ಸ್ಕ್ಯಾಪೋಲ್ಡ್
ಈಗಂತೂ ಹೃದ್ರೋಗ ಸಾಮಾನ್ಯವಾಗಿ ಕಾಡುವ ಆರೋಗ್ಯ ಸಮಸ್ಯೆಗಳಲ್ಲೊಂದು. ಹೃದ್ರೋಗಿಗಳಿಗೆ ನೀಡುವ ಚಿಕಿತ್ಸೆಗಳಲ್ಲಿ 'ಇಂಟರ್ವೆನ್ಷನ್' ಪ್ರಮುಖವಾದದ್ದು. ಇದು ಸರ್ಜಿಕಲ್, ಮೆಡಿಕಲ್ ಪ್ರಕ್ರಿಯೆ. ಭವಿಷ್ಯದಲ್ಲಿ ಹೃದಯಾಘಾತದ ಸಾಧ್ಯತೆಗಳನ್ನು ತಡೆಯುವ ವಿಶೇಷ ಚಿಕಿತ್ಸೆ. ವರ್ಷಗಳಾದಂತೆ ಚಿಕಿತ್ಸೆ ಮತ್ತು ಔಷಧೀಯ ಆರೈಕೆಯೂ ತಾಂತ್ರಿಕ ಮುಂಚೂಣಿಗೆ ತಲುಪಿದೆ. ಸ್ಟೆಂಟ್‌ಟ್ಕ್ರೋಮಿಯಂ ಅಥವಾ ಪ್ಲಾಟಿನಂ ಕ್ರೋಮಿಯಂನ ಜಾಲರಿ (ಬಲೆ) ಸಾಮಾನ್ಯವಾಗಿ ಬಳಕೆಯಾಗುತ್ತಿದೆ. ಆ್ಯಂಜಿಯೊಪ್ಲಾಸ್ಟಿ ಬಲೂನ್‌ನಿಂದ ಬ್ಲಾಕ್ ಅನ್ನು ತೆಗೆದ ಬಳಿಕ ಇದು ಹೃದಯನಾಳವನ್ನು ತೆರೆಯಲಿದೆ.
ಇದೀಗ ಹೊಸ ತಾಂತ್ರಿಕತೆಯ ಅನುಸಾರ ಮೂಡಿರುವ ಸ್ಕ್ಯಾಫ್ಫೋಲ್ಡ್ ಹೊಸ ಮೈಲಿಗಲ್ಲು ಸೃಷ್ಟಿಸುವ ನಿರೀಕ್ಷೆಗಳಿವೆ. ಸ್ಕ್ಯಾಫೋಲ್ಡ್ ಅಳವಡಿಸಿದ ರೋಗಿಗಳು ಸಹಜ ಕಾರ್ಯ ಶೈಲಿಯ ಹೃದಯ ನಾಳವನ್ನು ಅಭಿವೃದ್ಧಿಪಡಿಸಿ ಕೊಂಡಿದ್ದಾರೆ. ಹೃದಯ ತಜ್ಞರ ಚಿಂತನೆಯ ಅನುಸಾರ, ಪೂರ್ಣ ಕಾರ್ಯತತ್ಪರವಾದ ಹೃದಯನಾಳವು ರೋಗಿಗಳಿಗೆ ಹೃದ್ರೋಗ ಸಮಸ್ಯೆಗಳು ಬರುವುದನ್ನು ತಡೆಯಲಿದೆ. ಸಹಜ ಸ್ಥಿತಿಗೆ ಬರುವುದಿಲ್ಲ ಎಂಬಂಥ ನಾಳಗಳೂ ಸ್ಕ್ಯಾಫೋಲ್ಡ್‌ನಿಂದ ಚೇತರಿಸಿಕೊಳ್ಳಲಿವೆ.
ಸ್ಕ್ಯಾಫೋಲ್ಡ್ ಎಂದರೇನು?
ಸ್ಕ್ಯಾಫೋಲ್ಡ್ ಎಂಬುದು ಜೈವಿಕ ಸ್ಟೆಂಟ್ (ಹೃದಯದಲ್ಲಿ ಬ್ಲಾಕ್ ನಿವಾರಿಸಿ ರಕ್ತ ಚಲನೆಯನ್ನು ಸರಾಗಗೊಳಿಸಿದ ಬಳಿಕ ಅಳವಡಿಸುವ ಸಾಧನ). ಸ್ಕ್ಯಾಫೋಲ್ಡ್ ಅನ್ನು ಪಾಲಿಮರ್ ಲೇಪಿತ ಪಾಲಿ-ಡಿ ಮತ್ತು ಜೈವಿಕ ಪಾಲಿಮರ್ ಮತ್ತು ಪಿಎಲ್‌ಎಲ್‌ಎ ಬ್ಯಾಕ್ ಬೋನ್, ಎಲ್‌ಲ್ಯಾಕ್ಟೈಡ್ ಬಳಸಿ ಸ್ಥಾಪಿಸಲಿದ್ದು, ಔಷಧಿಯ ನಿಯಂತ್ರಣ, ಬಿಡುಗಡೆಯ ಕ್ರಮಗಳನ್ನು ನಿರ್ವಹಿಸಲಿದೆ. ಇದನ್ನು ಸಾಮಾನ್ಯ ಸ್ಟೆಂಟ್‌ನಂತೆಯೇ ಅಳವಡಿಸಲಿದ್ದು, ನಾಳವನ್ನು ತೆರೆದಂತಿರಿಸಲಿದೆ. ಎರಡು ವರ್ಷಗಳ ಕಾಲ ಇದನ್ನು ಹೀಗೆಯೇ ಇರಿಸಬಹುದು. ಈ ಅವಧಿಯಲ್ಲಿ ಹೃದಯ ನಾಳ ಸಹಜ ಸ್ಥಿತಿಗೆ ಮರಳಲಿದೆ. ಸ್ಕ್ಯಾಫ್ಫೋಲ್ಡ್ ಸಾಮಾನ್ಯ ಹೃದಯ ನಾಳದಂತೆಯೇ ಕಾರ್ಯ ನಿರ್ವಹಿಸಲಿದೆ.
- ಶೇ. 8-10 ನಗರವಾಸಿಗಳಿಗೆ ಹೃದ್ರೋಗದ ತೊಂದರೆ
- ಶೇ. 3-4 ಗ್ರಾಮೀಣರಿಗೆ ಹೃದಯದ ಸಮಸ್ಯೆ
- ಶೇ. 33.5 ಸಾವುಗಳಿಗೆ ಸಿಎಚ್‌ಡಿ (ಕಾಮನ್ ಹಾರ್ಟ್ ಡಿಸೀಸ್) ಕಾರಣ
- 1960-2002 ಅವಧಿಯಲ್ಲಿ ಹೃದ್ರೋಗಿಗಳ ಸಂಖ್ಯೆ ದುಪ್ಪಟ್ಟು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

