ಡಾ. ಅರಿಶಿನ

ನಮ್ಮಲ್ಲಿ ಅನೇಕರಿಗೆ ಆಗಿಂದಾಗ್ಗೆ ಸಂಧಿ ಮತ್ತು ಬೆನ್ನುನೋವು ಕಾಣಿಸಿಕೊಳ್ಳುವುದುಂಟು. ಆ ನೋವಿನಲ್ಲಿ ಏರಿಳಿತವಿರುತ್ತದೆ. ಕೆಲವು ಸಲ ನೋವು ಉಪಶಮನವಾಗದೆಯೂ ಇರಬಹುದು.
ದೀರ್ಘಕಾಲದ ಸಂಧಿ ನೋವು ಅಗಾಧ ಪರಿಣಾಮ ಬೀರುತ್ತದೆ. ಇದು ಶರೀರದ ಚೈತನ್ಯವನ್ನು ಕಳೆಗುಂದಿಸುತ್ತದೆ. ಭಾರಿ ಬಳಲಿಕೆಗೆ ಕಾರಣವಾಗುತ್ತದೆ. ಇದು ಮೆಟಬಾಲಿಕ್ ಅವ್ಯವಸ್ಥೆ, ಸ್ಥೂಲಕಾಯ, ಹೃದಯದ ಕಾಯಿಲೆ ಮತ್ತು ಕ್ಯಾನ್ಸರ್‌ಗೂ ಕಾರಣವಾಗಬಹುದು. ಸಂಧಿ ಮೂಳೆಗಳ ಪರಸ್ಪರ ಉಜ್ಜುವಿಕೆಯಿಂದ ಉಂಟಾಗುವ ಸವೆತ ಉರಿಯೂತಕ್ಕೆ ಕಾರಣವಾಗುತ್ತದೆ. ನೋವು ತರುತ್ತದೆ.
ಸಾಮಾನ್ಯವಾಗಿ ಸಂಧಿನೋವು ಶುರುವಾಯಿತು ಎಂದರೆ ಪೇನ್ ಕಿಲ್ಲರ್ ತಿಂದು ಬಿಡುತ್ತೇವೆ. ಅಥವಾ ಆ್ಯಂಟಿ-ಇನ್‌ಫ್ಲೆಮೆಟರಿ ಔಷಧಗಳನ್ನು ಬಳಸುತ್ತೇವೆ. ಉರಿಯೂತ ಕಾಣಿಸಿಕೊಂಡರೆ ಸಿಒಎಕ್ಸ್- ಸ್ಥಿತಿಗೆ ಕಾರಣವಾಗುತ್ತದೆ. ಇದು ಜೀರ್ಣಾಂಗವ್ಯೂಹದ ನಾಳಗಳನ್ನು ರಕ್ಷಿಸುತ್ತದೆ. ರಕ್ತನಾಳಗಳ ಸುಸ್ಥಿತಿಗೆ ಸಹಕರಿಸುತ್ತದೆ. ಆ್ಯಂಟಿ ಇನ್‌ಫ್ಲೆಮೆಟರಿ ಔಷಧಗಳ ದೀರ್ಘಕಾಲೀನ ಬಳಕೆ ಕಿಡ್ನಿ ಮೇಲೆ ಪರಿಣಾಮ ಬೀರಬಲ್ಲದು. ಅಲ್ಸರ್ ಮತ್ತು ರಕ್ತಪಾತಕ್ಕೂ ಕಾರಣವಾಗಬಲ್ಲುದು.
