ನೆಗಡಿಗೆ ಮನೆ ಮದ್ದು

Published On :
ಈ ಹಾಳಾದ್ದು ಶೀತ, ಮೂಗನ್ನೇ ಕಟ್ ಮಾಡಿ ಎಸೆಯಬೇಕು ಎನಿಸುವಂತೆ ಮಾಡುತ್ತಿದೆಯೇ? ಇನ್ನಂತೂ ಮಳೆಗಾಲ. ಈ ಸಮಸ್ಯೆ ಎಲ್ಲರನ್ನೂ ಕಾಡುವುದು ಸಹಜ. ಜೊತೆಗೆ ಗಂಟಲು ಕೆರೆತ, ನೋವು, ಕಣ್ಣುರಿ ನಿಮ್ಮನ್ನು ಬಾಧಿಸುತ್ತಿದೆಯೇ? ತಲೆ ಕೆಡಿಸಿಕೊಳ್ಳಬೇಡಿ. ಇಲ್ಲಿದೆ ಮನೆ ಔಷಧಿ...
- ಅರ್ಧ ಲೋಟ ನೀರು, ಅರ್ಧ ಲೋಟ ಹಾಲಿಗೆ ಒಂದು ಬೆಳ್ಳುಳ್ಳಿ ಎಸಳು, ಒಂದು ಲವಂಗ, ಎರಡು ಚಿಟಕಿ ಅರಿಶಿಣ, ರುಚಿಗೆ ತಕ್ಕಷ್ಟು ಬೆಲ್ಲ ಹಾಕಿ, 2-3 ನಿಮಿಷ ಕುದಿಸಿ. ಶೋಧಿಸಿ. ಬಿಸಿ ಕಷಾಯ ಕುಡಿದು ಬಿಡಿ. ದಿನಕ್ಕೆ 2 ರಿಂದ 4 ಬಾರಿ ಸೇವಿಸಿದರೆ ಶೀತದಿಂದ ಬೇಗ ಮುಕ್ತರಾಗುವಿರಿ.
- ಸಿಪ್ಪೆ ತೆಗೆದ ಅರ್ಧ ಅಂಗುಲ ಹಸಿ ಶುಂಠಿಯನ್ನು ಜಜ್ಜಿದ ರಸ, ಓಮದ ಕಾಳು ಮತ್ತು ಬೆಲ್ಲವನ್ನು ಬೆರೆಸಿ, ಒಟ್ಟಾಗಿ ಕುದಿಸಿದ ಕಷಾಯವನ್ನು ದಿನಕ್ಕೆರಡು ಬಾರಿಯಂತೆ ನಾಲ್ಕು ದಿನಗಳ ಕಾಲ ಕುಡಿಯಿರಿ.
- ತಲಾ 5 ಗ್ರಾಂ ಧನಿಯಾ, ಜೀರಿಗೆ, ಶುಂಠಿ, ಹಿಪ್ಪಲಿ, ಕಾಳುಮೆಣಸುಗಳನ್ನು ಪುಡಿಮಾಡಿ ಅರಿಶಿಣ 2 ಚಮಚ, ತುಳಸಿ ಎಲೆಗಳನ್ನು ಸೇರಿಸಿ ಒಂದು ಲೋಟ ನೀರಿನೊಂದಿಗೆ ಕುದಿಸಿ ಶೋಧಿಸಿ. ರುಚಿಗೆ ತಕ್ಕಷ್ಟು ಬೆಲ್ಲ ಹಾಗೂ ಹಾಲನ್ನು ಸೇವಿಸಿ. ಈ ಕಷಾಯವನ್ನು ದಿನಕ್ಕೆರಡು ಬಾರಿ ಊಟಕ್ಕಿಂತ ಮುಂಚೆ, ಅರ್ಧ ಲೋಟ ಸೇವಿಸಿ.
- ಬಿಸಿ ನೀರಿನಲ್ಲಿ ನೀಲಗಿರಿ ಎಣ್ಣೆ ಹಾಕಿ ಹಬೆಯನ್ನು ಸೇವಿಸಿದರೆ ಮೂಗು ಕಟ್ಟುವುದು ನಿವಾರಣೆಯಾಗುತ್ತದೆ.
- ಒಣಶುಂಠಿ ಬಿಲ್ಲೆಯನ್ನು ನೀರಿನೊಂದಿಗೆ ಸಾಣೆಕಲ್ಲಿನಲ್ಲಿ ತೇಯ್ದ ಲೇಪವನ್ನು ಹಣೆ ಮೇಲೆ, ಬದಿಗೆ ಸವರಿ ನಿದ್ರಿಸಿದರೆ ಶೀತದಿಂದ ಕಾಡುವ ತಲೆನೋವು, ತಲೆಭಾರ ಕಡಿಮೆಯಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


