ಬೂಸ್ಟು ಈಸ್ ದಿ ಸೀಕ್ರೆಟ್ ಆಫ್ ಮೈ ಅಲರ್ಜಿ
ಗಜಕರ್ಣ, ಹುಳುಕಡ್ಡಿ- ಹೀಗೆ ಸಾಮಾನ್ಯವಾಗಿ ಕರೆಯುವ ಅಂಟು ಜಾಡ್ಯ ಫಂಗಸ್‌ಗಳಿಂದ...

ಗಜಕರ್ಣ, ಹುಳುಕಡ್ಡಿ- ಹೀಗೆ ಸಾಮಾನ್ಯವಾಗಿ ಕರೆಯುವ ಅಂಟು ಜಾಡ್ಯ ಫಂಗಸ್‌ಗಳಿಂದ ಬರುವಂಥದ್ದು. ಆಂಗ್ಲಭಾಷೆಯ 'ವರ್ಮ್' ಎಂಬ ಹೆಸರು ಇದಕ್ಕಿದ್ದರೂ ಇದು ಜಂತು ಅಥವಾ ಹುಳುವಿನಿಂದ ಬರುವ ಕಾಯಿಲೆಯಲ್ಲ. ಮೊದಲು ತಿಳಿಸಿದ ಹಾಗೆ ಇದು ಫಂಗಸ್ (ಬೂಸ್ಟು) ಸೋಂಕು. ಇದಕ್ಕೆ ಟೀನಿಯಾ (ಲ್ಯಾಟಿನ್ ಹೆಸರು) ಎಂಬ ಇನ್ನೊಂದು ಹೆಸರೂ ಇದೆ.
ಈ ಸೋಂಕಿನಿಂದ ಉಬ್ಬಾದ ಅಂಟು ಹೊಂದಿರುವ ದುಂಡಾಕಾರದ ದದ್ದು ಅಥವಾ ಗುಳ್ಳೆ ಚರ್ಮದ ಮೇಲೆ ಕಾಣಿಸಿಕೊಳ್ಳುತ್ತದೆ. ಇದು ಕಡಿತ ಉಂಟು ಮಾಡಿ, ದೇಹದ ಯಾವ ಭಾಗದಲ್ಲಿಯಾದರೂ ಚರ್ಮದ ಪದರ ಹಪ್ಪಳಿಕೆ ಏಳುವಂತೆ ಮಾಡಬಹುದು. ತಲೆಯಲ್ಲಿ ಇದು ಕಾಣಿಸಿಕೊಂಡಾಗ ಕೂದಲು ಉದುರುತ್ತದೆ. ಕಾಲಿನಲ್ಲಿ ಇದು ತನ್ನ ಪ್ರಭಾವ ತೋರಿದಾಗ ತುಂಬಾ ಕಡಿತ ಬರುತ್ತದೆ. ಕಾಲು ಬೆರಳುಗಳ ಮಧ್ಯೆ ಚರ್ಮ ಬಿರುಕು ಬಿಟ್ಟುಕೊಳ್ಳುತ್ತದೆ. ಚರ್ಮವಲ್ಲದೇ, ಈ ಸೋಂಕು ಉಗುರಿನಲ್ಲಿಯೂ ಕಾಣಿಸಿಕೊಳ್ಳಬಹುದು.
