ಲಕ್ ವಾ?
ಜಗತ್ತಿನಲ್ಲಿ ಪ್ರತಿ 6 ಸೆಕೆಂಡ್‌ಗೆ ಒಬ್ಬರಿಗೆ ಪಾರ್ಶ್ವವಾಯು! ಆಶ್ಚರ್ಯವಾಗುತ್ತಿದೆಯಲ್ಲ, ಆದರೂ ನಿಜ. ಇಂದಿನ ಒತ್ತಡದ ಬದುಕು, ಬದಲಾದ ಆಹಾರ ಪದ್ಧತಿ, ಧೂಮಪಾನ....

ಜಗತ್ತಿನಲ್ಲಿ ಪ್ರತಿ 6 ಸೆಕೆಂಡ್‌ಗೆ ಒಬ್ಬರಿಗೆ ಪಾರ್ಶ್ವವಾಯು!
ಆಶ್ಚರ್ಯವಾಗುತ್ತಿದೆಯಲ್ಲ, ಆದರೂ ನಿಜ. ಇಂದಿನ ಒತ್ತಡದ ಬದುಕು, ಬದಲಾದ ಆಹಾರ ಪದ್ಧತಿ, ಧೂಮಪಾನ, ಮಾದಕದ್ರವ್ಯ ಸೇವನೆಯಿಂದ ಚಿಕ್ಕ ವಯಸ್ಸಿನವರೂ ಪಾರ್ಶ್ವವಾಯುವಿಗೆ ತುತ್ತಾಗುತ್ತಿದ್ದಾರೆ. ವಿಶ್ವ ಆರೋಗ್ಯ ಸಂಘಟನೆ (ಡಬ್ಲ್ಯುಎಚ್‌ಒ) ಜೂನ್‌ನಲ್ಲಿ ಬಿಡುಗಡೆಗೊಳಿಸಿದ ಅಧ್ಯಯನ ವರದಿ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ 1 ಲಕ್ಷ ಜನರಲ್ಲಿ 130 ಮಂದಿಗೆ ಪಾರ್ಶ್ವವಾಯು ಸಮಸ್ಯೆ ಕಾಡುತ್ತಿದೆ. ವಿಶ್ವಾದ್ಯಂತ 15 ದಶಲಕ್ಷಕ್ಕೂ ಹೆಚ್ಚು ಮಂದಿ ಈ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಪೈಕಿ 5 ದಶಲಕ್ಷ ಮಂದಿ ಶಾಶ್ವತ ಅಂಗ ವೈಕಲ್ಯಕ್ಕೆ ಈಡಾಗುತ್ತಾರೆ.
ಏನಿದು ಪಾರ್ಶ್ವವಾಯು?
'ಮೆದುಳಿನ ಮೇಲೆ ನಡೆಯುವ ದಾಳಿ'ಗೆ ಪಾರ್ಶ್ವವಾಯು ಎನ್ನುತ್ತಾರೆ. ಮಿದುಳಿಗೆ ರಕ್ತ ಪೂರೈಕೆಯಲ್ಲಿ ವ್ಯತ್ಯಯವಾದಾಗ ಇದು ಸಂಭವಿಸುತ್ತದೆ. ಆಮ್ಲಜನಕ ಮತ್ತು ಪೌಷ್ಟಿಕಾಂಶಗಳ ಪೂರೈಕೆಯಲ್ಲಿ ಕೊರತೆ ಉಂಟಾಗಿ ಮಿದುಳಿನ ಕೋಶಗಳು ಸಾಯುತ್ತವೆ. ರಕ್ತದ ಕೊರತೆ ಅಥವಾ ಇಸ್ಕೆಮಿಕ್ ಹಾಗೂ ರಕ್ತ ಸ್ರಾವದಿಂದಾಗುವ (ಹೆಮೋರಾಜಿಕ್) ಪಾರ್ಶ್ವವಾಯು (ಲಕ್ವ) ಎಂಬ ಎರಡು ಬಗೆಗಳಿವೆ.
ಲಕ್ಷಣಗಳೇನು?
- ನಡೆದಾಡಲು ಸಮಸ್ಯೆ: ನಡೆಯುವಾಗ ಸಮತೋಲನ ತಪ್ಪುತ್ತದೆ.
- ಮಾತನಾಡಲು ಆಗದು: ಮಾತನಾಡುವುದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ.
- ಮುಖ, ತೋಳು, ಕಾಲು ಇವುಗಳ ಪೈಕಿ ಒಂದರಲ್ಲಿ ಬದಿಯಲ್ಲಿ ಹಠಾತ್ತನೆ ಸೆಳೆಯುವಿಕೆ, ದುರ್ಬಲತೆ ಕಾಣಿಸಿಕೊಳ್ಳುತ್ತದೆ.
- ಒಂದು ಅಥವಾ ಎರಡೂ ಕಣ್ಣುಗಳ ದೃಷ್ಟಿ ಮಂಜಾಗಬಹುದು. ದೃಷ್ಟಿ ಅಥವಾ ಶ್ರಾವ್ಯ ಅಥವಾ ಎರಡೂ ಸಮಸ್ಯೆ ಕಾಣಿಸಿಕೊಳ್ಳಬಹುದು.
- ತೀವ್ರ ಮತ್ತು ಹಠಾತ್ ತಲೆನೋವು.
- ಮೇಲ್ಕಂಡ ಯಾವುದೇ ಲಕ್ಷಣಗಳೂ ಕಾಣಿಸಿಕೊಂಡಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


