ಭುಜಪೀಡಾಸನ
ಹೀಗೆ ಮಾಡಿ: ಮೊದಲಿಗೆ ನಿಂತುಕೊಂಡು ಕಾಲುಗಳನ್ನು ಅಗಲಿಸಿ. ಬಳಿಕ ಮುಂದಕ್ಕೆ ಬಾಗಿ ಮಂಡಿಗಳನ್ನು ಬಗ್ಗಿಸಿ. ಕಾಲುಗಳ ಮಧ್ಯೆ ಅಂಗೈಗಳನ್ನು ನೆಲದ ಮೇಲೆ ಊರಿಡಿ. ಅವುಗಳ ಮಧ್ಯೆಯೂ ಅಂತರವಿರಲಿ. ತೊಡೆಗಳ ಹಿಂಬದಿಯನ್ನು ಮೇಲ್‌ತೋಳುಗಳ ಹಿಂಬದಿ ಮೇಲೆ ಒರಗಿಸಿಟ್ಟು, ಹೆಗಲು ಮತ್ತು ಮೊಣಕೈಗಳ ಮಧ್ಯಕ್ಕೆ ಬರುವಂತೆ ಮಾಡಿ. ಬಳಿಕ ಉಸಿರನ್ನು ಹೊರ ಬಿಟ್ಟು ನಿಧಾನವಾಗಿ ಕಾಲು ಬೆರಳುಗಳನ್ನು ನೆಲದಿಂದ ಮೇಲಕ್ಕೆ ಎತ್ತಿ. ಈ ಹಂತದಲ್ಲಿ ದೇಹದ ಭಾರ ಕೈಗಳ ಮೇಲೆ ಹಾಕಿ ಸಮತೋಲನ ಕಾಪಾಡಿ. ಬಳಿಕ ಕಾಲುಗಳನ್ನು ಒಂದಕ್ಕೊಂದು ಸಿಕ್ಕಿಸಿ. ಈ ಸ್ಥಿತಿಯಲ್ಲಿ ಸಹಜವಾಗಿ ಉಸಿರಾಡುತ್ತ ನಿಮಗೆ ಎಷ್ಟ ಸಾಧ್ಯವಾಗುತ್ತದೋ ಅಷ್ಟು ಕಾಲ ಇರಲು ಪ್ರಯತ್ನಿಸಿ. ಬಳಿಕ ಕಾಲುಗಳನ್ನು ಒಂದೊಂದಾಗಿ ಹಿಂದಕ್ಕೆ ತಂದು, ಒಂದಕ್ಕೊಂದು ತೊಡರಿಸಿಕೊಂಡಿರುವ ಪಾದಗಳನ್ನು ಬಿಡಿಸಿ, ನೆಲದ ಮೇಲೆ ಊರಿಡಿ. ಬಳಿಕ ತಾಡಾಸನ ಸ್ಥಿತಿಗೆ ಬಂದು, ಸಹಜ ಸ್ಥಿತಿಗೆ ಮರಳಿ.
ಪ್ರಯೋಜನ: ಕೈಗಳು, ಮಣಿಕಟ್ಟುಗಳು, ತೋಳಿನ ಸ್ನಾಯುಗಳಿಗೆ ಬಲ ದೊರೆಯುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

