ಅಡುಗೆ

ಎಗ್ ಕುರ್ಮಾ- Egg kurma Recipe in Kannada

ರುಚಿಕರವಾದ ಎಗ್ ಕುರ್ಮಾ ಮಾಡುವ ವಿಧಾನ...

ಎಗ್ ಕುರ್ಮಾ- Egg kurma Recipe in Kannada
ಎಗ್ ಕುರ್ಮಾ
Published On :

ಬೇಕಾಗುವ ಪದಾರ್ಥಗಳು...

  • ಮೊಟ್ಟೆ-6

  • ಈರುಳ್ಳಿ- 1

  • ಟೊಮೆಟೊ- 1

  • ಹಸಿ ಮೆಣಸಿನಕಾಯಿ-1-2

  • ಶುಂಠಿ ಬೆಳ್ಳುಳ್ಳಿ ಪೇಸ್ಟ್-ಅರ್ಧ ಚಮಚ

  • ಅರಿಶಿಣ ಪುಡಿ- 1/4 ಚಮಚ

  • ಅಚ್ಚ ಖಾರದ ಪುಡಿ- 1 ಚಮಚ

  • ದನಿಯಾ ಪುಡಿ- ಅರ್ಧ ಚಮಚ

  • ಕಾಳು ಮೆಣಸಿನ ಪುಡಿ- ಅರ್ಧ ಚಮಚ

  • ಗರಂ ಮಸಾಲ- 1 ಚಮಚ

  • ಎಣ್ಣೆ- 2 ಚಮಚ

  • ಉಪ್ಪು- ರುಚಿಗೆ ತಕ್ಕಷ್ಟು

  • ಕೊತ್ತಂಬರಿ ಸೊಪ್ಪು- ಸ್ಬಲ್ಪ

  • ತೆಂಗಿನ ಕಾಯಿ- ತುರಿದದ್ದು (ಅರ್ಧ ತೆಂಗಿನಕಾಯಿ)

  • ಗೋಡಂಬಿ- 8

  • ಹಸಿಮೆಣಸಿನಕಾಯಿ- 1

  • ಜೀರಿಗೆ- 1/4 ಚಮಚ

  • ಸೋಂಪು- 1/4 ಚಮಚ

  • ಪಲಾವ್ ಎಲೆ- 1

  • ನಕ್ಷತ್ರ ಮೊಗ್ಗುೃ- 1

  • ಲವಂಗ- 2

  • ಚಕ್ಕ- ಅರ್ಧ ಇಂಚಿನಷ್ಟು

  • ಏಲಕ್ಕಿ- 1

  • ಜೀರಿಗೆ 1/4 ಚಮಚ

ಮಾಡುವ ವಿಧಾನ...

  • 6 ಮೊಟ್ಟೆಯನ್ನು ಬೇಯಿಸಿ ಸಿಪ್ಪೆ ಸುಲಿದು ಇಡಿ.

  • ತೆಂಗಿನಕಾಯಿ, ಗೋಡಂಬಿ, ಹಸಿಮೆಣಸಿನಕಾಯಿ, ಜೀರಿಗೆ, ಸೋಂಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಇದೀಗ ಪ್ಯಾನ್‌ಗೆ ಎಣ್ಣೆ ಹಾಕಿ ಬಿಸಿ ಮಾಡಿ, ಎಣ್ಣೆ ಬಿಸಿಯಾದಾಗ ಪಲಾವ್ ಎಲೆ, ನಕ್ಷತ್ರ ಮೊಗ್ಗು, ಲವಂಗ, ಜೀರಿಗೆ, ಏಲಕ್ಕಿ, ಚಕ್ಕೆ 1 ನಿಮಿಷ ಸೌಟ್‌ನಿಂದ ಆಡಿಸಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ ಹಾಕಿ ಮಿಕ್ಸ್‌ ಮಾಡಿ.

  • ಈಗ ಈರುಳ್ಳಿ, ಹಸಿಮೆಣಸಿನ ಹಾಕಿ, ಈರುಳ್ಳಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. ನಂತರ ಟೊಮೆಟೊ ಸೇರಿಸಿ, ಖಾರದ ಪುರಿ, ಕಾಳು ಮೆಣಸಿನ ಪುಡಿ, ದನಿಯಾ ಪುಡಿ, ಗರಂ ಮಸಾಲ ಹಾಕಿ ಮಿಕ್ಸ್ ಮಾಡಿ, ಟೊಮೆಟೊ ಮೆತ್ತಗಾಗುವವರೆಗೆ ಬೇಯಿಸಿ.

  • ಈಗ ರುಬ್ಬಿದ ತೆಂಗಿನಕಾಯಿ ಮಸಾಲೆ ಹಾಕಿ, ಬೇಕಿದ್ದರೆ ಸ್ವಲ್ಪ ನೀರು ಹಾಕಿ, ನಂತರ ಅರಿಶಿಣ ಪುಡಿ ಹಾಗೂ ರುಚಿಗೆ ತಕ್ಕ ಉಪ್ಪು ಸೇರಿಸಿ ಕುದಿಸಿ.

  • ಮಿಶ್ರಣ ಕುದಿ ಬಂದಾಗ ಗ್ಯಾಸ್ ಉರಿ ಕಡಿಮೆ ಮಾಡಿ, ಬೇಯಿಸಿದ ಮೊಟ್ಟೆಗಳನ್ನು ಮಸಾಲೆ ಹಿಡಿಯಲು ಮೇಲ್ಮೈನಲ್ಲಿ ಚಾಕುವಿನಿಂದ ಕಟ್ ಮಾಡಿ ಮಸಾಲೆಗೆ ಹಾಕಿ ಒಮ್ಮೆ ಮೆಲ್ಲನೆ ಮಿಕ್ಸ್‌ ಮಾಡಿ. ಬಳಿಕ 10 ನಿಮಿಷ ಬೇಯಿಸಿದರೆ ರುಚಿಕರವಾದ ಎಗ್‌ ಕುರ್ಮಾ ಸವಿಯಲು ಸಿದ್ಧ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.