ಆರೋಗ್ಯ-ಜೀವನಶೈಲಿ

ಉಹ್ಹು ಉಹ್ಹು !

ವಾಸನೆ, ಹೊಗೆ, ಪರಾಗಗಳು, ಪುಡಿಮಣ್ಣು ಮತ್ತು ಧೂಳಿನಲ್ಲಿರುವ ಹುಳುಗಳು ಇತ್ಯಾದಿ ಕಾರಣಗಳಿಂದ ಅಲರ್ಜಿ ಅನುಭವಿಸುವವರಿಗೆ ಕೆಲವೊಮ್ಮೆ ಉಸಿರಾಡಲು...

ಉಹ್ಹು ಉಹ್ಹು !
Published On :

ವಾಸನೆ, ಹೊಗೆ, ಪರಾಗಗಳು, ಪುಡಿಮಣ್ಣು ಮತ್ತು ಧೂಳಿನಲ್ಲಿರುವ ಹುಳುಗಳು ಇತ್ಯಾದಿ ಕಾರಣಗಳಿಂದ ಅಲರ್ಜಿ ಅನುಭವಿಸುವವರಿಗೆ ಕೆಲವೊಮ್ಮೆ ಉಸಿರಾಡಲು ಕಷ್ಟವಾಗುತ್ತದೆ. ಇದನ್ನೇ 'ಅಸ್ತಮಾ' ಎನ್ನುವುದು. ಅಸ್ತಮಾ ಎಂಬ ಪದ ಗ್ರೀಕ್‌ನ 'ಆಸೀನ್‌' ಎಂಬ ಪದದಿಂದ ಬಂದಿದೆ. ಇದರರ್ಥ ತೆರೆದ ಬಾಯಿಯಿಂದ ಉಸಿರಾಡುವುದು.
ಅಸ್ತಮಾ ಒಂದು ಮನಃಶಾರೀರಿಕ ಅವ್ಯವಸ್ಥೆ. ಇದರಿಂದ ಮನುಷ್ಯ ಸರಿಯಾಗಿ ಕೆಲಸ ಮಾಡಲಾಗದೆ ತನ್ನ ಮೇಲಿನ ವಿಶ್ವಾಸವನ್ನೇ ಕಳೆದುಕೊಳ್ಳುವಂತಾಗುತ್ತಾನೆ. ವಿಶ್ವಾದ್ಯಂತ ಕೋಟ್ಯಂತರ ಮಂದಿಯನ್ನು ಕಾಡುತ್ತಿರುವ ಅಸ್ತಮಾ ಸರಿಸುಮಾರು 15ರಲ್ಲಿ ಒಂದು ಮಗುವನ್ನು ಕಾಡುತ್ತಿದೆ. ಹಾಗಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುವ ದೀರ್ಘಕಾಲಿಕ ಕಾಯಿಲೆಗಳಲ್ಲಿ ಇದು ಸಾಮಾನ್ಯ.

