ಕೆಮ್ಮಿದರೆ ಹುಷಾರ್!

ಅಯ್ಯೋ, ಸದಾ ಕೆಮ್ಮು. ಕೆಲವರಿಗೆ ಒಣ ಕೆಮ್ಮು ಬಾಧಿಸುತ್ತಿದ್ದರೆ, ಮತ್ತೆ ಕೆಲವರಿಗೆ ಕಫದೊಂದಿಗೆ ಕೆಮ್ಮು ಕಾಣಿಸಿಕೊಳ್ಳುತ್ತದೆ. ಕಸಕಸ ಶಬ್ದದೊಂದಿಗೆ, ಗಂಟಲು ಕೆರೆತ, ಎದೆಗೂಡು, ಪಕ್ಕೆಗಳಲ್ಲಿ ನೋವು ಹಾಗೂ ಜಿಗುಟಾದ ಕಫದಿಂದ ಕೆಮ್ಮು ಬಹಳ ಕಿರಿಕಿರಿ ತರುತ್ತದೆ. ಧೂಳು, ಹೊಗೆ, ಮಂಜು, ಮಾಲಿನ್ಯದಲ್ಲಿ ವಿಹಾರ, ಅತಿಶೀತ, ಜಿಡ್ಡು, ಟಾನ್ಸಿಲ್ ಹಾಗೂ ಕಿರುನಾಲಿಗೆಯ ಉರಿಯೂತ ಕೆಮ್ಮಿಗೆ ಕಾರಣಗಳು.
ಮನೆ ಮದ್ದೇನು?
- ಅಳಲೆಕಾಯಿ ಸಿಪ್ಪೆಯನ್ನು ಸಾಣೆಕಲ್ಲಿನಲ್ಲಿ ತೇಯ್ದು 1/4 ಭಾಗವನ್ನು ಜೇನು ತುಪ್ಪದೊಂದಿಗೆ ಬೆಳಗ್ಗೆ ಮತ್ತು ರಾತ್ರಿ ನೆಕ್ಕಬೇಕು. ಮಕ್ಕಳಿಗೆ 1/4 ಕಾಯಿಗಿಂತ ಕಡಿಮೆ ಭಾಗದಿಂದ ಸಿಪ್ಪೆ ತೇಯಬೇಕು.
- ಕಫ ಬರುವ ಕೆಮ್ಮಿಗೆ 15-20 ಕಾಳು ಮೆಣಸನ್ನು ಒಂದು ಲೋಟ ನೀರಲ್ಲಿ ಸ್ವಲ್ಪ ಬೆಲ್ಲದೊಂದಿಗೆ ಸೇರಿಸಿ 1/2ದಷ್ಟು ಆಗುವವರೆಗೆ ಕುದಿಸಿ ಕಷಾಯ ಮಾಡಿ 2 ಚಮಚದಷ್ಟು ದಿನಕ್ಕೆರಡು ಬಾರಿ ನೀಡಿ.
- ಒಂದು ಹಿಡಿ ತುಳಸಿ ಎಲೆ, ಒಂದು ಹಿಡಿ ಆಡುಸೋಗೆ ಎಲೆ ಹಾಗೂ ಒಂದು ಚಮಚ ಒಣಶುಂಠಿ ಪುಡಿಯನ್ನು, ಎರಡು ಲೋಟ ನೀರಿನಲ್ಲಿ ಹಾಕಿ, ಒಂದು ಲೋಟ ಆಗುವವರೆಗೆ ಕುದಿಸಿ, ಪ್ರತಿಸಲ 1/4 ಲೋಟದಂತೆ ದಿನಕ್ಕೆ 4 ಬಾರಿ ಖಾಲಿ ಹೊಟ್ಟೆಯಲ್ಲಿ ಸೇವಿಸಿ.
ಹಸಿ ಈರುಳ್ಳಿಯ ಒಂದು ಚಮಚ ರಸಕ್ಕೆ ಒಂದು ಚಮಚ ಬೆಲ್ಲ ಸೇರಿಸಿ ಸೇವಿಸಿ.
- 4-5 ಲವಂಗವನ್ನು ಹುರಿದು ಒಂದು ಚೂರು ಬೆಲ್ಲದೊಂದಿಗೆ ತಿನ್ನಿ.
- ತುಳಿಸಿ ರಸ 5 ಮಿ.ಲೀ. ಅಥವಾ 5 ಮಿ.ಲೀ. ಆಡುಸೋಗೆ ರಸದೊಂದಿಗೆ 5.ಮಿ.ಲೀ. ಜೇನುತುಪ್ಪ ಸೇರಿಸಿ ತೆಗೆದುಕೊಳ್ಳಿ.
ಏನು ಬೇಕು? ಬೇಡ?
ಅಕ್ಕಿ, ಬಾರ್ಲಿ, ಗೋದಿ, ಹೆಸರುಕಾಳು, ಹುರುಳಿ, ಉದ್ದು, ಬದನೆ, ಎಲೆಕೋಸು, ಬೆಳ್ಳುಳ್ಳಿ, ಒಣದ್ರಾಕ್ಷಿ, ಪಡವಲಕಾಯಿ, ಎಳೆ ಮೂಲಂಗಿ, ನೆಲ್ಲಿಕಾಯಿ, ಬಿಸಿನೀರು, ಶುಂಠಿಸಹಿತ ಹಾಲು, ಶುಂಠಿ ಸೇರಿಸಿದ ಮಜ್ಜಿಗೆ, ಉಪ್ಪು, ಕಾಳುಮೆಣಸು, ಜೀರಿಗೆ, ಕೊತ್ತಂಬರಿ ಬೀಜ, ಅರಿಶಿನ, ಬಿಸಿ ಆಹಾರವನ್ನು ಬಳಸಿದರೆ ಕೆಮ್ಮು ಬೇಗ ಶಮನವಾಗುತ್ತದೆ.
ಸಾಸಿವೆ, ಬಸಳೆ, ಸೋರೆಕಾಯಿ, ಹುಳ್ಳಿ ಹಣ್ಣು, ಬಾಳೆಹಣ್ಣು, ಕಲ್ಲಂಗಡಿ, ಸೀತಾಫಲ, ಹುಳಿ ಮಜ್ಜಿಗೆ, ಮೊಸರು, ತಂಪು ಪಾನೀಯ, ಹಾಲು ಹಾಗೂ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸಂಪೂರ್ಣವಾಗಿ ತ್ಯಜಿಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


