ಹಾಗಲ ಕನಸು
ಸೌತೆಕಾಯಿಯಂಥ ಕ್ಯುಕಬರ್‌ತೇಸಿಯೇ ಜಾತಿಗೆ ಸೇರಿದ ಹಾಗಲಕಾಯಿ ರುಚಿಯಲ್ಲಿ ಅತಿ ಕಹಿ.

ಇಂಗ್ಲಿಷಿನಲ್ಲಿ ಬಿಟರ್‌ಗಾರ್ಡ್ ಎಂದು ಕರೆಯಿಸಿಕೊಳ್ಳುವ ಸೌತೆಕಾಯಿಯಂಥ ಕ್ಯುಕಬರ್‌ತೇಸಿಯೇ ಜಾತಿಗೆ ಸೇರಿದ ಹಾಗಲಕಾಯಿ ರುಚಿಯಲ್ಲಿ ಅತಿ ಕಹಿ.
ಪಾವಕ್ಕಾ, ಕರೇಲಾ ಎಂಬ ವಿವಿಧ ಹೆಸರುಗಳಿಂದ ಕರೆಯಿಸಿಕೊಳ್ಳುವ ಇದು 5 ಮೀ.ವರೆಗೂ ಬೆಳೆಯಬಲ್ಲುದು. ಏಷ್ಯಾ, ಆಫ್ರಿಕ ಹಾಗೂ ವೆಸ್ಟ್‌ಇಂಡೀಸ್ ದ್ವೀಪಗಳಲ್ಲಿ ಹೆಚ್ಚಾಗಿ ಬೆಳೆಯುವ ಈ ತರಕಾರಿ ಮಧುಮೇಹಕ್ಕೆ ರಾಮಬಾಣ.
ತುಸು ವಾಸನೆಯುಕ್ತ ಎಲೆಗಳನ್ನು ಹೊಂದಿರುವ ಇದು 4-12 ಸೆಂ.ಮೀ.ನಷ್ಟು ಅಡ್ಡವಾಗಿ ಪರ್ಯಾಯ ಎಲೆಗಳನ್ನು, ಜತೆಗೆ 2-7ರಷ್ಟು ಆಳವಾದ ಪ್ರತ್ಯೇಕಗೊಂಡ ಹಾಲೆಗಳನ್ನು ಹೊಂದಿರುತ್ತದೆ. ಪ್ರತಿ ಸಸ್ಯವೂ ಹಳದಿ ಗಂಡು ಹಾಗೂ ಹೆಣ್ಣು ಹೂವುಗಳನ್ನು ಹೊಂದಿರುತ್ತದೆ. ಅಡ್ಡ ಭಾಗದಲ್ಲಿ ಟೊಳ್ಳಾಗಿರುವ ಈ ಕಾಯಿದೊಡ್ಡದಾದ, ಚಪ್ಪಟೆಯಾಕಾರದ ಬೀಜಗಳನ್ನು ಹೊಂದಿ, ಸಾಮಾನ್ಯವಾಗಿ ಹಸಿರಾಗಿರುವಾಗ ಅಥವಾ ಹಳದಿ ಬಣ್ಣಕ್ಕೆ ತಿರುಗಲು ಆರಂಭವಾದಾಗ ಸೇವಿಸಲು ಯೋಗ್ಯವಾಗಿರುತ್ತದೆ.
ಅಡುಗೆಗೂ ಸೈ
ಪಕ್ವವಾಗುತ್ತಿದ್ದಂತೆ ತಿರುಳು ದಪ್ಪವಾಗಿ ಹೆಚ್ಚು ಕಹಿಯಾಗುತ್ತದೆ. ಮತ್ತೊಂದೆಡೆ ತಿರುಳು ಬಹಳ ಮೃದು ಹಾಗೂ ತೀವ್ರ ಕೆಂಪಾಗುತ್ತದೆ. ಈ ಹಂತದಲ್ಲಿ ಇದನ್ನು ಸಲಾಡ್ ರೂಪದಲ್ಲಿಯೂ ಬಳಸಬಹುದು. ಆಗ್ನೇಯ ಏಷ್ಯನ್ ಸಲಾಡ್‌ಗಳಲ್ಲಿ ಇದು ಅತ್ಯಂತ ಜನಪ್ರಿಯ.
