ಆರೋಗ್ಯ-ಜೀವನಶೈಲಿ

ಈ ಬೊಕ್ಕೆ ಗಿಫ್ಟಲ್ಲ!

ಈ ಬೊಕ್ಕೆ ಗಿಫ್ಟಲ್ಲ!
Published On :

ಹೆಣ್ಣು ಮಕ್ಕಳಿಗೆ ಕೆಲವು ವಿಶೇಷ ಅಂಗಗಳಿವೆ. ಅವುಗಳಿಂದಲೇ ಆಕೆಗೆ ಹೆಣ್ತನವನ್ನು ಅನುಭವಿಸಲು ಸಾಧ್ಯವಾಗುವುದು. ದುರಂತವೆಂದರೆ ಜೀವನದ ಕಷ್ಟದ ಕ್ಷಣಗಳನ್ನೂ ಆಕೆ ಈ ಅಂಗಾಂಗಗಳಿಗೆ ಕಾಡುವ ಸಮಸ್ಯೆಯಿಂದಲೇ ಅನುಭವಿಸುತ್ತಾಳೆ.

ಅವುಗಳಲ್ಲಿ ಅಂಡಾಶಯದ ಬೊಕ್ಕೆ (ಒವರಿಯನ್ ಸಿಸ್ಟ್) ಗಳೂ ಪ್ರಮುಖವಾದದ್ದು. ಹರೆಯದ ನಾರಿಯರನ್ನು ಕಾಡುವ ಈ ಸಿಸ್ಟ್ ಅನ್ನು ನಿಯಮಿತ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್, ಎಂಆರ್‌ಐ, ಸಿಟಿ ಸ್ಕ್ಯಾನ್, ಗರ್ಭಧಾರಣೆ ಅಥವಾ ಕ್ಯಾನ್ಸರ್ ಪತ್ತೆ ಹಚ್ಚುವ ರಕ್ತಪರೀಕ್ಷೆ ಕಂಡುಹಿಡಿಯಬಹುದು.

ಅಂಡಾಶಯದಲ್ಲಿ ದ್ರವದಿಂದ ತುಂಬಿದ ಚೀಲದಂತೆ ಈ ಸಿಸ್ಟ್ ಬೆಳೆಯುತ್ತದೆ. ಹೆಚ್ಚಿನ ಬೊಕ್ಕೆಗಳು ಹೆಚ್ಚು ಹಾನಿಕಾರಕವೂ ಅಲ್ಲ, ಯಾವುದೇ ಲಕ್ಷಣಗಳನ್ನೂ ತೋರುವುದಿಲ್ಲ. ಆದರೆ, ನೋವು ಮತ್ತು ಅನಿಯಮಿತ ರಕ್ತಸ್ರಾವದಂಥ ತೊಂದರೆಗಳನ್ನು ಉಂಟುಮಾಡುತ್ತವೆ. ತಮ್ಮಷ್ಟಕ್ಕೆ ತಾವೇ ಕೆಲವು ಸಿಸ್ಟ್‌ಗಳು ಗುಣವಾಗುತ್ತವೆ. ಮತ್ತೆ ಕೆಲವಕ್ಕೆ ಶಸ್ತ್ರ ಚಿಕಿತ್ಸೆಯ ಅಗತ್ಯವಿರುತ್ತದೆ. ಬಂಜೆತನಕ್ಕೊಳಗಾದ ಮಹಿಳೆಯರಲ್ಲೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಸಿಸ್ಟ್ ಇದ್ದರೆ ಏನಾಗುತ್ತದೆ?

  • ನೋವು, ಒತ್ತಡ.
  • ಅಂಡಾಶಯದಲ್ಲಿ ಬಿರುಕು ಹಿಂಡಿದಂತಾಗುವುದು.
  • ವಾಂತಿ ಅಥವಾ ಯೋನಿಯ ಮೂಲಕ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಳ್ಳುವ ರಕ್ತಸ್ರಾವ.
ಸಿಸ್ಟ್ ಹೇಗೆ ಸೃಷ್ಟಿಯಾಗುತ್ತವೆ?
ಗರ್ಭಧಾರಣೆ
ಡರ್ಮೈಡ್ ಸಿಸ್ಟ್
ಪಿಸಿಒಎಸ್
ಎಂಡೊಮೆಟ್ರಿಯೊಟಿಕ್ ಬೊಕ್ಕೆ
ಶಸ್ತ್ರಚಿಕಿತ್ಸೆಯೇ ಉತ್ತರ
- ಡಾ. ಛಾಯಾ ಪಾಟೀಲ್,
ಸ್ತ್ರೀ ರೋಗ ತಜ್ಞೆ, ಫೋರ್ಟಿಸ್ ಆಸ್ಪತ್ರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.