ಆರೋಗ್ಯ-ಜೀವನಶೈಲಿ

ರಕ್ತಚರಿತೆ

ರಕ್ತಚರಿತೆ
Published On :

ಒಂದು ಜೀವ ಉಳಿಸಲು ರಕ್ತ ನೀಡಿದರೆ, ಅದಕ್ಕಿಂತ ಮಹಾದಾನ ಮತ್ತೊಂದಿಲ್ಲ. 120 ಕೋಟಿಗೂ ಮಿಗಿಲಾದ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ನಿತ್ಯ ಸಹಸ್ರಾರು ಮಂದಿ ಅನಾರೋಗ್ಯದಿಂದ ಬಳಲುತ್ತಿರುತ್ತಾರೆ, ಅಪಘಾತಕ್ಕೀಡಾಗುತ್ತಿರುತ್ತಾರೆ. ಅವರಿಗೆ ತುರ್ತು ಶಸ್ತ್ರಚಿಕಿತ್ಸೆ ನೆರವೇರಿಸಬೇಕಾದರೆ ರಕ್ತ ಬೇಕು.
ಇಂಥ ತುರ್ತು ಅಗತ್ಯ ಪೂರೈಸಲು ಮೈಸೂರಿನ ರೋಟರಿ ಸಂಸ್ಥೆ ಎಸ್‌ಎಂಎಸ್ ಫಾರ್ ಬ್ಲಡ್ ಎಂಬ 24x7 ಸೇವೆ ಆರಂಭಿಸಿದ್ದು, ರಕ್ತದಾನಿಗಳು, ರಕ್ತದ ಅಗತ್ಯವಿರುವವರು ಈ ಸೇವೆಯನ್ನು ಬಳಸಿಕೊಳ್ಳಬಹುದು.
ರಕ್ತ ಪಡೆಯುವವರು ಎಸ್‌ಎಂಎಸ್ ಕಳುಹಿಸುವ ಮೂಲಕ ರಕ್ತ ಪಡೆಯಬಹುದು ಮತ್ತು ದಾನಿಗಳು ರಕ್ತ ನೀಡಬಹುದು.
ಎಸ್‌ಎಂಎಸ್ ಕಳ್ಸೋದು ಹೇಗೆ?
ರಕ್ತ ಬೇಕಿದ್ದರೆ REQ blood - group ಎಂದು ನಮೂದಿಸಿ 94824 08100ಕ್ಕೆ ಎಸ್‌ಎಂಎಸ್ ಮಾಡಬಹುದು. ಉದಾಹರಣೆಗೆ 'ಎ' ಪಾಸಿಟಿವ್ ರಕ್ತ ಬೇಕಿದ್ದರೆ, REQ a+  ಎಂದು ನಮೂದಿಸಿ ಸಂದೇಶ ಕಳುಹಿಸಬೇಕು.
ರಕ್ತ ನೀಡುವವರು ಹೆಸರು ನೋಂದಾಯಿಸಿಕೊಳ್ಳಲು REG blood-group ಮತ್ತು ವಯಸ್ಸು ನಮೂದಿಸಿ  94824 08100ಗೆ ಎಸ್‌ಎಂಎಸ್ ಮಾಡಬಹುದು. REQ a+ ಗುಂಪಿನ 32 ವರ್ಷದವರಾಗಿದ್ದಲ್ಲಿ REG blood-group ಎಂದು ನಮೂದಿಸಿ 94824 08100ಗೆ ಎಸ್‌ಎಂಎಸ್ ಕಳುಹಿಸಬೇಕು.
ಈಗಾಗಲೇ ನೋಂದಾಯಿಸಿರುವ ದಾನಿಗಳು ಇತ್ತೀಚೆಗೆ ರಕ್ಕದಾನ ಮಾಡಿದ್ದಲ್ಲಿ 3 ತಿಂಗಳವರೆಗೆ ಸಂಪರ್ಕಿಸದಿರಲು DONATED ಎಂದು ನಮೂದಿಸಿ 94824 08100ಗೆ ಎಸ್‌ಎಂಎಸ್ ಕಳುಹಿಸಬೇಕು. ಕೆಲವು ಸಮಯದವರೆಗೆ ರಕ್ತದಾನ ಮಾಡಲು