ಅಯ್ಯೋ... ಅಲ್ಸರ್!
ಕಾಲಿನ ಅಲ್ಸರ್ ತಳಭಾಗದ ಅಂಗಾಂಶಗಳಿಗೆ ಗಾಳಿ ಮತ್ತು ಬ್ಯಾಕ್ಟೀರಿಯಾಗಳ ಸಂಪರ್ಕಕ್ಕೆ ಅವಕಾಶ ಮಾಡಿಕೊಡುತ್ತದೆ. ಸಾಮಾನ್ಯವಾಗಿ ತ್ವಚೆಯ ಮೇಲೆ...

ಕಾಲಿನ ಅಲ್ಸರ್ ತಳಭಾಗದ ಅಂಗಾಂಶಗಳಿಗೆ ಗಾಳಿ ಮತ್ತು ಬ್ಯಾಕ್ಟೀರಿಯಾಗಳ ಸಂಪರ್ಕಕ್ಕೆ ಅವಕಾಶ ಮಾಡಿಕೊಡುತ್ತದೆ. ಸಾಮಾನ್ಯವಾಗಿ ತ್ವಚೆಯ ಮೇಲೆ ಉಂಟಾಗುವ ಸಣ್ಣ ಗಾಯವೂ ಇದಕ್ಕೆ ಕಾರಣವಾಗಬಹುದು. ಕಾಲುಗಳ ರಕ್ತನಾಳಗಳ ಅಲ್ಸರ್ (ವ್ಯಾಸ್ಕೂಲಾರ್ ಲೆಗ್ ಅಲ್ಸರ್)ಗಳು ದೀರ್ಘಕಾಲದ ಹುಣ್ಣುಗಳಾಗಿದ್ದು ಬೇಗ ವಾಸಿಯಾಗವು. ಮೊಳಕಾಲಿನ ತಳಭಾಗದಿಂದ ಕಾಲ್ಬೆರಳಿನವರೆಗೂ ಇದು ಹಬ್ಬಬಲ್ಲದು.
ಕಾಲಿನ ಅಲ್ಸರ್ ಪೈಕಿ ಶೇ.70ರಿಂದ 90ರಷ್ಟು ಅಶುದ್ಧ ರಕ್ತನಾಳಗಳ ಅಲ್ಸರ್ (ವೀನಸ್ ಅಲ್ಸರ್)ಗಳು. ಇವು ಬಹಳ ನೋವುಣಿಸುತ್ತವೆ. ಈ ರಕ್ತನಾಳಗಳಲ್ಲಿ ರಕ್ತ ಹಿಂದಕ್ಕೆ ಹರಿಯುವುದನ್ನು ತಡೆಯುವ ವೀನಸ್ ವಾಲ್ವ್‌ಗಳು ಸೂಕ್ತ ರೀತಿಯಲ್ಲಿ ಕೆಲಸ ಮಾಡದಿದ್ದಾಗ, ಜತೆಗೆ ಈ ನಾಳಗಳಲ್ಲಿ ಒತ್ತಡ ಹೆಚ್ಚಾದಾಗ ಹುಣ್ಣುಗಳು ಕಾಣಿಸಿಕೊಳ್ಳುತ್ತವೆ. ಶುದ್ಧ ರಕ್ತನಾಳಗಳು ಸೂಕ್ತ ರೀತಿಯಲ್ಲಿ ರಕ್ತವನ್ನು ಪಂಪ್ ಮಾಡಲು ಸಾಧ್ಯವಿಲ್ಲದಿದ್ದಾಗ ಕಾಲಿನ ಅಲ್ಸರ್ ಕಾಣಿಸಿಕೊಳ್ಳುತ್ತವೆ.
