ಸರ್ವ ವಿಘ್ನ ನಿವಾರಕ ಗಣೇಶ
ಸರ್ವ ವಿಘ್ನಗಳ ನಿವಾರಕ ನಮ್ಮ ಗಣೇಶ.ಈತನು ವಿಘ್ನಗಳನ್ನು ನಿವಾರಿಸುವುದರಿಂದಲೇ ಇವನಿಗೆ ಪ್ರಥಮ ಪೂಜೆ ಸಲ್ಲುತ್ತದೆ. ಯುದ್ಧ ಇಲ್ಲವೇ ಶಾಂತಿ...

ಸರ್ವ ವಿಘ್ನಗಳ ನಿವಾರಕ ನಮ್ಮ ಗಣೇಶ.ಈತನು ವಿಘ್ನಗಳನ್ನು ನಿವಾರಿಸುವುದರಿಂದಲೇ ಇವನಿಗೆ ಪ್ರಥಮ ಪೂಜೆ ಸಲ್ಲುತ್ತದೆ. ಯುದ್ಧ ಇಲ್ಲವೇ ಶಾಂತಿ ಅಥವಾ ದೈನಂದಿನ ವ್ಯವಹಾರ, ಶುಭ ಕಾರ್ಯ ಯಾವುದೇ ಇರಲಿ, ಗಣೇಶನನ್ನು ಪೂಜಿಸದೆ ಇದು ಯಶಸ್ವಿಯಾಗುವುದಿಲ್ಲ ಎಂಬುದು ನಂಬುಗೆ. ಗಣೇಶನನ್ನು ಮೊದಲು ಪೂಜಿಸಬೇಕೆಂದು ನಿರ್ಧರಿಸಿದವನು ಶಿವ. ಯಾರೇ ಆಗಲಿ, ಯಶಸ್ಸನ್ನು ಪಡೆಯಲು ಬಯಸುವವರು ಗಣೇಶನನ್ನು ಪೂಜಿಸಬೇಕು ಮತ್ತು ಗಣೇಶನಿಗೆ ಪ್ರಾಮುಖ್ಯತೆ ಕೊಡದೆ ಇತರ ದೇವರನ್ನು ಪೂಜಿಸುವುದರಿಂದ ಫಲದೊರಕದು ಎಂದು ಶಿವ ಸಂಕಲ್ಪಿಸಿದ.
ಆದಿ ಪೂಜಿತ ವಿಘ್ನ ನಿವಾರಕ ಗಣೇಶ : ಗಣೇಶನಿಗೆ ಮೊದಲ ಪೂಜೆ ಯಾಕೆ ಸಲ್ಲಿಸಬೇಕು ಎಂಬುದರ ಹಿಂದೆ ಒಂದು ಕತೆಯಿದೆ.ಒಮ್ಮೆ ಶಿವನು ತ್ರಿಪುರ ಪಟ್ಟಣಕ್ಕೆ ರಾಕ್ಷಸರೊಂದಿಗೆ ಯುದ್ಧ ಮಾಡಲು ಹೊರಟ. ಆದರೆ ಯುದ್ಧ ಸನ್ನದ್ಧ ಶಿವ ತಾನೇ ರೂಪಿಸಿದ ನಿಯಮವನ್ನು ಮರೆತುಬಿಟ್ಟ. ಯುದ್ದದಲ್ಲಿ ಸೋತು ಭಾರೀ ಮುಖಭಂಗವಾಗುವ ಹಂತಕ್ಕೆ ಶಿವ ತಲುಪಿದ. ಶಿವನ ರಥದ ಚಕ್ರದ ಗೂಟ ಮುರಿದು ರಥ ನಿಂತಿತು. ಅಷ್ಟರಲ್ಲಿ ಶಿವನಿಗೆ ತಾನು ಹೊರಡುವ ಮೊದಲು ಗಣೇಶನಿಗೆ ಪೂಜೆಸಲ್ಲಿಸಲು ಮರೆತಿರುವುದು ನೆನಪಾಯಿತು. ಈ ಕಷ್ಟಕ್ಕೆ ಅದೇ ಕಾರಣ ಎಂದು ತಿಳಿದ ಶಿವನು ಮಗನನ್ನು ಪೂಜಿಸಿದ ಮತ್ತು ಯಶಸ್ವಿಯಾಗಿ ತ್ರಿಪುರಾಂತಕ ಯದ್ಧವನ್ನು ಜಯಿಸಿದನು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