ಮಕ್ಕಳಲ್ಲಿ ಹೆಚ್ಚು
ಎಲ್ಲ ವಯಸ್ಸಿನವರಲ್ಲಿಯೂ ಈ ಸೋಂಕು ಕಾಣಿಸಿಕೊಳ್ಳಬಹುದಾದರೂ ಮಕ್ಕಳಲ್ಲಿ ಹೆಚ್ಚು. ಇದು ಚರ್ಮದ ಫಂಗಸ್ ಡರ್ಮಟೋಫೈಟ್ಸ್‌ನಿಂದ ಬರುತ್ತದೆ. ದೇಹದ ಒಳಭಾಗಕ್ಕೆ ಈ ಫಂಗಸ್ ಪ್ರವೇಶಿಸುವುದಿಲ್ಲ. ದೇಹದಲ್ಲಿ ಮ್ಯೂಕಸ್ ಮೆಂಬ್ರೇನ್ ದ್ರವ ಜಾಸ್ತಿಯಿರುವ ತಾಣಗಳಾದ ಬಾಯಿ, ಸ್ತ್ರೀ ಜನನಾಂಗಗಳಲ್ಲಿ ಇದು ಬದುಕುವುದಿಲ್ಲ. ಸೋಂಕುಪೀಡಿತ ವ್ಯಕ್ತಿಯ ಚರ್ಮದ ಮೇಲಿನ ಗುಳ್ಳೆಯನ್ನು ಸ್ಪರ್ಶಿಸಿ ಅಥವಾ ತುರಿಸಿಕೊಂಡಾಗ, ಫಂಗಸ್ ಚರ್ಮಕ್ಕೆ ಅಂಟಿಕೊಂಡು ಅಥವಾ ಉಗುರಿನ ಒಳಗೆ ಪ್ರವೇಶ ಪಡೆದು, ಆ ವ್ಯಕ್ತಿ ಇನ್ನೊಬ್ಬರನ್ನು ಮುಟ್ಟಿದಾಗ ಸೋಂಕು ಮತ್ತೊಬ್ಬರಿಗೆ ಹರಡುತ್ತದೆ. ಒಬ್ಬರ ಬಾಚಣಿಗೆಗಳನ್ನು ಇನ್ನೊಬ್ಬರು ಬಳಸಿದರೆ, ತಲೆಯ ಸೋಂಕು ಮತ್ತೊಬ್ಬರಿಗೆ ಹರಡುತ್ತದೆ.
ಚರ್ಮದಲ್ಲಿ ಕಲೆ
- ಚರ್ಮ ಕಪ್ಪು ಅಥವಾ ತೆಳುವಾದ ಬಣ್ಣ ತಳೆಯುತ್ತದೆ.
- ಉಂಗುರದ ರೀತಿಯಲ್ಲಿ ದುಂಡಾದ ಕಲೆ ಕಾಣಿಸಿಕೊಳ್ಳುತ್ತದೆ.
- ಚರ್ಮದಲ್ಲಿನ ಕಲೆ ಅಥವಾ ಗುಳ್ಳೆಯುಂಟಾಗಿ ವಿಪರೀತ ಕಡಿತ ಉಂಟುಮಾಡಬಹುದು. ಕೆಂಪುಬಣ್ಣ ತಳೆಯಬಹುದು, ಚರ್ಮದ ಆ ಭಾಗ ಉಬ್ಬಿದ ರೀತಿಯಲ್ಲಿ ಕಾಣಿಸಬಹುದು.
- ಉಗುರುಗಳಲ್ಲಿ ಸೋಂಕು ಬಂದಾಗ ಬಣ್ಣ ಸಂಪೂರ್ಣ ಬದಲಾಗಬಹುದು. ಉಗುರು ದಪ್ಪಗಾಗಬಹುದು. ಉಗುರು ಚೂರುಚೂರಾಗಿ ಉದುರಿ ಹೋಗಬಹುದು.
- ಸಾಕು ಪ್ರಾಣಿಗಳ ಚರ್ಮವನ್ನು ಆಗಾಗ್ಗೆ ಮುಟ್ಟಬೇಡಿ.
- ಬೇರೆಯವರ ಬಟ್ಟೆ, ಟವೆಲ್, ಬಾಚಣಿಗೆ ಹೆಲ್ಮೆಟ್ ಅಥವಾ ಇನ್ನಿತರ ವೈಯಕ್ತಿಕ ವಸ್ತುಗಳನ್ನು ಬಳಸಬೇಡಿ.
- ಯಾವುದೇ ವಸ್ತುವನ್ನು ಸ್ವಚ್ಛಗೊಳಿಸಿ, ಉಪಯೋಗಿಸಿದ ನಂತರ ತೊಳೆದು ಒಣಗಿಸಿ.
- ಕಾಲು ಮತ್ತು ದೇಹದ ಭಾಗಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಆದಷ್ಟು ಒಣಗಿದ ಸ್ಥಿತಿಯಲ್ಲಿಡಿ.
- ತಲೆ ಕ್ಷೌರದ ನಂತರ ಸ್ವಚ್ಛವಾಗಿ ಶ್ಯಾಂಪೂ ಬಳಸಿ ಸ್ನಾನ ಮಾಡಿ.
- ಜಿಮ್ನಾಷಿಯಂ ಮತ್ತು ಈಜುಕೊಳಗಳಲ್ಲಿ ಸ್ಯಾಂಡಲ್ ಚಪ್ಪಲಿ ಅಥವಾ ಶೂಗಳನ್ನು ಬಳಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


