ನಾsick

ಈಗ ತಾನೆ ಚಳಿಗಾಲ ಮುಗಿದು ಬೇಸಿಗೆ ಬರುತ್ತಿದೆ. ವೆದರ್ ಬದಲಾಗುತ್ತಿದ್ದಂತೆ ಮೂಗಲ್ಲಿ ರಕ್ತ ಸೋರೋದು ಕಾಮನ್. ಪರಿಸರ ಮಾಲಿನ್ಯ ಅಥವಾ ವಾತಾವರಣದ ಉಷ್ಣತೆ ಹೆಚ್ಚಾಗುವುದು ಇದಕ್ಕೆ ಕಾರಣ.
ಹೌದು. ಮೂಗಿನ ರಕ್ತಸ್ರಾವ ಎಂಬುವುದು ಯಾವಾಗ ಬೇಕಾದರೂ, ಯಾರಿಗೆ ಬೇಕಾದರೂ ಆಗಬಹುದು. ಇದೊಂದು ವಿಚಿತ್ರ ಕಾಯಿಲೆ. ಹೆಚ್ಚು ಹೆಚ್ಚು ರಕ್ತಸ್ರಾವವಾದರೆ ದೇಹವನ್ನು ನಿಶ್ಶಕ್ತಗೊಳಿಸಿ, ದೈಹಿಕ ಮಾನಸಿಕ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಅನೇಕ ಸಣ್ಣ ರಕ್ತನಾಳಗಳಿಂದ ಕೂಡಿರುವ ಮೂಗಿನಲ್ಲಿ ರಕ್ತಸ್ರಾವ ಈಗೀಗ ಸಾಮಾನ್ಯ. ಶೇ.60ರಷ್ಟು ಜನರಲ್ಲಿ ಈ ಸಮಸ್ಯೆ ಕಾಣಿಸುತ್ತಿದ್ದು, ಶೇ.10 ಮಂದಿ ಮಾತ್ರ ವೈದ್ಯಕೀಯ ಪರೀಕ್ಷೆಗೊಳಪಡುತ್ತಾರೆ. ಇದು ಹೆಚ್ಚು ಶೀತ ಹಾಗೂ ಒಣ ವಾತಾವರಣ ಇದ್ದಾಗ ಸಂಭವಿಸುವುದಲ್ಲದೆ ಮಕ್ಕಳಲ್ಲಿ ಪದೇ ಪದೇ ತಲೆನೋವು ತರಿಸುತ್ತದೆ.
ಎಲ್ಲಿ, ಹೇಗೆ?
ಶೀತ ಮತ್ತು ಒಣ ಹವೆ ಇದ್ದಾಗ ಹೆಚ್ಚು, ಎತ್ತರದ ಸ್ಥಳದಲ್ಲಿದ್ದಾಗ, ಮೂಗಿನಲ್ಲಿ ಗಾಯ ಮತ್ತು ಅಲರ್ಜಿಯಿಂದ, ಪದೇ ಪದೇ ಸೀನುವುದು ಹಾಗೂ ಉಜ್ಜುವುದರಿಂದ, ಕೆಮಿಕಲ್‌ನಿಂದ ಇರಿಟೇಟ್ ಆದಾಗ, ಜಿಗಣೆ ಕಚ್ಚಿದಾಗ ಹಾಗೂ ಮೂಗಿನಲ್ಲಿ ಊತ ಉಂಟಾದಾಗ, ರಕ್ತ ಹೀನತೆಯಿಂದ, ಮೂಗು ಕಟ್ಟಿಕೊಂಡಾಗ ಅತಿಯಾಗಿ ಬಳಸುವ ಔಷಧಗಳಿಂದ, ಮೂಗಿನ ಶಸ್ತ್ರಚಿಕಿತ್ಸೆ ಮಾಡಿಸಿದಾಗ, ಮದ್ಯಪಾನ ಸೇವನೆಯಿಂದ, ಗರ್ಭಧಾರಣೆಯಾದಾಗ, ಹೆಚ್ಚು ಟೆನ್ಷನ್ ಮಾಡಿಕೊಂಡಾಗ, ನರಗಳ ದೌರ್ಬಲ್ಯದಿಂದ, ವಿಟಮಿನ್ ಸಿ ಮತ್ತು ವಿಟಮಿನ್ ಕೆ ಕಡಿಮೆಯಾದಾಗ, ರಕ್ತ ತೆಳುವಾದಾಗ, ಬ್ಲಡ್ ಕ್ಯಾನ್ಸರ್ ಇದ್ದರೆ, ಎದೆ ನೋವು ಕಾಣಿಸಿಕೊಂಡಾಗ, ಹೆಚ್ಚು ಒತ್ತಡಕ್ಕೊಳಗಾದಾಗ, ದೇಹ ಹೀಟ್ ಆದಾಗ.
