ಆರೋಗ್ಯ-ಜೀವನಶೈಲಿ

ಒಳ್ಳೇ ಕೊಬ್ಬು!

ನಮ್ಮ ದೇಹಕ್ಕೆ ಕೊಬ್ಬಿನ ಅಂಶದ ಆಮ್ಲಗಳು ಅಗತ್ಯ. ಈ ಆಮ್ಲಗಳನ್ನು ಸ್ವಂತವಾಗಿ ಉತ್ಪಾದಿಸುವ ಸಾಮರ್ಥ್ಯಶರೀರಕ್ಕೆ ಇಲ್ಲ. ನಾವು ತೆಗೆದುಕೊಳ್ಳುವ...

ಒಳ್ಳೇ ಕೊಬ್ಬು!
Published On :

ನಮ್ಮ ದೇಹಕ್ಕೆ ಕೊಬ್ಬಿನ ಅಂಶದ ಆಮ್ಲಗಳು ಅಗತ್ಯ. ಈ ಆಮ್ಲಗಳನ್ನು ಸ್ವಂತವಾಗಿ ಉತ್ಪಾದಿಸುವ ಸಾಮರ್ಥ್ಯಶರೀರಕ್ಕೆ ಇಲ್ಲ. ನಾವು ತೆಗೆದುಕೊಳ್ಳುವ ಆಹಾರದ ಮೂಲಕವೇ ಈ ಕೊಬ್ಬಿನ ಆಮ್ಲಗಳು ಸಿಗುವುದು. ಅದರಲ್ಲಿಯೂ ಅಗತ್ಯವಾಗಿ ಒಮೇಗಾ 3 ಮತ್ತು ಒಮೇಗಾ 6 ಎನ್ನುವ ವಿಶೇಷ ಕೊಬ್ಬು ನಮ್ಮ ದೇಹಕ್ಕೆ ಬೇಕೇ ಬೇಕು. ಒಮೇಗಾ 3 ಅಂತೂ ಹಲವಾರು ಕಾರಣಗಳಿಂದ ಅಗತ್ಯ. ಇವುಗಳು ಉರಿಯೂತವನ್ನು ಕಡಿಮೆಗೊಳಿಸಿ ಹೃದ್ರೋಗ, ಕ್ಯಾನ್ಸರ್, ಕರುಳಿನ ಉರಿಯೂತ ಮತ್ತು ಸಂಧಿವಾತಗಳಿಂದ ನಮ್ಮನ್ನು ರಕ್ಷಿಸುತ್ತವೆ.
ಕೊಬ್ಬು ಕರಗಿಸುತ್ತದೆ
ನಮ್ಮ ರಕ್ತನಾಳಗಳಲ್ಲಿ ಸಂಚರಿಸುತ್ತಿರುವ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನೂ ಈ ಆಮ್ಲಗಳು ಕಡಿತಗೊಳಿಸುತ್ತವೆ. ಹೀಗಾಗಿ ಅಪಧಮನಿಗಳು ದಪ್ಪವಾಗುವುದನ್ನು ತಡೆಯುತ್ತದೆ. ಖಿನ್ನತೆ, ದಣಿವು, ಏಕಾಗ್ರತೆಯ ಕೊರತೆ ಅಥವಾ ಟೈಪ್ 2 ಡಯಾಬಿಟೀಸ್, ಒಣ ಹಾಗೂ ತುರಿಕೆ ಚರ್ಮ, ಕೀಲುನೋವಿದ್ದರೆ ಗುಣವಾಗಲು ಈ ಒಮೇಗಾ 3 ಬೇಕು. 

ಏನು ಸೇವಿಸಬೇಕು?
ಪ್ರತಿದಿನದ ನಾವು ಸೇವಿಸುವ ಆಹಾರದಲ್ಲಿ ಒಮೇಗಾ 3 ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು. ಕಡು ಹಸಿರು ಎಲೆಯುಕ್ತ ತರಕಾರಿಗಳಾದ ಪಾಲಕ್, ಕುಂಬಳಕಾಯಿ, ನಾರಿನ ಬೀಜಗಳು, ಮೂಂಗ್ ಬೀನ್ಸ್, ಹುರುಳಿಕಾಳುಗಳು, ಕಪ್ಪು ಬೀನ್ಸ್, ವಾಲ್‌ನಟ್, ಫ್ಲಾಕ್ಸ್ ಬೀಜಗಳು ಹಾಗೂ ಕೆಲವು ಜಾತಿಯ ಮೀನುಗಳಲ್ಲಿ  ಒಮೇಗಾ 3 ಇರುತ್ತದೆ. ಒಮೇಗಾ 3 ಸೊಯಾಬೀನ್, ಅಕ್ಕಿ ಹೊಟ್ಟು ಮತ್ತು ಕ್ಯಾನೊಲ್‌ನಂಥ ತೈಲಗಳಲ್ಲಿ ಹೆಚ್ಚು ಸಾಂದ್ರೀಕರಣಗೊಂಡ ಮೂಲದಲ್ಲಿರುತ್ತವೆ.

ಬುದ್ಧಿಮಾಂದ್ಯತೆ ಕಾಡೀತು
ಅಮೆರಿಕದ ಮೇರಿಲ್ಯಾಂಡ್ ವಿವಿಯ ಮೆಡಿಕಲ್ ಸೆಂಟರ್ ಸುಮಾರು 100 ಬಾಲಕರ ಮೇಲೆ ಅಧ್ಯಯನವೊಂದು ನಡೆಸಿದೆ. ಇದರ ಪ್ರಕಾರ ಏಕಾಗ್ರತೆ ಕೊರತೆ ಮತ್ತು ಹೈಪರ್ ಆ್ಯಕ್ಟಿವಿಟಿ ಡಿಸಾರ್ಡರ್ ಇರುವ ಮಕ್ಕಳಲ್ಲಿ ಕಡಿಮೆ ಗುಣಮಟ್ಟದ ಒಮೇಗಾ 3 ಕೊರತೆ ಇರುವುದು ದೃಢಪಟ್ಟಿದೆ. ಒಮೇಗಾ 3 ಕೊಬ್ಬಿನ ಆಮ್ಲಗಳ ಕಡಿಮೆ ಸೇವನೆ ಬುದ್ಧಿಮಾಂದ್ಯತೆಯ ಅಪಾಯವನ್ನೂ ತಂದೊಡ್ಡಬಲ್ಲದು.

ಒಮೇಗಾ 3 ನಮ್ಮ ಆರೋಗ್ಯದ ಸರ್ವತೋಮುಖ ಪ್ರಯೋಜನಗಳನ್ನು ಹೊಂದಿ ರುವ ಪ್ರಕೃತಿಯ ಒಂದು ಕೊಡುಗೆ. ನಾವು ಆಹಾರದಲ್ಲಿ ಪ್ರತಿದಿನ ಸಾಕಷ್ಟು ಈ ಅತ್ಯಗತ್ಯವಾದ ಕೊಬ್ಬಿನ ಆಮ್ಲವನ್ನು ಪಡೆಯುತ್ತಿದ್ದೇವೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

- ವನಿತಾ ಅಶೋಕ್ ಫಿಟ್ನೆಸ್ ಪರಿಣತೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.