ಆರೋಗ್ಯ-ಜೀವನಶೈಲಿ

ಡಯಾಬೀಟ್ ಕೇರ್

ಭಾರತ ಮಧುಮೇಹದ ತವರಾಗುವತ್ತ ದಾಪುಗಾಲಿಡುತ್ತಿದೆ. ಡಯಾಬಿಟಿಸ್‌ನಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಬೇಕಾದ ತಂತ್ರಜ್ಞಾನವನ್ನು ...

ಡಯಾಬೀಟ್ ಕೇರ್
Published On :

ಭಾರತ ಮಧುಮೇಹದ ತವರಾಗುವತ್ತ ದಾಪುಗಾಲಿಡುತ್ತಿದೆ. ಡಯಾಬಿಟಿಸ್‌ನಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಬೇಕಾದ ತಂತ್ರಜ್ಞಾನವನ್ನು ಅರಿತುಕೊಳ್ಳುವುದು ಹಾಗೂ ಅದನ್ನು ಅಳವಡಿಸಿಕೊಳ್ಳುವುದು ಸದ್ಯದ ಅನಿವಾರ್ಯತೆ. ಆದರೆ, ಅದಕ್ಕೆ ಸೂಕ್ತ ಚಿಕಿತ್ಸೆ ನೀಡಲು ತಜ್ಞರಿಲ್ಲ. ಇದ್ದರೂ ಅಗತ್ಯದಷ್ಟಿಲ್ಲ. ಈ ಕೊರತೆಯನ್ನು ನೀಗಿಸಲು 'ಡಯಾಬಿಟಾಕೇರ್‌' ತರಬೇತಿ ಕಾರ್ಯಕ್ರಮವನ್ನು ನೀಡಲು ಮುಂದಾಗಿದೆ. ಭಾರತದಲ್ಲಿ ಕೆಲವು ತಿಂಗಳುಗಳ ಕಾಲ ಡಯಾಬಿಟೀಸ್ ತಜ್ಞರು ಹಾಗೂ ನರ್ಸ್‌ಗಳಿಗೆ ವಿಶೇಷ ತರಬೇತಿಯನ್ನು ಈ ಸಂಸ್ಥೆ ನೀಡಲು ಮುಂದಾಗಿದೆ.

ಫೂಟ್ ಕೇರ್
ಭಾರತದಲ್ಲಿ ಹೆಚ್ಚಾಗಿ ಸಕ್ಕರೆ ರೋಗಿಗಳು ತಮ್ಮ ಕಾಲಿನ ಬಗ್ಗೆ ನಿರ್ಲಕ್ಷ್ಯ ತಾಳುತ್ತಾರೆ. ಆದರೆ, ಇದರಿಂದ ಕಾಲನ್ನೇ ಕಳೆದುಕೊಳ್ಳಬೇಕಾಗಬಹುದು. ಸಾಮಾನ್ಯವಾಗಿ ವೈದ್ಯರು ಸಕ್ಕರೆ ರೋಗಿಯ ಪಾದವನ್ನು ಪರೀಕ್ಷಿಸುವಲ್ಲಿ ವಿಫಲರಾಗುತ್ತಾರೆ. ಅಧಿಕ ರಕ್ತದೊತ್ತಡ ಹಾಗೂ ಮಧುಮೇಹ ಸೇರಿ ಕಾಣಿಸಿಕೊಳ್ಳುವ ಡಯಾಬಿಟಿಕ್ ನ್ಯೂರೋಪಥಿಯು ಮಾನವನ ನರಕ್ಕೇ ಹಾನಿಯನ್ನುಂಟು ಮಾಡುತ್ತದೆ. ಪ್ರತಿ 7 ಮಧುಮೇಹ ರೋಗಿಗಳಲ್ಲಿ ಒಬ್ಬ ಇಂಥ 'ಫೂಟ್ ಅಲ್ಸರ್‌'ನಿಂದ ತಮ್ಮ ಕಾಲುಗಳನ್ನೇ ಕಳೆದುಕೊಳ್ಳುವ ಭೀತಿ ಎದುರಿಸುತ್ತಾನೆ.
ಡಯಾಬಿಟಿಸ್‌ಗೆ ಚಿಕಿತ್ಸೆಯನ್ನು ಸಾಮಾನ್ಯಗೊಳಿಸಲು ಸಾಧ್ಯವಿಲ್ಲ. ಈ ರೋಗಕ್ಕೆ ರೋಗಿಯ ವೈಯಕ್ತಿಕ ಕೇರ್ ಎಂಬುದು ಅಗತ್ಯ. ವೈಯಕ್ತಿಕ ಕೇರ್‌ನ ಉದ್ದೇಶ ವ್ಯಕ್ತಿಯ ಜೀವನಶೈಲಿಗೆ ಅನುಗುಣವಾಗಿ ರೋಗದ ಬಗ್ಗೆ ನಿಗಾವಹಿಸುವುದು.
ಇನ್ನೊಂದು ಮಹತ್ವದ ಸಂಗತಿ ಎಂದರೆ ವೈದ್ಯರು ಹಾಗೂ ರೋಗಿಯ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸಬಲ್ಲ, ರೋಗಿಗಳಿಗೆ ಹೆಚ್ಚು ಹತ್ತಿರವಾಗಿರುವ ತಜ್ಞ ನರ್ಸ್‌ಗಳ ಅಗತ್ಯವಿದೆ. ಈ ನರ್ಸ್‌ಗಳು ನಿರಂತರವಾಗಿ ರೋಗಿಯ ಮೇಲೆ ನಿಗಾ ವಹಿಸುವ, ಆ ರೋಗಿಗೆ ನೀಡಬೇಕಾದ ನಿರ್ದಿಷ್ಟ ಡೋಸೇಜ್ ಹಾಗೂ ಆತ ಅನುಸರಿಸಬೇಕಾದ ಡಯಟ್‌ಗಳನ್ನು ತಿಳಿದುಕೊಳ್ಳುವ ಸಾಮರ್ಥ್ಯ ಹೊಂದಿರಬೇಕು.