ಲಕ್ಷಣಗಳು

  •     ಎದೆಯಲ್ಲಿ ಬಿಗಿತ, ನೋವು ಅಥವಾ ಒತ್ತಡ.
  •     ಗೂರು, ಮೇಲುಸಿರು.
  •     ಒಂದೇ ಸಮನೆ ಕೆಮ್ಮು, ವಿಶೇಷವಾಗಿ ರಾತ್ರಿಯಲ್ಲಿ ಅಥವಾ ಮುಂಜಾನೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ವ್ಯತ್ಯಾಸವಾಗಬಹುದು.
ಕಾರಣಗಳನೇಕ
ಹೋಮಿಯೋಪತಿ ಮದ್ದು
ಏನು ಮಾಡಬೇಕು?
  •     ಅಸ್ತಮಾಕ್ಕೆ ಹೋಮಿಯೋಪತಿ ಚಿಕಿತ್ಸೆ ಬೆಸ್ಟ್. ನಿಮ್ಮ ವೈದ್ಯರೊಂದಿಗೆ ಚರ್ಚಿಸಿ ಸೂಕ್ತ ಚಿಕಿತ್ಸೆ ಪಡೆಯಿರಿ.
  •     ಯಾವ ಅಂಶ ಅಸ್ತಮಾವನ್ನು ಕೆರಳಿಸುತ್ತದೆ ಎಂಬುದನ್ನು ಸೂಕ್ಷ್ಮವಾಗಿ ತಿಳಿಯಿರಿ ಮತ್ತು ಅವುಗಳಿಂದ ದೂರವಿರಿ.
  •     ಅಸ್ತಮಾ ದಿನಚರಿ ಪುಸ್ತಕ ಅನುಸರಿಸಿ. ನಿಮಗೆ ರೋಗ ಕೆರಳಿಸುವ ವಾಸನೆ, ಧೂಳು, ಪರಾಗ, ಕೆಲವು ಆಹಾರಗಳಿಂದ ದೂರವಿರಿ.
  •     ನಿಯಮಿತವಾಗಿ ಅಸ್ತಮಾಕ್ಕೆ ಚಿಕಿತ್ಸೆ ಪಡೆಯುತ್ತಿದ್ದರೂ ಕೆಲವೊಮ್ಮೆ ಕೆರಳುತ್ತದೆ. ಹಾಗಾಗಿ ಅಸ್ತಮಾ ಕಾರ್ಯಯೋಜನೆ ಇಟ್ಟುಕೊಳ್ಳುವುದು ಉತ್ತಮ. ಅಸ್ತಮಾ ಕೆರಳುವ ಮೊದಲು ಉಂಟಾಗುವ ಲಕ್ಷಣಗಳನ್ನು ಗುರುತಿಸಿ.
  • ಲಕ್ಷಣಗಳನ್ನು ಮತ್ತು ಅವುಗಳ ಸ್ವರೂಪವನ್ನೂ ಗಮನಿಸಿ...
  •     ನಿಮ್ಮ ಅನುಭವ ಮತ್ತು ನೀವಿರುವ ಹಂತದಲ್ಲಿ ಸರಿಯಾಗಿ ಏನು ಮಾಡಬೇಕೆಂಬುದನ್ನು ತಿಳಿಯಿರಿ. ಅಸ್ತಮಾ ಲಕ್ಷಣವನ್ನು ಉದಾಸೀನ ಮಾಡಬೇಡಿ.  
  •     ಅಸ್ತಮಾದೊಂದಿಗೆ ಬದುಕಲು ಕಲಿಯಿರಿ. ಒತ್ತಡದಿಂದಲೂ ಅಸ್ತಮಾ ಕೆರಳಬಹುದು. ಹಾಗಾಗಿ ಒತ್ತಡಗಳನ್ನು ನಿಭಾಯಿಸಿಕೊಳ್ಳಿ. ಸಕಾರಾತ್ಮಕವಾಗಿರಿ. ಅನೇಕ ಗಣ್ಯರು, ಕ್ರೀಡಾಪಟುಗಳು ಅಸ್ತಮಾವಿದ್ದರೂ ಜೀವನದಲ್ಲಿ ಯಶಸ್ವಿಯಾಗಿದ್ದಾರೆ.
ನಿಯಂತ್ರಣ ಹೇಗೆ?
  •     ಸಮತೋಲನ ಆಹಾರ ಸ್ವೀಕರಿಸಿ. ದಿನಕ್ಕೆ ಕನಿಷ್ಠ 4-5 ಬಾರಿ ಹಣ್ಣು ಮತ್ತು ತರಕಾರಿಗಳನ್ನು ಸೇವಿಸಿ.
  •     ನಿಯಮಿತವಾಗಿ ವ್ಯಾಯಾಮ ಮಾಡಿ. ಅಸ್ತಮಾಕ್ಕೆ ಹೆದರಿ ಅನೇಕರು ವ್ಯಾಯಾಮ ಮಾಡುವುದಿಲ್ಲ. ನಡಿಗೆಯಂಥ ನಿಯಮಿತ ವ್ಯಾಯಾಮ ಶ್ವಾಸಕೋಶವನ್ನು ಬಲಪಡಿಸುತ್ತದೆ. ನಿಮಗೆ ಸೂಕ್ತವಾದ ವ್ಯಾಯಾಮವನ್ನು ತಜ್ಞರಿಂದ ಕಲಿತುಕೊಳ್ಳಿ.
