ಆರೋಗ್ಯ-ಜೀವನಶೈಲಿ

ಗುಣಸಂಧಿ

ಗುಣಸಂಧಿ
Published On :

ಅಬ್ಬಾ, ಸಂಧಿವಾತದಿಂದ ಬಳಲುತ್ತಿರುವವರಿಗೆ ನೋವೇ ನಿತ್ಯ ಜೀವನ. 'ದೇವರು ಬೇಗ ಸಾವು ಕೊಡಲಿ' ಎಂಬುದೇ ಅವರ ನಿತ್ಯ ಪ್ರಾರ್ಥನೆ.
ಬೈ ಲ್ಯಾಟರಲ್ ನೀ ರಿಪ್ಲೇಸ್‌ಮೆಂಟ್ ಶಸ್ತ್ರ ಚಿಕಿತ್ಸೆಯನ್ನು ಮಾಡಿಸಿಕೊಂಡು, ಗಾಲಿ ಕುರ್ಚಿ ನೆರವಿಲ್ಲದೆ ಓಡಾಡಲು ಆರಂಭಿಸಿದ 80ರ ವೃದ್ಧೆಯೊಬ್ಬರಿದ್ದಾರೆ... ನೋವಿನಿಂದ ಇವರೀಗ ಮುಕ್ತವಾಗಿದ್ದಾರೆ. ಸಾಲದ್ದಕ್ಕೆ ಇವರಿಗೆ ಹೃದಯದ ತೊಂದರೆ, ಶುಗರ್ ಸಹ ಇತ್ತು.
ಈ ರೋಗಿಯ ಎರಡೂ ಮಂಡಿಗಳಿಗೆ ತೀವ್ರ ಸ್ವರೂಪದ ಸಂಧಿರೋಗ ಬಾಧಿಸುತ್ತಿತ್ತು. ಕುಂಟುತ್ತಲೇ ನಡೆಯುತ್ತಿದ್ದ ಇವರಿಗೆ ನೋವನ್ನು ತಡೆದುಕೊಳ್ಳಲೂ ಆಗುತ್ತಿರಲಿಲ್ಲ. ಮಂಡಿಗಳು ಮರಗಟ್ಟುತ್ತಿದ್ದವು. ಈ ವೇಳೆ ಮೊಣಕಾಲುಗಳನ್ನು 20 ಡಿಗ್ರಿಗಿಂತಲೂ ಹೆಚ್ಚು ಬೆಂಡು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಪ್ರಾಥಮಿಕ ಪರೀಕ್ಷೆ ನಂತರ, ಅವರ ನೋವಿಗೆ ಮುಕ್ತಿಯನ್ನು ನೀಡಬಹುದಾದ ಒಂದೇ ಒಂದು ಪರಿಹಾರವಾದ ಬೈಲ್ಯಾಟರಲ್ ನೀ ರಿಪ್ಲೇಸ್‌ಮೆಂಟ್ ಶಸ್ತ್ರ ಚಿಕಿತ್ಸೆಯನ್ನು ಮಾಡಿಸಿಕೊಳ್ಳಲು ವೈದ್ಯರು ಸೂಚಿಸಿದರು.

ರೋಗಿಗಿತ್ತು ಹೃದ್ರೋಗ
ಅಗತ್ಯ ಪರೀಕ್ಷೆಗಳನ್ನು ನಡೆಸುವಾಗ ಈ ರೋಗಿಗೆ ಹೃದ್ರೋಗ ಇರುವುದೂ ಪತ್ತೆಯಾಯಿತು. ಮೊದಲು ಹೃದಯದ ತೊಂದರೆಗಳಿಗೆ ಚಿಕಿತ್ಸೆ ನೀಡಿ, ವಾರದ ವಿಶ್ರಾಂತಿ ನಂತರ ಏಕಕಾಲಕ್ಕೆ ಅತ್ಯಂತ ಅಪಾಯಕಾರಿಯಾದ ಬೈಲ್ಯಾಟರಲ್ ಶಸ್ತ್ರ ಚಿಕಿತ್ಸೆಯನ್ನು ನೆರವೇರಿಸಲಾಯಿತು. ಬಲುಬೇಗ ಚೇತರಿಸಿಕೊಂಡ ರೋಗಿ ಈಗ ತಮ್ಮ ಮೊಣಕಾಲುಗಳನ್ನು 90 ಡಿಗ್ರಿಗಳಷ್ಟು ಭಾಗಿಸುತ್ತಾರೆ.
ಸಮಸ್ಯೆಗಳು ಎಂದ ಮೇಲೆ ಅವಕ್ಕೆ ಪರಿಹಾರವೂ ಇರುತ್ತವೆ. ಅದರಲ್ಲೂ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಸೂಕ್ತ ತಜ್ಞರನ್ನು ಸಂಪರ್ಕಿಸಿ ಸರಿ ಮಾಡಿಕೊಳ್ಳಬೇಕಷ್ಟೆ.