ಡಯಾಬಿಟಾಕೇರ್ ಬಗ್ಗೆ
ವೈಯಕ್ತಿಕ ಡಯಾಬಿಟಿಸ್ ಕೇರ್ ಒದಗಿಸುವ ಸಂಸ್ಥೆಯಾದ ಡಯಾಬಿಟಾಕೇರ್ ಅನ್ನು 2013ರಲ್ಲಿ ಭಾರತದಲ್ಲಿ ಸ್ಥಾಪಿಸಲಾಯಿತು. ಡಯಾಬಿಟಾಕೇರ್ ಸೇವೆಯನ್ನು ಮಧುಮೇಹ ನಿಯಂತ್ರಣದಲ್ಲಿ ಖ್ಯಾತನಾಮರೆಂದೇ ಪರಿಗಣಿಸಲ್ಪಟ್ಟ ಯುಕೆ ಹಾಗೂ ಭಾರತದ ವೈದ್ಯರ ತಂಡ ಅಭಿವೃದ್ಧಿಪಡಿಸಿದೆ. ಡಿಕೇರ್ ಸ್ಮಾರ್ಟ್ ಟಿಎಂ ಎಂಬ ವಿಶಿಷ್ಟ ಸಂಪರ್ಕ ಸಾಧನವನ್ನು ಭಾರತದಲ್ಲಿ ಜಾರಿಗೆ ತಂದ ಪ್ರಪ್ರಥಮ ಹೆಲ್ತ್ ಕೇರ್ ಸಂಸ್ಥೆ ಇದು.
ಇದು ಹೊಸ ತಲೆಮಾರಿನ ಗ್ಲುಕೋಮೀಟರ್ ಆಗಿದ್ದು, ರೋಗಿಯ ಗ್ಲುಕೋಸ್ ಪ್ರಮಾಣದ ದಾಖಲೆಯನ್ನು ಸುರಕ್ಷಿತ ಡೇಟಾಬೇಸ್‌ಗೆ ವರ್ಗಾಯಿಸುತ್ತದೆ. ನಂತರ ಅದರ ಪರ್ಸನಲೈಸ್ಡ್ ವೈದ್ಯಕೀಯ ದಾಖಲೆಗಳನ್ನು ಡಯಾಬಿಟಾಕೇರ್‌ನ ಕಸ್ಟಮೈಸ್ಡ್ ಹಾಗೂ ಗ್ರಾಹ್ಯ ಡಯಾಬಿಟಿಸ್ ಎಲೆಕ್ಟ್ರಾನಿಕ್ ಮೆಡಿಕಲ್ ರೆಕಾರ್ಡ್ ಸಿಸ್ಟಂ (ಡಿಎಕ್ಸ್ ನೆಟ್)ಗೆ ವರ್ಗಾಯಿಸುತ್ತದೆ. ಈ ವ್ಯವಸ್ಥೆಯನ್ನು ಹೇಗೆ ಸಿದ್ಧಪಡಿಸಲಾಗಿದೆ ಎಂದರೆ, ಅದು ರೋಗಿಯ ವೈಯಕ್ತಿಕ ಡಿಕೇರ್‌ಗೆ ಹಾಗೂ ವೈದ್ಯರಿಗೆ ಅಲರ್ಟ್‌ಗಳನ್ನು ರವಾನಿಸುತ್ತದೆ. ಆ ಮೂಲಕ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾಡುತ್ತದೆ. ಮಕ್ಕಳು ಹಾಗೂ ವೃದ್ಧರಾಗಿದ್ದಲ್ಲಿ, ಡಿಎಕ್ಸ್ ನೆಟ್ ಅಲರ್ಟ್ ಅನ್ನು ರೋಗಿಯ ಹೆತ್ತವರು ಅಥವಾ ಸಮೀಪದ ಬಂಧುಗಳಿಗೆ ಕಳುಹಿಸುವಂತೆ ಸೆಟ್ ಮಾಡಲಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ "www.diabetacare.com' ವಿಳಾಸಕ್ಕೆ ಲಾಗ್ ಆನ್ ಆಗಿರಿ.

- ಡಾ. ಸಂಜೀವ್ ಅಗರ್‌ವಾಲ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.