ಉನ್ನತ ರಕ್ತದೊತ್ತಡ
ಕಾಲುಗಳ ಅಲ್ಸರ್‌ಗಳಿಗೆ ರಕ್ತನಾಳಗಳ ಮೇಲಿನ ಒತ್ತಡ, ಪಾರ್ಶ್ವವಾಯು ಹಾಗೂ ಹೃದಯಾಘಾತ ಪ್ರಮುಖ ಕಾರಣಗಳು. ಇಂಥ ಸಮಸ್ಯೆಗಳಿರುವವರು ಕಾಲಿನ ಅಲ್ಸರ್ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಸುಸ್ಥಿರ ಒತ್ತಡವನ್ನು ಬ್ಯಾಂಡೇಜ್ ಅಥವಾ ಸ್ಟಾಕಿಂಗ್ ಬಳಸುವುದರಿಂದ ಕಡಿಮೆ ಮಾಡಿ, ಕಾಲಿನ ರಕ್ತನಾಳಗಳ ಅಲ್ಸರನ್ನು ಗುಣಪಡಿಸಬಹುದು. ಜತೆಗೆ ಈ ಹುಣ್ಣಿಗೆ ಕಾರಣವಾಗಿರುವ ರೋಗಗಳಿಗೆ ಸೂಕ್ತ ಚಿಕಿತ್ಸೆ ನೀಡುವುದರಿಂದ ಅಲ್ಸರ್ ಬೇಗ ಗುಣವಾಗುತ್ತದೆ.
ದೃಢವಾದ ಒತ್ತಡದ ಬ್ಯಾಂಡೇಜ್ ಅಥವಾ ಗ್ರ್ಯಾಜುಯೇಟೆಡ್ ಎಲಾಸ್ಟಿಕ್ ಮೆಡಿಕಲ್ ಕಂಪ್ರ್ಯಾಷನ್ ಸ್ಟಾಕಿಂಗ್ಸ್ ಅನ್ನು ಕಾಲಿಗೆ ಹಾಕಿಕೊಳ್ಳುವುದರಿಂದ ಅಲ್ಸರ್ ಗುಣವಾಗುತ್ತದೆ. ಡ್ರೆಸ್ಸಿಂಗ್ ಬಳಕೆಯೂ ಸಮಸ್ಯೆಗೆ ಪರಿಣಾಮಕಾರಿ ಪರಿಹಾರ.
ಡ್ರೆಸ್ಸಿಂಗ್‌ನಿಂದೇನು ಲಾಭ?
- ಹುಣ್ಣು ಬೇಗ ವಾಸಿಯಾಗಲು ಅಗತ್ಯವಾದ ವಾತಾವರಣವನ್ನು ಪೂರೈಸುವುದು ಡ್ರೆಸ್ಸಿಂಗ್.
- ಉಪ್ಪು ನೀರು ಬಳಸಿ, ಗಾಯವನ್ನು ಮೆದುವಾಗಿ ತೊಳೆಯುವುದಲ್ಲದೆ ಗಾಯದ ಮೇಲಿನ ಮೃದು ಅಂಗಾಂಶಗಳನ್ನು ನಿಧಾನವಾಗಿ ತೆಗೆದು ಗಾಯವನ್ನು ಮೊದಲು ಶುದ್ಧಗೊಳಿಸಬೇಕು.
- ಡ್ರೆಸ್ಸಿಂಗ್‌ಗೆ ಅಕ್ವಾಸೆಲ್ ಸೂಕ್ತ. ಇದು ಶೇ.25 ಪಟ್ಟು ಹೆಚ್ಚಿನ ಸ್ರಾವ ಮತ್ತು ಸೋಂಕನ್ನು ತಡೆಯಬಲ್ಲದು.
- ಸ್ರಾವವನ್ನು ಫೈಬರ್‌ಗಳ ಮಧ್ಯದಲ್ಲಿ ಹಿಡಿದಿಟ್ಟುಕೊಳ್ಳುವ ಅಕ್ವಾಸೆಲ್ ಎಜಿ/ಅಕ್ವಾಸೆಲ್ ಡ್ರೆಸ್ಸಿಂಗ್ ಅದನ್ನು ಮೃದುವಾಗಿ ಅಂಟಿರುವ ಜೆಲ್‌ನಂತಾಗಿಸಿ ಆರೋಗ್ಯಕರ ಅಂಗಾಂಶಗಳಿಗೆ ಯಾವುದೇ ಹಾನಿಯಾಗದಂತೆ ತಡೆಯುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


