ಏಕಪಾದ ಶೀರ್ಷಾಸನ
ಹೀಗೆ ಮಾಡಿ: ಸಾಲಂಬ ಶೀರ್ಷಾಸನ ಸ್ಥಿತಿಗೆ ಬಂದು, ಬಲಗಾಲು ತಲೆಯ ಮುಂದಕ್ಕೆ ಬರುವಂತೆ ಬಗ್ಗಿಸಬೇಕು. ಆದರೆ, ಬಲಗಾಲನ್ನು ಕೆಳಗೆ ತರುವಾಗ ಎಡಗಾಲು ಸಾಲಂಬ ಶೀರ್ಷಾಸನ ಸ್ಥಿತಿಯಲ್ಲಿರುವಂತೆಯೇ ಇರಬೇಕು. ನಂತರ ಎರಡೂ ಕಾಲುಗಳ ಮಂಡಿಗಳನ್ನು ಮತ್ತು ಹೆಬ್ಬೆರಳುಗಳನ್ನು ಒಂದೇ ರೇಖೆಯಲ್ಲಿರುವಂತೆ ಮಾಡಿ. ಸ್ಪಲ್ಪವೂ ಆಚೆ ಈಚೆ ಹೊರಳಬಾರದು. ಈ ಸ್ಥಿತಿಯಲ್ಲಿ ಆಳವಾಗಿ ಉಸಿರಾಡುತ್ತ 10ರಿಂದ 20 ಸೆಕೆಂಡುಗಳ ಕಾಲ ಇರಬೇಕು. ನಂತರ ಬಲಗಾಲನ್ನು ಮೇಲಕ್ಕೆ ಎತ್ತಿ ಸ್ವಲ್ಪ ಕಾಲ ಶೀರ್ಷಾಸನ ಸ್ಥಿತಿಯಲ್ಲಿರಿ. ನಂತರ ಎಡಗಾಲನ್ನು ನಿಧಾನವಾಗಿ ಕೆಳಕ್ಕೆ ಇಳಿಸಿ, ಆಳವಾಗಿ ಉಸಿರಾಡುತ್ತ 10ರಿಂದ 20 ಸೆಕೆಂಡುಗಳ ಕಾಲ ಇರಬೇಕು.
ಸೂಚನೆ: ಕಾಲುಗಳನ್ನು ಮೇಲೆ ಅಥವಾ ಕೆಳಗೆ ಇಳಿಸುವಾಗ ಮಂಡಿಗಳು ಬಾಗದಂತೆ ನೋಡಿಕೊಳ್ಳಿ.
ಪ್ರಯೋಜನ: ಕುತ್ತಿಗೆ ಹಾಗೂ ಕಿಬ್ಬೊಟ್ಟೆ ನರ, ಸ್ನಾಯುಗಳು ಬಲಗೊಳ್ಳಲು ಈ ಆಸನ ನೆರವಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

