ಊರ್ಧ್ವಪದ್ಮಾಸನ
ಹೀಗೆ ಮಾಡಿ: ಮೊದಲು ಸಾಲಂಬ ಶೀರ್ಷಾಸನ ಸ್ಥಿತಿಗೆ ಬನ್ನಿ. ಬಳಿಕ ಬಲಪಾದವನ್ನು ಎಡತೊಡೆಯ ಮೇಲೆ, ಎಡಪಾದವನ್ನು ಬಲತೊಡೆಯ ಮೇಲೆ ಸೇರಿಸಿ (ಪದ್ಮಾಸನ ಸ್ಥಿತಿ). ಮಂಡಿಗಳು ಪರಸ್ಪರ ಒತ್ತಿಕೊಂಡು ತೊಡೆಗಳು ನೇರವಾಗಿರಬೇಕು. ಈ ಸ್ಥಿತಿಯಲ್ಲಿ ಆಳವಾಗಿ ಮತ್ತು ಸಮನಾಗಿ ಉಸಿರಾಡುತ್ತ ಅರ್ಧ ನಿಮಿಷದವರೆಗೂ ಇರಲು ಪ್ರಯತ್ನಿಸಿ. ನಂತರ ಕಾಲುಗಳನ್ನು ಬಿಚ್ಚಿ ಶೀರ್ಷಾಸನ ಸ್ಥಿತಿಗೆ ಮರಳಬೇಕು. ಬಳಿಕ ಮತ್ತೆ ಕಾಲುಗಳನ್ನು ಬದಲಾಯಿಸಿ ಪದ್ಮಾಸನ ಸ್ಥಿತಿಗೆ ಬರಬೇಕು. ಮತ್ತೆ ಅರ್ಧ ನಿಮಿಷದವರೆಗೂ ಇರಬೇಕು. ಬಳಿಕ ಕಾಲುಗಳನ್ನು ಬಿಚ್ಚಿ ಶೀರ್ಷಾಸನ ಸ್ಥಿತಿಗೆ ಬಂದು, ಸಹಜ ಸ್ಥಿತಿಗೆ ಮರಳಬೇಕು.
ಪ್ರಯೋಜನ: ಈ ಆಸನ ಮಾಡುವುದರಿಂದ ಎದೆ ಹಿಗ್ಗುವುದು. ಅಲ್ಲದೆ ದೇಹಕ್ಕೆ ಚೈತನ್ಯ ದೊರೆಯುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