ಪತ್ತೆ ಹೇಗೆ?
ರಕ್ತ ಪರೀಕ್ಷೆ ಮಾಡಸಿಕೊಳ್ಳಿ. ಮೂಗಿನ ಎಂಡೋಸ್ಕೋಪ್ ಮಾಡಿಸಿ, ರಕ್ತ ಹೆಪ್ಪುಗಟ್ಟಿದಾಗ ಟೆಸ್ಟ್ ಮಾಡಿಸಿ, ಪ್ರೋಥ್ರಂಜಿನ್ ಟೆಸ್ಟ್ ಹಾಗೂ ಮೂಗಿನ ಸಿಟಿ ಸ್ಕ್ಯಾನ್ ಮಾಡಿಸಿ.
ರಕ್ತಸ್ರಾವಕ್ಕೆ ಮನೆ ಮದ್ದು
ಹೆಬ್ಬೆರಳು ಮತ್ತು ತೋರುಬೆರಳುಗಳಿಂದ ಮೃದುವಾದ ಮೂಗಿನ ಭಾಗವನ್ನು ಒತ್ತಿ ಹಿಡಿಯಿರಿ, ಮೂಗಿನ ಮೃದು ಭಾಗಕ್ಕೆ ಐಸ್ ಅಥವಾ ತಣ್ಣನೆ ಬಟ್ಟೆ ಸುತ್ತಿ, ರಕ್ತಸ್ರಾವವಾಗುವಾಗ ಬೆಲ್ಲ ಅಥವ ಸಕ್ಕರೆ ತಿನ್ನಿ, 30-40 ನಿಮಿಷ ರೆಸ್ಟ್ ತೆಗೆದುಕೊಳ್ಳಿ, ಧೂಮಪಾನ ಮದ್ಯಪಾನದಿಂದ ದೂರವಿರಿ, ಕನಿಷ್ಠ 24 ಗಂಟೆ ಯಾವುದೇ ಬಿಸಿ ತಿಂಡಿಗಳನ್ನು ತಿನ್ನಬೇಡಿ, ರಕ್ತ ತೆಳ್ಳಗಾಗುವಂಥ (ಆ್ಯಸ್ಪರಿನ್, ಐಬ್ರೂಫೀನ್, ಕ್ರೊಪಿಡೋಗ್ರೇನ್) ಮಾತ್ರೆಗಳನ್ನು ಸೇವಿಸಬೇಡಿ, ಸ್ವಲ್ಪ ಸಮಯ ಬಾಯಿ ಮೂಲಕ ಉಸಿರಾಡಿ, ರಕ್ತಸ್ರಾವವನ್ನು ತಡೆಹಿಡಿಯಲು ತೇವಾಂಶ ಇರುವ ವಾಶ್‌ಕ್ಲಾತ್ ಅಥವಾ ಟಿಶ್ಯೂ ಬಳಸಿ, ಮಲಗುವಾಗ ಎತ್ತರದ ತಲೆದಿಂಬನ್ನು ಬಳಸಿ, ಹೆಚ್ಚು ಬಿಸಿನೀರಿನ ಸ್ನಾನ ಬೇಡ, ಬಿಸಿ ಅಥವಾ ಹೆಚ್ಚು ತಣ್ಣನೆಯ, ಖಾರದ ಆಹಾರವನ್ನು ತ್ಯಜಿಸಿ.
- ವಿಜಯ್.ಆರ್. ಹೊಸನಗರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