ಅರಿಶಿನ ಬಳಸಿ
ಮನೆಯಲ್ಲಿ ಅಡುಗೆಗೆ ಬಳಸುವ ಅರಿಶಿನವಿದೆಯಲ್ಲ ಅದು ಉರಿಯೂತಕ್ಕೆ ಹೇಳಿ ಮಾಡಿಸಿದ ಔಷಧಿ. ಇದು ಆರೋಗ್ಯಕರ ನೋವು ನಿವಾರಕವೂ ಹೌದು. ಇದು ಸಿಒಎಕ್ಸ್‌ಗೆ ಕಾರಣವಾಗುವ ಅಂಶಗಳನ್ನು ನಿವಾರಿಸಿ, ಮಂಡಿಗಳ ಮರು ಜೋಡಣೆಗೆ ಸಹಕರಿಸುತ್ತದೆ. ಉರಿಯೂತದಿಂದ ಉಂಟಾಗುವ ಹಾನಿಯನ್ನು ಸರಿಪಡಿಸುತ್ತದೆ. ಫಿಸಿಯೋಥೆರಪಿ ರೀಸರ್ಚ್ ನಿಯತಕಾಲಿಕದಲ್ಲಿ ಪ್ರಕಟವಾದ ವರದಿಯಂತೆ ಅರಿಶಿನ ಸಾಮಾನ್ಯ ಆ್ಯಂಟಿ ಇನ್‌ಫ್ಲೆಮೆಟರಿಗಿಂತ ಹೆಚ್ಚು ಪರಿಣಾಮಕಾರಿ. ಈ ಕುರಿತ ಅಧ್ಯಯನದಲ್ಲಿ ಸಂಧಿನೋವಿನ ಲಕ್ಷಣ ಕಾಣಿಸಿಕೊಂಡಿದ್ದ ರೋಗಿಗಳಿಗೆ 8 ವಾರ ಅರಿಶಿನ ನೀಡಲಾಯಿತು. ನೋವಿನಲ್ಲಿ ಶೇ.44ರಷ್ಟು ಉಪಶಮನ ಕಂಡುಬಂದಿತ್ತು. ಆ್ಯಂಟಿ ಇನ್‌ಫ್ಲೆಮೆಟರಿ ಔಷಧ ಹಚ್ಚಿದ್ದವರಲ್ಲಿ ಶೇ.42ರಷ್ಟು ನೋವು ಕಡಿಮೆಯಾಗಿತ್ತು. ಅರಿಶಿನ ಸಂಧಿವಾತ ಮತ್ತು ಉರಿಯೂತ ಎರಡರ ಉಪಶಮನಕ್ಕೂ ಸಹಕಾರಿಯಾಗುತ್ತದೆ.
ಅರಿಶಿನದ ಔಷಧೀಯ ಗುಣಗಳನ್ನು ತೆಗೆದು ತಯಾರಿಸಿದ BCM-95™ ಎಂಬ 500 ಎಂಜಿ ಮಾತ್ರೆಗಳನ್ನು ದಿನಕ್ಕೆರಡು ಬಾರಿ ತೆಗೆದುಕೊಂಡರೆ ಸಂಧಿವಾತ ಸಮಸ್ಯೆಗೆ ಮುಕ್ತಿ ಹಾಡಬಹುದು.
ಏನಿದು ಆರ್‌ಎ?
ಸಂಧಿವಾತ (ಆರ್‌ಎ- Rheumatoid arthritis) ಒಂದು ಆಟೋ ಇಮ್ಯೂನ್ ಕಾಯಿಲೆಯಾಗಿದ್ದು, (ಇಲ್ಲಿ ಶರೀರವೇ ಶರೀರದ ವಿರುದ್ಧ ದಾಳಿ ನಡೆಸುತ್ತದೆ) ತೀವ್ರ ನೋವಿಗೆ ಕಾರಣವಾಗುತ್ತದೆ. ಸಂಧಿಗಳಿಗೆ ಹಾನಿಯನ್ನುಂಟು ಮಾಡಿ ಶರೀರದ ನಾನಾ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ. ಹೃದಯ ಮತ್ತು ಕರುಳಿನ ಮೇಲೆ ಪರಿಣಾಮ ಬೀರಬಹುದು.
ನೋವಿಗೆ ಮುಕ್ತಿ
ಅರಿಶಿನವು ಉತ್ತಮ ನೋವು ನಿವಾರಕ. ದೇಹದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರದಂತೆ ನೋವಿಗೆ ಮುಕ್ತಿ ಹಾಡುತ್ತದೆ.
- ಕ್ರಿಸ್ ಕಿಲ್ಹಾಮ್, ವೈದ್ಯಕೀಯ ಸಂಶೋಧಕ
- ಡಾ. ಬೆನ್ನಿ ಆ್ಯಂಟನಿ
ನಿರ್ದೇಶಕರು, ಕ್ಯೂರ್ ಗಾರ್ಡನ್ (080- 41572581)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


