ಆರೋಗ್ಯ-ಜೀವನಶೈಲಿ

ಎದೆ ಉಬ್ಬಿಸಿ!

ಎದೆ ಉಬ್ಬಿಸಿ!
Published On :

ಆರೋಗ್ಯ ಹೆಚ್ಚಿಸುವಲ್ಲಿ ನಾವು ಉಸಿರಾಡುವ ಕ್ರಮ, ಆಕ್ಸಿಜನ್ ಪ್ರಮಾಣ, ಶ್ವಾಸಕೋಶದ ಸಾಮರ್ಥ್ಯ ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ ಪ್ರತಿನಿತ್ಯ ಶ್ವಾಸಕೋಶವನ್ನು ಹಿಗ್ಗಿಸಲು ಕೆಲವು ವ್ಯಾಯಾಮಗಳು ಅಗತ್ಯ.

ಆಳವಾಗಿ ಉಸಿರಾಡಿ
ಉಳಿದೆಲ್ಲ ವ್ಯಾಯಾಮಗಳಿಗಿಂತ ಸುಲಭ ವಿಧಾನವೆಂದರೆ ನಿಧಾನವಾಗಿ ಹಾಗೂ ಆಳವಾಗಿ ಉಸಿರಾಡುವುದು. ಇದರಿಂದ ಸಮಯವೂ ವ್ಯರ್ಥವಾಗುವುದಿಲ್ಲ. ಶ್ವಾಸಕೋಶವೂ ಹಿಗ್ಗುತ್ತದೆ. ಒಮ್ಮೆ ಉಸಿರು ಬಿಡುವಾಗ ಸಂಪೂರ್ಣವಾಗಿ ಗಾಳಿ ಖಾಲಿ ಮಾಡಿ. ಇದರಿಂದ ಹೆಚ್ಚಿನ ಗಾಳಿ ಒಳಗೆಳೆದುಕೊಳ್ಳಲು ಅವಕಾಶವಾಗುತ್ತದೆ. ಈ ಸಮಯದಲ್ಲಿ ಕೈ ಅಗಲ ಮಾಡಿದರೆ ಎದೆಯ ಭಾಗ ಇನ್ನೂ ಅಗಲವಾಗುತ್ತದೆ.

ಸಾಧ್ಯವಾದಷ್ಟು ಗಾಳಿಯನ್ನು ಒಳಗೆಳೆದುಕೊಂಡು ಅಲ್ಲಿಯೇ ನಿಲ್ಲಿಸಿಕೊಳ್ಳಿ. ಎಷ್ಟು ಹೊತ್ತು ನಿಮಗೆ ಗಾಳಿ ಹಿಡಿದಿಡಲಾಗುತ್ತದೆ ಎಂದು ನೋಡಲು ಮನಸಿನಲ್ಲಿ 1ರಿಂದ 100ರವರೆಗೆ ಎಣಿಸುತ್ತಿರಿ. ಯಾವ ಸಂಖ್ಯೆಗೆ ಉಸಿರು ಇನ್ನು ಹಿಡಿದಿಡಲಾಗುವುದಿಲ್ಲ ಎನಿಸುತ್ತದೋ ಮುಂದಿನ ಬಾರಿಗೆ ಅದಕ್ಕಿಂತ ಹೆಚ್ಚಿನ ಸಂಖ್ಯೆಯನ್ನು ಗುರಿಯಾಗಿಟ್ಟುಕೊಂಡು ಅಭ್ಯಾಸ ಮಾಡಿ.

ದೈಹಿಕ ವ್ಯಾಯಾಮ
ನೀರಿನಲ್ಲಿ ವ್ಯಾಯಾಮ ಮಾಡುವುದರಿಂದ ದೇಹವು ರಕ್ತಕ್ಕೆ ಹೆಚ್ಚು ಆಮ್ಲಜನಕ ಒದಗಿಸಬೇಕಾಗಿ ಬರುತ್ತದೆ. ಇದು ಶ್ವಾಸಕೋಶ ಹಿಗ್ಗಿಸಿ ಬಲಶಾಲಿಯಾಗಿಸುತ್ತದೆ. ಕುತ್ತಿಗೆ ಮಟ್ಟ ನೀರಿನಲ್ಲಿ ನಿಂತುಕೊಂಡು ಸಾಮಾನ್ಯ ವ್ಯಾಯಾಮ ಮಾಡಿ.
ಎತ್ತರದ ಸ್ಥಳದಲ್ಲಿ ವ್ಯಾಯಾಮ ಮಾಡಿ. ಎತ್ತರ ಹೋದಂತೆಲ್ಲ ಆಮ್ಲಜನಕದ ಪ್ರಮಾಣ ಕಡಿಮೆ ಇರುತ್ತದೆ. ಹೀಗಾಗಿ ವ್ಯಾಯಾಮ ಕಷ್ಟದಾಯಕವಾದರೂ ಶ್ವಾಸಕೋಶ ಗಟ್ಟಿಯಾಗುತ್ತದೆ.
ಬಲೂನುಗಳನ್ನು ಊದಿ. ಇದು ಕೂಡ ಶ್ವಾಸಕೋಶಗಳಿಗೆ ಉತ್ತಮ ವ್ಯಾಯಾಮ.

- ಗೀತಾ ಕೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.