳಿಗೆ ಪ್ರಯೋಜನಕಾರಿ. ಹಾಗಲಕಾಯಿಯನ್ನು ನಿಯಮಿತವಾಗಿ ಬಳಸುವುದರಿಂದ ತೀವ್ರ ಉಸಿರಾಟದ ತೊಂದರೆಗಳಾದ ಅಸ್ತಮಾ ಅಥವಾ ಶ್ವಾಸನಾಳಗಳ ಒಳಪೊರೆಯ ಉರಿಯೂತಗಳನ್ನು ಹತೋಟಿಯಲ್ಲಿಡಬಹುದು.
  • ಈ ತರಕಾರಿ ಹೇರಳವಾಗಿ ನಾರಿನಂಶ ಹೊಂದಿದ್ದು, ಮಲಬದ್ಧತೆಯನ್ನು ತಡೆಯುತ್ತದೆ.
  • ಈ ತರಕಾರಿಯಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುವ ಆ್ಯಂಟಿಆಕ್ಸಿಡೆಂಟ್‌ಗಳಿದ್ದು, ಕ್ಯಾನ್ಸರ್‌ಕಾರಕ ಜೀವಕೋಶಗಳು ದೇಹದಲ್ಲಿ ಹೆಚ್ಚಾಗುವುದನ್ನು ತಡೆಯುತ್ತದೆ.
  • ರಕ್ತದಲ್ಲಿರುವ ಕೆಟ್ಟ ಕೊಬ್ಬನ್ನು ಕಡಿಮೆ ಮಾಡುವಲ್ಲಿ ಹಾಗಲ ಸಹಾಕಾರಿಯಾಗಿದ್ದು, ಇದು ಅಪಧಮನಿಗಳು ಮುಚ್ಚಿಹೋಗುವುದನ್ನು ತಡೆಯುತ್ತವೆ. ಇದರಿಂದ ಹೃದಯ ಆರೋಗ್ಯವಾಗಿರುತ್ತದೆ.
- ರಶ್ಮಿ ಕಾರ್ಗಲ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.