ಆರೋಗ್ಯ-ಜೀವನಶೈಲಿ

ಏಕ ಭ್ರೂಣ ವರ್ಗ

ಏಕ ಭ್ರೂಣ ವರ್ಗ
Published On :

ಐವಿಎಫ್ ವಿಧಾನದಲ್ಲಿ ಸಾಮಾನ್ಯವಾಗಿ ಎರಡು ಭ್ರೂಣಾಂಕುರಗಳನ್ನು ವರ್ಗಾಯಿಸಲಾಗುತ್ತದೆ. ಇದರಿಂದ ಸುಮಾರು ಶೇ.20 ಗರ್ಭಧಾರಣೆಗಳಲ್ಲಿ ಗರ್ಭಪಾತ, ಗರ್ಭವತಿಯಾದಾಗ ಉದ್ವೇಗ, ಆ್ಯಂಟಿ ಪ್ಯಾಟ್ರಮ್ ಹ್ಯಾಮರೇಜ್, ಗೆಸ್ಟೇಷನಲ್ ಡಯಾಬಿಟೀಸ್, ಶಸ್ತ್ರಚಿಕಿತ್ಸಾ ಮೂಲಕ ಹೆರಿಗೆ, ಸೂಕ್ತ ಬೆಳವಣಿಗೆಯಾಗದ ಮಗುವಿನ ಜನನ, ಮಗುವಿನಲ್ಲಿ ಶಾಶ್ವತ ಅಂಗವೈಕಲ್ಯದಂಥ ಸಮಸ್ಯೆಗಳಿರುತ್ತವೆ.
ಏಕ ಭ್ರೂಣಾಂಕುರ ಗರ್ಭಧಾರಣೆಗೆ ಹೋಲಿಸಿದಲ್ಲಿ ಅವಳಿ ಭ್ರೂಣಗಳ ವರ್ಗಾವಣೆಯಿಂದ ಪ್ರಸವ ಪೂರ್ವಮರಣ ಪ್ರಮಾಣ ಆರು ಪಟ್ಟು ಹೆಚ್ಚು. ಇಂಥ ಕೇಸ್‌ಗಳಲ್ಲಿ ನರಸಂಬಂಧಿ ಸಮಸ್ಯೆಗಳು ವಿಶೇಷವಾಗಿ ಸೆರೆಬ್ರಲ್ ಪ್ಲಾಸಿ ಬಹಳ ಕಾಡುತ್ತದೆ.
ಏಕ ಭ್ರೂಣಾಂಕುರ ವರ್ಗಾವಣೆಯು ಅವಳಿ ಬಸಿರನ್ನು ಕಡಿಮೆಗೊಳಿಸಬಹುದು. ಬಹು ಬಸಿರುಗಳ ಅಪಾಯವನ್ನು ಕಡಿಮೆಗೊಳಿಸುವ ಮೂಲವಾಗಿ ಇತ್ತೀಚೆಗೆ ಏಕ ಭ್ರೂಣಾಂಕುರ ವರ್ಗಾವಣೆಯನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಆದಾಗ್ಯೂ, ಬಹುತೇಕ ಜೀವಂತ ಜನನ ಪ್ರಮಾಣದ ಅಪಾಯಗಳ ವಿರುದ್ಧ ಇದನ್ನು ಸಮತೂಗಿಸುವ ಅವಶ್ಯಕತೆಯಿದೆ.

ವಯಸ್ಸು ಮುಖ್ಯ
ಮಹಿಳೆ ತನ್ನದೇ ಅಂಡಾಣುಗಳನ್ನು ಬಳಸುತ್ತಿದ್ದಲ್ಲಿ, ಆಕೆಯ ವಯಸ್ಸು ಅತ್ಯಂತ ಪ್ರಮುಖವಾದ ಪಾತ್ರವಹಿಸುತ್ತದೆ. 35 ವರ್ಷಗಳ ನಂತರ ಯಶಸ್ಸಿನ ಪ್ರಮಾಣವೂ ತಗ್ಗುತ್ತದೆ. ವರ್ಗಾವಣೆಗೊಂಡ ಭ್ರೂಣಾಂಕುರಗಳ ಸಂಖ್ಯೆಗಳನ್ನು ಅವಲಂಬಿಸಿ ಯಶಸ್ಸಿನ ಪ್ರಮಾಣ ಬೇರೆ ಬೇರೆಯಾಗಿ ಕಂಡುಬರುತ್ತದೆ. ಆದಾಗ್ಯೂ, ಏಕಕಾಲಕ್ಕೆ ಹಲವು ಭ್ರೂಣಾಂಕುರಗಳನ್ನು ವರ್ಗಾಯಿಸುವುದು ಜೀವಂತ ಜನನ ಪ್ರಮಾಣದ ಸಂಭವನೀಯತೆಯನ್ನೇನೂ ಹೆಚ್ಚಿಸುವುದಿಲ್ಲ. ಬದಲಾಗಿ ಬಹು ಗರ್ಭಧಾರಣೆ ಹಾಗೂ ಅದರೊಂದಿಗೆ ಸಂಬಂಧಿಸಿದ ಅಪಾಯಗಳನ್ನು ಹೆಚ್ಚಿಸಬಹುದು.

(ಲೇಖಕರು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯ ಬಂಜೆತನ ನಿವಾರಣಾ ಕೇಂದ್ರದ ವಿಶೇಷ ತಜ್ಞರು)

- ಡಾ. ಮನಿಶಾ ಸಿಂಗ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.