ಅಡುಗೆ

ಆಲೂ ಜೀರಾ ಫ್ರೈ | Aloo jeera fry Recipe in Kannada

ರುಚಿಕರವಾದ ಆಲೂ ಜೀರಾ ಫ್ರೈ ಮಾಡುವ ವಿಧಾನ...

ಆಲೂ ಜೀರಾ ಫ್ರೈ | Aloo jeera fry Recipe in Kannada
ಆಲೂ ಜೀರಾ ಫ್ರೈ
Published On :

ಬೇಕಾಗುವ ಪದಾರ್ಥಗಳು..

  • ಎಣ್ಣೆ- 2 ಚಮಚ

  • ಜೀರಿಗೆ- 1 ಚಮಚ

  • ಶುಂಠಿ- ಒಂದು ಇಂಚು

  • ಹಸಿಮೆಣಸಿನ ಕಾಯಿ- 2

  • ಅರಿಶಿಣದ ಪುಡಿ- ಸ್ವಲ್ವ

  • ದನಿಯಾ ಪುಡಿ - 1 ಚಮಚ

  • ಆಮ್ಚೂರ್ ಪೌಡರ್- ಕಾಲು ಚಮಚ

  • ಇಂಗು- ಚಿಟಿಕೆ

  • ಉಪ್ಪು- ರುಚಿಗೆ ತಕ್ಕಷ್ಟು

  • ಬೇಯಿಸಿದ ಆಲೂಗಡ್ಡೆ- 2

  • ಕೊತ್ತಂಬರಿ ಸೊಪ್ಪು- ಸ್ವಲ್ಪ

ಮಾಡುವ ವಿಧಾನ...

  • ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಜೀರಿಗೆ ಹಾಕಿ ಚಟ ಪಟಾಯಿಸಿ.

  • ನಂತರ ಸಣ್ಣಗೆ ಹೆಚ್ಚಿದ ಶುಂಠಿ ಮತ್ತು ಹಸಿಮೆಣಸಿಕಾಯಿ ಹಾಕಿ. ಚೆನ್ನಾಗಿ ಮಿಶ್ರಣ ಮಾಡಿ. ಉರಿಯನ್ನು ಸಣ್ಣಗೆ ಮಾಡಿ ಅರಿಶಿನ, ಅಚ್ಚಖಾರದ ಪುಡಿ, ದನಿಯಾ ಪುಡಿ, ಆಮ್ಚೂರ್ ಪೌಡರ್, ಇಂಗು ಹಾಗೂ ಉಪ್ಪನ್ನು ಹಾಕಿ. ಮಸಾಲೆ ಬರ್ನ್ ಆಗದಂತೆ ಹುರಿಯಿರಿ.

  • ಇದೀಗ ಬೇಯಿಸಿ ಸಿಪ್ಪೆ ಸುಲಿದು ಹೆಚ್ಚಿಟ್ಟುಕೊಂಡ ಆಲೂಗಡ್ಡೆಯನ್ನು ಹಾಕಿ. ಆಲೂಗಡ್ಡೆ ಚೂರಾಗದಂತೆ ನಿಧಾನವಾಗಿ ಮಿಶ್ರಣ ಮಾಡಿ.

  • ನಂತರ 2 ಚಮಚ ನೀರು ಬೆರೆಸಿ. ಸಣ್ಣ ಉರಿಯಲ್ಲಿ 5 ನಿಮಿಷ ಹಾಗೇ ಮುಚ್ಚಿಡಿ. ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿದರೆ ರುಚಿಕರವಾದ ಆಲೂ ಜೀರಾ ಫ್ರೈ ಸವಿಯಲು ಸಿದ್ಧ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.