ಇಚ್ಛಿಸದಿದ್ದಲ್ಲಿ DND ಎಂದು 94824 08100ಗೆ ಎಸ್‌ಎಂಎಸ್ ಕಳುಹಿಸಿದರೆ ಸರಿ. ನಿಮ್ಮನನ್ನು ಯಾರೂ ಡಿಸ್ಬರ್ಬ್ ಮಡೋದಿಲ್ಲ. ಮತ್ತೆ ರಕ್ತದಾನ ಮಾಡಲು ಇಚ್ಛಿಸಿದಲ್ಲಿ ACT ಎಂದು ನಮೂದಿಸಿ ಅದೇ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಕಳುಹಿಸಬೇಕು. ನೋಂದಣಿ ರದ್ದತಿಗೆ ಉಊಔ ಎಂದು ನಮೂದಿಸಿ ಎಸ್‌ಎಂಎಸ್ ಕಳುಹಿಸಬೇಕು. ಎಸ್‌ಎಂಎಸ್ ಕಳುಹಿಸುವುದಕ್ಕೆ ಸಂಬಂಧಿಸಿದಂತೆ ಏನಾದರೂ ಸಹಾಯಬೇಕಿದ್ದಲ್ಲಿ DEL ಎಂದು ನಮೂದಿಸಿ ಅದೇ ಮೊಬೈಲ್‌ಗೆ ಎಸ್‌ಎಂಎಸ್ ಕಳುಹಿಸಬೇಕು.
ನೋಂದಾಯಿತರೆಷ್ಟು ಮಂದಿ?
ಕಳೆದ ತಿಂಗಳು ಈ ಸೇವೆಗೆ ಚಾಲನೆ ಸಿಕ್ಕಿದ್ದು, ಈವರೆಗೆ 934 ರಕ್ತದಾನಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಅವರಲ್ಲಿ 651 ಮಂದಿ ರಕ್ತದಾನಕ್ಕೆ ಲಭ್ಯವಿದ್ದಾರೆ. ರೋಟರಿ, ಎಸ್‌ಪಿಐ, ಬಿಎಸ್‌ಎನ್‌ಎಲ್, ಬಿಗ್ ಎಫ್‌ಎಂ 92.7, ಸ್ಕೈ ವೇ, ಟೋರಸ್ ಸಲ್ಯೂಷನಸ್, ಚಂದ್ರಕಲಾ ಆಸ್ಪತ್ರೆ ಮೊದಲಾದ ಪ್ರಾಯೋಜಿತ ಸಂಸ್ಥೆಗಳ ಮೂಲಕ ನಡೆಸುವ ರಕ್ತದಾನ ಶಿಬಿರಗಳು ಸೇರಿದಂತೆ ಮೈಸೂರಿನ ಸಭೆ, ಸಮಾರಂಭಗಳು ಸೇರಿ ನಾನಾ ಕಡೆ ರಕ್ತದಾನದ ಬಗ್ಗೆ ಅರಿವು ಮೂಡಿಸಲಾಗುತ್ತದೆ. ರಕ್ತದಾನ ಶಿಬಿರಗಳಲ್ಲಿ ಸಂಗ್ರಹವಾಗುವ ರಕ್ತವನ್ನು 30 ರಿಂದ 35 ದಿನಗಳು ಮಾತ್ರ ಸಂಗ್ರಹವಾಗಿಡಲು ಸಾಧ್ಯ. ಹೀಗಾಗಿ ಹೆಸರು ನೋಂದಾಯಿಸಿ, ಅಗತ್ಯವಿದ್ದಾಗ ರಕ್ತದಾನ ಮಾಡಿ, ನಿಮ್ಮ ಹೆಸರನ್ನು ಗೌಪ್ಯವಾಗಿಡಲಾಗುತ್ತದೆ.
 ರಕ್ತದಾನ ಮಾಡಿ, ಜೀವ ಉಳಿಸಿ. ಮಾಹಿತಿಗೆ ದೂ.0821- 4008100 ಸಂಪರ್ಕಿಸಿ. ಇ- ಮೇಲ್ smsforblood.mysore@gmail.com

-ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.