ಪಿಟ್ರಿಯಾಸಿಸ್ ಅಲ್ಬಾ

ಮಕ್ಕಳ ದೇಹದ ಕೆಲವು ಭಾಗಗಳಲ್ಲಿ ಬಿಳಿ ಮಚ್ಚೆ ಕಾಣಿಸಿಕೊಳ್ಳುತ್ತವೆ. ಇವು ತೊನ್ನೆಂದು ಪೋಷಕರಿಗೆ ಆತಂಕವಾಗುವುದೂ ಉಂಟು. ಆದರೆ, ಅಷ್ಟೊಂದು ಭಯ ಪಡಬೇಕಾದ ಅಗತ್ಯವಿಲ್ಲ. ಯಾಕೆಂದರೆ, 6 ರಿಂದ 12 ವಯೋವಾನದ ಮಕ್ಕಳ ದೇಹದ ಕುತ್ತಿಗೆ, ಮುಖ, ಕೈಗಳ ಮೇಲೆ ಇಂಥ ಮಚ್ಚೆಗಳು ಸಾಮಾನ್ಯ. ಇದು ಕೇವಲ ಚರ್ಮದಲ್ಲಿ ಕಾಣಿಸಿಕೊಳ್ಳುವಂಥ ಪಿಟ್ರಿಯಾಸಿಸ್ ಆಲ್ಬಾ ರೋಗದ ಗುಣ ಲಕ್ಷಣವಷ್ಟೇ. ಸಾಮಾನ್ಯವಾಗಿ ಚರ್ಮದ ಬಣ್ಣಕ್ಕಿಂತಲೂ ಬಿಳಿಯಾದ ವೃತ್ತಾಕಾರದ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ಕೆಲವು ಬಾರಿ ಇಂಥ ಬಿಳಿ ಮಚ್ಚೆಗಳಲ್ಲಿ ಚರ್ಮವು ಒರಟಾಗಿ, ಉದುರುತ್ತದೆ. ಹಾಗಂತ, ತೊನ್ನು ಎಂದು ಭಯಪಡಬೇಕಾದ ಅಗತ್ಯವಿಲ್ಲ.
ಕಾರಣವೇನು?
ಇಂಥ ಸಮಸ್ಯೆಗೆ ಮುಖ್ಯ ಕಾರಣ ಏನೆಂಬುದು ಈವರೆಗೂ ಅಸ್ಪಷ್ಟವಾಗಿಯೇ ಉಳಿದಿದೆ. ಆದರೆ, ಈ ಸಮಸ್ಯೆಗೆ ಚಿಕಿತ್ಸೆ ಕೊಡಿಸದೇ ಇದ್ದಲ್ಲಿ ಬಿಳಿ ಮಚ್ಚೆಗಳು ವರ್ಷಗಳ ಕಾಲ ಉಳಿಯುವ ಸಾಧ್ಯತೆ ಇರುತ್ತದೆ. ಈ ಸಮಸ್ಯೆಗೆ ಪರಿಣಿತರು ಕೆಲವು ಕಾರಣಗಳನ್ನು ಗುರುತಿಸಿದ್ದಾರೆ.
- ಶಾಖ
- ಶುಷ್ಕ ವಾತಾವರಣ
- ಒತ್ತಡ
- ಒರಟಾದ ಉಡುಪನ್ನು ಧರಿಸುವುದು.
- ಹೆಚಿನ ಸಾಂದ್ರತೆ ಉಳ್ಳಂತಹ ಡಿಟರ್ಜೆಂಟ್, ಸೋಪ್‌ಗಳ ಬಳಕೆ
- ನಿಮ್ಮ ಮಕ್ಕಳಲ್ಲಿ ಇಂಥ ಮಚ್ಚೆಗಳು ಕಾಣಿಸಿಕೊಂಡರೆ, ಮೊದಲಿಗೆ ಅವರ ಚರ್ಮ ತೇವಾಂಶದಿಂದ ಕೂಡಿರುವಂತೆ ನೋಡಿಕೊಳ್ಳಿ.
- ಕಡಿಮೆ ಸಾಂದ್ರತೆಯುಳ್ಳ ಸೋಪ್ ಅಥವಾ ಮಾಸ್ಚ್ಯುರೈಸಿಂಗ್ ಸೋಪ್‌ಗಳನ್ನು ಬಳಸಿ.
- ಪೆಟ್ರೋಲಿಯಂ ಜಲ್ಲಿ, ಸ್ಕೇಂಟ್ ಫ್ರೀ ಲೋಷನ್ ಅಥವಾ ಕ್ರೀಮ್ ಬಳಸಿ ನಿಮ್ಮ ಮಕ್ಕಳ ಚರ್ಮವನ್ನು ಶುಷ್ಕತನದಿಂದ ಕಾಪಾಡಿ.
- ಮಕ್ಕಳನ್ನು ಬಿಸಿಲಿನಿಂದ ದೂರವಿಡಿ. ಇದಕ್ಕಾಗಿ ಸನ್ ಸ್ಕ್ರೀನ್ ಲೋಷನ್ ಬಳಸಿ.
- ಸ್ವಿಮ್ಮಿಂಗ್‌ನಿಂದ ದೂರವಿರುವುದು ಉತ್ತಮ. ಇದರಿಂದಾಗಿ ಕಲೆಗಳು ಹಾಗೆಯೇ ಉಳಿಯುವ ಸಾಧ್ಯತೆ ಇರುತ್ತವೆ. ಅಲ್ಲದೆ ಈಜುಕೊಳದಲ್ಲಿನ ಕ್ಲೋರಿನ್ ಅಂಶ ಚರ್ಮವನ್ನು ಕಪ್ಪಾಗಿಸುವುದರಿಂದ ಮಚ್ಚೆಗಳು ಎದ್ದು ತೋರುವಂತೆ ಮಾಡುತ್ತವೆ.
- ಒಂದು ವೇಳೆ ಇಂಥ ಮುನ್ನೆಚ್ಚರಿಕೆಯ ಕ್ರಮಗಳು ವಿಫಲವಾದಲ್ಲಿ ಹಾಗೂ ಸಮಸ್ಯೆ ಮತ್ತಷ್ಟು ಹೆಚ್ಚಾದ ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಕಿಸಿ.
ಡಾ. ಹೆಲ್ತ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