ಭಾರತದಲ್ಲಿ ಹಾಗಲಕಾಯಿಯನ್ನು ಪಲ್ಯ ಹಾಗೂ ರಸಂಗಳಲ್ಲಿ ಬಳಸುವುದನ್ನು ಕಾಣಬಹುದು. ಉತ್ತರ ಭಾರತದಲ್ಲಿ ಸಾಮಾನ್ಯವಾಗಿ ಆಲೂಗಡ್ಡೆಯೊಂದಿಗೆ ಇದನ್ನೂ ಸೇರಿಸಿ ಖಾದ್ಯ ತಯಾರಿಸುತ್ತಾರೆ. ಕಹಿ ಕಡಿಮೆ ಮಾಡಲು ಮೊಸರಿನೊಂದಿಗೆ ಬಳಸುತ್ತಾರೆ. ಪಂಜಾಬಿ ಪಾಕ ಪದ್ಧತಿಯಲ್ಲಿ ಇದಕ್ಕೆ ಮಸಾಲೆ ತುಂಬಿ ಎಣ್ಣೆಯಲ್ಲಿ ಕರಿಯಲಾಗುವುದು. ಇತರೆ ಜನಪ್ರಿಯ ಖಾದ್ಯಗಳಲ್ಲಿ ಇದನ್ನು ಕಡಲೆಯೊಂದಿಗೆ ಹುರಿಯಲಾಗುವುದು. ವಿಯೆಟ್ನಾಂ, ಇಂಡೋನೇಷ್ಯಾ, ಜಪಾನ್ ಮುಂತಾದ ದೇಶಗಳಲ್ಲಿ ಹಾಗಲವನ್ನು ವರ್ಷಾಚರಣೆಯ ಸಂದರ್ಭದಲ್ಲಿ ದೀರ್ಘಾಯುಷ್ಯದ ಮೂಲಮಂತ್ರವಾಗಿ ಬಳಸಲಾಗುತ್ತಿದೆ.
ಹಾಗಲ ಔಷಧಿಗೂ ಜೈ
- ಪಚನಶಕ್ತಿಯನ್ನು ಚುರುಕುಗೊಳಿಸಿ ಅಜೀರ್ಣ ಹಾಗೂ ಮಲಬದ್ಧತೆ ಸಮಸ್ಯೆಯ ಚಿಕಿತ್ಸೆಗೆ ಸಹಕಾರಿಯಾಗಿದೆ.
- ರಸವು ನೇಮಟೊಡ್ ವರ್ಗದ ಲಾಡಿಯಂಥ ಹುಳುವಿನ ವಿರುದ್ಧ ಚುರುಕುಗೊಂಡಿರುವುದು ಕಂಡುಬಂದಿದೆ.
- ಮಧುಮೇಹಕ್ಕೆ ರಾಮಬಾಣ. ಇದರ ಎಲೆಗಳಿಂದ ತಯಾರಿಸಿದ ಟೀ, ಮಧುಮೇಹವನ್ನು ಶಮನಗೊಳಿಸುತ್ತದೆ.
- ಇದು ಇನ್ಸುಲಿನ್ ಸೂಕ್ಷ್ಮ ಸಂವೇದನೆಯನ್ನು ಹೆಚ್ಚಿಸುತ್ತದೆಯೆಂದು ಪತ್ತೆಹಚ್ಚಲಾಗಿದೆ.
- ಹಾಗಲಕಾಯಿಯನ್ನು ಭೇದಿ, ಉದರಶೂಲೆ, ಜ್ವರ, ಸುಟ್ಟಗಾಯಗಳು, ತುರಿಕೆ, ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಚರ್ಮದ ಇತರೆ ಸಮಸ್ಯೆಗಳನ್ನು ಒಳಗೊಂಡಂತೆ ಹಲವಾರು ಅಸ್ವಸ್ಥತೆಗಳಲ್ಲಿ ಚಿಕಿತ್ಸೆಗಾಗಿ ಬಳಸಲಾಗುತ್ತದೆ.
- ಸುಜಾತ.ಕೆ. ಹಕ್ಲಾಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


