ಹ್ಯಾಪಿ ಪೀರಿಯಡ್ಸ್

ಅಯ್ಯೋ, ಹೆಣ್ಣಾಗಿ ಯಾಕಾದ್ರೂ ಹುಟ್ಟಿದ್ನೋ ಅನ್ನಿಸೋದು ಮಾಸಿಕ ರಜಸ್ರಾವದ ಸಮಯದಲ್ಲಿ. ಕೆಲವರಿಗೆ ಓಕೆ. ಆ ಟೈಮ್ ಯಾತನಾಮಯವಾಗಿದ್ದರಂತೂ ಗೋವಿಂದ. ಆದರೆ, ಕುಟುಂಬ ಹಾಗೂ ಸಮಾಜದ ದೃಷ್ಟಿಯಿಂದ ಹೆಣ್ಣು ತನ್ನ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ತೆಗೆದುಕೊಂಡರೂ ಸಾಲದು.
ಪೀರಿಯಡ್ಸ್‌ನಲ್ಲಿ ಕಾಣಿಸಿಕೊಳ್ಳುವ ನೋವಿಗೆ ರಕ್ತಹೀನತೆ, ಮಲಬದ್ಧತೆ, ಜಂತುಹುಳ, ಗರ್ಭಕೋಶದ ಮಾಂಸಖಂಡಗಳ ಅನಿಯಮಿತ ಹಿಗ್ಗುವಿಕೆ ಹಾಗೂ ಕುಗ್ಗುವಿಕೆ ಪ್ರಮುಖ ಕಾರಣ. ಕಿಬ್ಬೊಟ್ಟೆ, ಸೊಂಟದಲ್ಲಿ ನೋವು, ಕೆಲವೊಮ್ಮೆ ವಾಂತಿ, ತಲೆಸುತ್ತು, ದೈನಂದಿನ ಕಾರ್ಯಗಳನ್ನು ನಿರ್ವಹಿಸಲಾಗದಷ್ಟು ಹಿಂಸೆಯಾಗುತ್ತದೆ.
- ಒಂದು ಲೋಟ ಬಿಸಿನೀರು ಅಥವಾ ಮಜ್ಜಿಗೆಗೆ ತುಪ್ಪದಲ್ಲಿ ಹುರಿದ ಹಿಂಗನ್ನು ಒಂದು ಚಿಟಿಕೆ ಪ್ರಮಾಣದಲ್ಲಿ ಸೇರಿಸಿ, ಸೇವಿಸಿ.
- ಒಂದು ಲೋಟ ಜೀರಿಗೆ ಕಷಾಯಕ್ಕೆ ಬೆಲ್ಲ ಸೇರಿಸಿ ಕುಡಿಯಿರಿ.
- ಗಜ್ಜುಗದ ಬೀಜವನ್ನು ತೇಯ್ದು ಜೇನುತುಪ್ಪದೊಂದಿಗೆ ಸೇವಿಸಿ.
- ಸೋಂಪಿನ ಕಷಾಯವನ್ನು ದಿನಕ್ಕೆರಡು ಬಾರಿ ಕುಡಿಯಿರಿ.
- ಹರಳೆಲೆ, ವೀಳ್ಯದೆಲೆ ಅಥವಾ ಎಕ್ಕದ ಎಲೆಗಳನ್ನು ಎಣ್ಣೆಯಲ್ಲಿ ಬಾಡಿಸಿ ಕೆಳಹೊಟ್ಟೆಯ ಮೇಲೆ ಶಾಖ ಕೊಡಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