  •     ಡಿಯೋಡ್ರೆಂಟ್, ಸ್ವಚ್ಛಗೊಳಿಸುವ ಸಾಧನಗಳು ಮತ್ತು ಸಿಗರೇಟ್ ಹೊಗೆಯಂಥ ಅಸ್ತಮಾ ಕೆರಳಿಸುವ ವಸ್ತುಗಳಿಂದ ದೂರವಿರಿ.
  •     ಮನೆಯಲ್ಲಿ ಧೂಳು ಮತ್ತು ಪರಾಗವನ್ನು ಕಡಿಮೆ ಮಾಡಿ. ಪರಾಗದ ಋತುವಿನಲ್ಲಿ ಕಿಟಕಿಗಳನ್ನು ಮುಚ್ಚಿಡಿ.  ಹವಾ- ನಿಯಂತ್ರಕವನ್ನು ಬಳಸಿ.
  •     ಜಮಖಾನಗಳ ಬದಲು ಹೆಂಚು ಅಥವಾ ಮರದ ನೆಲಗಳನ್ನು ಬಳಸಿ. ತೊಳೆಯಬಹುದಾದ ಪರದೆ, ಬಿಸಿಲು ಮುಚ್ಚಿಕೆಗಳನ್ನು ಬಳಸಿ.
  •     ವಾಕ್ಯೂಮ್ ಕ್ಲೀನರ್ ಬಳಸಿ ಪೀಠೋಪಕರಣಗಳನ್ನು ಮತ್ತು ಹಾಸಿಗೆಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ. - ಚಳಿಗಾಲದಲ್ಲಿ ಹೊರಗೆ ಹೋಗುವಾಗ ಮೂಗು ಮತ್ತು ಬಾಯಿಯನ್ನು ವಸ್ತ್ರದಿಂದ ಮುಚ್ಚಿಕೊಳ್ಳಿ. ತೆರೆದ ವಾತಾವರಣದಲ್ಲಿ ಯೋಗ ಅಥವಾ ದೈಹಿಕ ವ್ಯಾಯಾಮಗಳನ್ನು ಮಾಡಬೇಡಿ.
ಅಸ್ತಮಾದ ಸತ್ಯ, ಅಸತ್ಯಗಳು
  •     ಶೇ.25ರಷ್ಟು ಜನ ತಮಗೆ ಕೆಲವೊಂದು ಆಹಾರಗಳ ಅಲರ್ಜಿ ಇದೆಯೆಂದು ಆಲೋಚಿಸುತ್ತಾರೆ. ಆದರೆ, ಅಧ್ಯಯನಗಳ ಪ್ರಕಾರ ಕೇವಲ ಶೇ.6 ಮಕ್ಕಳು ಮತ್ತು ಶೇ.2 ವಯಸ್ಕರರಿಗೆ ಆಹಾರ ಅಲರ್ಜಿ ಇರುತ್ತದೆ. ನಿಯಂತ್ರಣವಿಲ್ಲದೆ ಆಹಾರ ಸೇವಿಸುವುದರಿಂದ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ಇದರಲ್ಲಿ ರೋಗ ನಿರೋಧಕ ವ್ಯವಸ್ಥೆಯ ಪಾತ್ರವೇನೂ ಇರುವುದಿಲ್ಲ.
  •     ಸಾಮಾನ್ಯವಾಗಿ ಯಾವ ಆಹಾರ ಬೇಕಾದರೂ ಅಲರ್ಜಿ ಉಂಟುಮಾಡಬಹುದಾದರೂ ಹೆಚ್ಚಾಗಿ ಕಡಲೇಕಾಯಿ, ಹಸುವಿನ ಹಾಲು, ಮೊಟ್ಟೆ, ಸೋಯಾ, ಗೋದಿ, ಮೀನು ಮತ್ತು ಶೆಲ್ ಫಿಷ್ ಹೆಚ್ಚು ಅಲರ್ಜಿಯನ್ನುಂಟುಮಾಡುತ್ತದೆ.
  •     ಯಾವುದೇ ಒಂದು ಆಹಾರದಲ್ಲಿರುವ ಪ್ರೋಟಿನ್ ಅಂಶವನ್ನು ರೋಗ ನಿರೋಧಕ ವ್ಯವಸ್ಥೆ ವಿದೇಶಿ ವಸ್ತು ಎಂದು ತಿಳಿದು ಹೋರಾಡಿದರೆ ಅದಕ್ಕೆ ಅಲರ್ಜಿ ಎನ್ನುತ್ತೇವೆ. ಸಕ್ಕರೆ ಮತ್ತು ಕೊಬ್ಬು ಈ ಗುಂಪಿಗೆ ಸೇರುವುದಿಲ್ಲ.
- ಡಾ. ಮುಖೇಶ್ ಬಾತ್ರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.