ಏನಿದು ಯಶಸ್ವಿ ಚಿಕಿತ್ಸೆ?
ಸಂಪೂರ್ಣ ಮಂಡಿ ಬದಲಾವಣೆ ಅಥವಾ ಟೋಟಲ್ ಕೀ ಆರ್ಥೋಪ್ಲಾಸ್ಟಿಯೊಂದು ಶಸ್ತ್ರಚಿಕಿತ್ಸಾ ಪ್ರಕ್ರಿಯೆ. ನೋವು ಹಾಗೂ ಅಸಾಮರ್ಥ್ಯವನ್ನು ನಿವಾರಿಸಲು ಹಾನಿಗೊಳಗಾದ ಹಾನಿಗೊಳಗಾದ ಮೊಣಕಾಲಿನ ಕೋಬಾಲ್ಟ್- ಕ್ರೋಮಿಯಂ ಹಾಗೂ ಪಾಲಿಎಥಿಲಿನ್ ಎಂಬ ಎರಡು ಘಟಕಗಳನ್ನು ಬದಲಾಯಿಸಲಾಗುವುದು. ಒಂದೊಮ್ಮೆ ಎರಡೂ ಮಂಡಿಗಳಲ್ಲಿ ಸಮನಾಗಿ ತೀವ್ರವಾದ ನೋವು ಮತ್ತು ಜೋಮು ಹಿಡಿಯುವಿಕೆ ಕಂಡುಬಂದಲ್ಲಿ, ಒಂದೇ ಶಸ್ತ್ರ ಚಿಕಿತ್ಸೆಯ ಮೂಲಕ, ಒಂದೇ ಅರಿವಳಿಕೆಯಡಿಯಲ್ಲಿ, ಎರಡೂ ಮಂಡಿಗಳ ಬದಲಾವಣೆ ಪ್ರಕ್ರಿಯೆಯನ್ನು ತಜ್ಞರು ಸೂಚಿಸಬಹುದು. ಶಸ್ತ್ರಚಿಕಿತ್ಸೆಯ ಪುನಶ್ಚೇತನ ಪ್ರಕ್ರಿಯೆಗಳು ಒಂದು ದಿನದ ಆಸ್ಪತ್ರೆ ವಾಸವನ್ನು ಒಳಗೊಂಡಿರುತ್ತವೆ. ಈ ಶಸ್ತ್ರ ಚಿಕಿತ್ಸೆಯನ್ನು ಸೈಮಲ್ಟೇನಿಯಸ್ ಬೈಲ್ಯಾಟರಲ್ ಟೋಟಲ್ ನೀ ರಿಪ್ಲೇಸ್‌ಮೆಂಟ್ ಅಥವಾ ಸಿಂಗಲ್ ಸಿಟ್ಟಿಂಗ್ ಬೈಲ್ಯಾಟರಲ್ ಟೋಟಲ್ ನೀ ರೀಪ್ಲೇಸ್‌ಮೆಂಟ್ ಎಂದೂ ಕರೆಯಲಾಗುತ್ತದೆ.
ಈ ರೀತಿಯ ಚಿಕಿತ್ಸೆಗೆ ವಯಸ್ಸಾದ (60-80 ವರ್ಷ ವಯಸ್ಸಿನೊಳಗಿನವರು) ಹಾಗೂ ಮಂಡಿಗಳಲ್ಲಿ ಹೆಚ್ಚಿನ ರೀತಿಯಲ್ಲಿ ಒಸ್ಟಿಯೊ ಅರ್ಥರೈಟಿಸ್ ಉಂಟಾಗಿ ಬಳಲುತ್ತಿರುವ ರೋಗಿಗಳೇ ಅಧಿಕ ಪ್ರಮಾಣದಲ್ಲಿ ಒಳಗಾಗುತ್ತಾರೆ.

ಭಾರಿ ಪ್ರಯೋಜನ
ಬೈಲ್ಯಾಟರಲ್ ನೀ ರಿಪ್ಲೇಸ್‌ಮೆಂಟ್ ಶಸ್ತ್ರಚಿಕಿತ್ಸೆ ಎರಡೂ ಮಂಡಿಗಳ ಸಂಧಿವಾತದಿಂದ ತೀವ್ರವಾಗಿ ಬಳಲುತ್ತಿರುವ, ವೈದ್ಯಕೀಯ ಚಿಕಿತ್ಸೆಯ ಅವಶ್ಯಕತೆಯನ್ನು ಹೊಂದಿರುವ ರೋಗಿಗಳಿಗೆ ಅಪರಿಮಿತ ಪ್ರಯೋಜನಗಳನ್ನು ನೀಡುತ್ತವೆ.
- ಡಾ.ಜೆ.ವಿ. ಶ್ರೀನಿವಾಸ್,  ಎಲಬು ಮತ್ತು ಕೀಲು ಬದಲಾವಣೆಯ ಶಸ್ತ್ರ ಚಿಕಿತ್ಸಾ ತಜ್ಞ, ಫೋರ್ಟಿಸ್ ಆಸ್ಪತ್ರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.